ಇಂದೋರ್: ಇಂದೋರ್‌ನ ಮೊಹೋದಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಶಿಬಿರದಲ್ಲಿ 30 ಮಂದಿ ಸೇನಾ ಸಿಬ್ಬಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ.
ಮಹಾರಾಜ ಯಶ್ವಂತರಾವ್ ಹೋಳ್ಕರ್ ಆಸ್ಪತ್ರೆ ಮತ್ತು ಇಂದೋರ್‌ನ ಎಂಜಿಎಂ ಕಾಲೇಜಿನ ಸಹಾಯದಿಂದ ಸ್ಥಾಪಿಸಲಾದ ಶಿಬಿರದಲ್ಲಿ ಪ್ಲಾಸ್ಮಾ ದಾನ ಮಾಡಿದವರಲ್ಲಿ ಬ್ರಿಗೇಡಿಯರ್ ಮಟ್ಟದ ಸೇನಾ ಸಿಬ್ಬಂದಿ ಕೂಡ ಸೇರಿದ್ದಾರೆ.
ನಮ್ಮಲ್ಲಿ ಸೋಂಕಿಗೆ ಒಳಗಾದ ಹಲವಾರು ಜನರು ಚೇತರಿಸಿಕೊಂಡಿದ್ದಾರೆ. ಅವರೆಲ್ಲರೂ ಪ್ಲಾಸ್ಮಾ ದಾನ ಮಾಡಲು ಸ್ವಯಂಪ್ರೇರಿತರಾಗಿದ್ದಾರೆ. ಸೈನ್ಯವು ಜನರಿಗೆ ಸೇರಿದೆ ಮತ್ತು ಅವರಿಗಾಗಿ ನಮ್ಮ ಪ್ರಾಣವನ್ನು ತ್ಯಾಗಮಾಡಲು ನಾವು ಸಿದ್ಧರಿದ್ದೇವೆ. ಜನರಿಗಾಗಿ ನಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಾಧ್ಯವಾದರೆ, ಪ್ಲಾಸ್ಮಾ ದಾನ ಮಾಡುವುದರಲ್ಲಿ ದೊಡ್ಡ ವಿಷಯವೇನೂ ಇಲ್ಲವೆಂದು ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ಅನಂತ್ ನಾರಾಯಣನ್ ತಿಳಿಸಿದ್ದಾರೆ.
ಸಂಗ್ರಹಿಸಿದ ಪ್ಲಾಸ್ಮಾ ಸುಮಾರು 60ಕೋವಿಡ್ -19 ರೋಗಿಗಳಿಗೆ ರೋಗವನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಎಂಜಿಎಂ ಕಾಲೇಜಿನ ಮುಖ್ಯ ಪ್ರಾಧ್ಯಾಪಕ ಮತ್ತು ಮಹಾರಾಜ ಯಶ್ವಂತರಾವ್ ಹೋಳ್ಕರ್ ಆಸ್ಪತ್ರೆಯ ಡಾ.ಅಶೋಕ್ ಯಾದವ್ ಹೇಳಿದ್ದಾರೆ.
ಇದು ಒಂದು ವಿಶಿಷ್ಟ ಶಿಬಿರವಾಗಿದೆ. ಕೋವಿಡ್-19 ಸೋಂಕಿಗೆ ಒಳಗಾದ ಮತ್ತು ಈಗ ಚೇತರಿಸಿಕೊಂಡಿರುವ ಜನರು ಪ್ಲಾಸ್ಮಾವನ್ನು ದಾನ ಮಾಡುತ್ತಿದ್ದಾರೆ. 30 ಜನ ಸೇನಾ ಸಿಬ್ಬಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಇದು ಸುಮಾರು 60 ಕೋವಿಡ್-19 ಸೋಂಕಿತ ರೋಗಿಗಳಿಗೆ ರೋಗವನ್ನು ಎದುರಿಸಲು ಸಹಾಯ ಮಾಡುತ್ತದೆ. ನಾವು ಪ್ಲಾಸ್ಮಾ ಸಂಗ್ರಹಿಸುವಲ್ಲಿ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಡಾ. ಅಶೋಕ್ ಯಾದವ್ ತಿಳಿಸಿದ್ದಾರೆ.