ಉತ್ತರಾಖಂಡ: ಭೂಕುಸಿತದಿಂದಾಗಿ ಬಂಡೆಗಳು ಉರುಳಿಬಿದ್ದ ಪರಿಣಾಮ ಕಿರಿಯ ಎಂಜಿನಿಯರ್ ಹಾಗೂ ಅವರ ಸಹಾಯಕ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ರಸ್ತೆ ಅಗಲೀಕರಣ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಘಟನೆ ನಡೆದಿದೆ. ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ ಎಂದು ಚಮೋಲಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಎನ್. ಜೋಶಿ ತಿಳಿಸಿದ್ದಾರೆ.
ಮೃತ ಕಿರಿಯ ಎಂಜಿನಿಯರ್ ಮತ್ತು ಅವರ ಸಹಾಯಕ, ಚಮೋಲಿಯ ನಿವಾಸಿಗಳಾಗಿದ್ದು, ಇನ್ನೊಬ್ಬರು ಹಿಮಾಚಲ ಪ್ರದೇಶದ ಚಂಬಾ ಮೂಲದ ಅರ್ಥ್ ಮೂವರ್ ಮೆಷಿನ್ ಆಪರೇಟರ್ ಆಗಿದ್ದಾರೆ.