ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಕಚೇರಿಯ ಕಿರಿಯ ಸಹಾಯಕ ಕೊರೊನಾ ಸೋಂಕಿಗೆ ತುತ್ತಾದ ಬೆನ್ನಲ್ಲೇ ಮತ್ತೆ ಮೂವರಲ್ಲಿ ಪತ್ತೆಯಾಗಿದೆ.
ಲೆಫ್ಟಿನೆಂಟ್ ಗವರ್ನರ್ ಕಾರ್ಯಾಲಯದಲ್ಲಿ ಈವರೆಗೆ ನಾಲ್ವರಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳಲ್ಲಿ ಕಚೇರಿಯ ಎಲ್ಲಾ ಸಿಬ್ಬಂದಿ ಕೊರೊನಾ ಪರೀಕ್ಷೆಗೆ ಒಳಗಾಗಬಹುದು ಎಂದು ಮೂಲಗಳು ತಿಳಿಸಿವೆ.
ಇಬ್ಬರು ಕಿರಿಯ ಸಹಾಯಕರು ಮತ್ತು ಕಚೇರಿ ಸ್ವಚ್ಛಗೊಳಿಸುತ್ತಿದ್ದ ಓರ್ವ ಕಾರ್ಮಿಕ ಕೊರೊನಾ ಸೋಂಕಿಗೆ ತುತ್ತಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ನವದೆಹಲಿಯಲ್ಲಿ ಗುರುವಾರ ಒಂದೇ ದಿನ 1,024 ಪ್ರಕರಣಗಳು ಪತ್ತೆಯಾಗಿದ್ದವು.