ETV Bharat / bharat

ಗಡಿಯಲ್ಲಿ 3 ಹೆಲಿಪ್ಯಾಡ್‌ ನಿರ್ಮಿಸುತ್ತಿದೆ ನೇಪಾಳ: ಇದು ಭಾರತಕ್ಕೆ ನೀಡಿದ ಎಚ್ಚರಿಕೆಯಾ?

author img

By

Published : Aug 6, 2020, 2:05 PM IST

ಇಂಡೋ ನೇಪಾಳ ಗಡಿಯ ಸಮೀಪದ ನೇಪಾಳ ಪ್ರದೇಶದಲ್ಲಿ 3 ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗುತ್ತಿದೆ. ವಾಲ್ಮೀಕಿ ನಗರದ ಪಕ್ಕದಲ್ಲಿ ಎರಡು ಹೆಲಿಪ್ಯಾಡ್‌ಗಳು ಮತ್ತು ಒಂದು ಹೆಲಿಪ್ಯಾಡ್ ಯುಪಿ ಗಡಿಯಲ್ಲಿದೆ.

Helipads to be built on Indo-Nepal border
ಬೆತಿಯಾ: ಇಂಡೋ ನೇಪಾಳ ಗಡಿಯಲ್ಲಿ 3 ಹೆಲಿಪ್ಯಾಡ್‌ಗಳ ನಿರ್ಮಾಣ..

ಬೆತಿಯಾ/ವಾಲ್ಮೀಕಿ ನಗರ: ನೇಪಾಳ ಭಾರತದೊಂದಿಗೆ ಇತ್ತೀಚೆಗೆ ಸಂಬಂಧ ಹದಗೆಡಿಸಿಕೊಂಡಿದೆ. ಭಾರತದ ಮೇಲೆ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಉತ್ಸಾಹ ತೋರುತ್ತಿದೆ. ಈ ಮಾತಿಗೆ ಇಂಬು ನೀಡುವಂತೆ ಮತ್ತೊಂದು ಸಾಹಸಕ್ಕೆ ನೇಪಾಳ ಇದೀಗ ಕೈ ಹಾಕಿದೆ.

ಇಂಡೋ ನೇಪಾಳ ಗಡಿಯ ಪಕ್ಕದಲ್ಲಿರುವ ನೇಪಾಳ ಪ್ರದೇಶದಲ್ಲಿ 3 ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗುತ್ತಿದೆ. ಗಂಡಕ್ ನದಿಯ ಪಕ್ಕದ ಎರಡೂವರೆ ಕಿ.ಮೀ ದೂರದಲ್ಲಿ ನಿರ್ಮಾಣ ಕಾರ್ಯ ವೇಗವಾಗಿ ಸಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಎಸ್‌ಬಿ ಅಧಿಕಾರಿಗಳು, ಭಾರತೀಯ ಗಡಿ ಪ್ರದೇಶದಲ್ಲಿ ಗಸ್ತು ಹೆಚ್ಚಿಸುವುದರ ಜೊತೆಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Indo-Nepal border
ಭಾರತೀಯ ಗಡಿ ಪ್ರದೇಶದಲ್ಲಿ ಗಸ್ತು ಹೆಚ್ಚಳ

ವಾಲ್ಮೀಕಿ ನಗರದ ಪಕ್ಕದಲ್ಲಿ ಎರಡು ಹಾಗೂ ಉತ್ತರ ಪ್ರದೇಶದ ಗಡಿಯ ಪಕ್ಕದ ಇನ್ನೊಂದು ಹೆಲಿಪ್ಯಾಡ್​ ನಿರ್ಮಾಣ ಮಾಡಿದೆ. ವಾಲ್ಮೀಕಿ ನಗರ ಪ್ರದೇಶದ ಪಕ್ಕದಲ್ಲಿ ನರಸಹಿ ಗ್ರಾಮ ಮತ್ತು ತ್ರಿವೇಣಿ ಬಳಿ ಕ್ರಮವಾಗಿ ಎರಡು ಹೆಲಿಪ್ಯಾಡ್‌ಗಳನ್ನು ಹಾಗೂ ಯುಪಿ ಮಹಾರಾಜ್ ಗಂಜ್ ಜಿಲ್ಲೆಯ ಗಡಿಯಿಂದ 8 ರಿಂದ 10 ಕಿ.ಮೀ ದೂರದಲ್ಲಿರುವ ನೇಪಾಳಿ ಸೇನಾ ಶಿಬಿರದ ನವಲ್ಪರಸಿ ಜಿಲ್ಲೆಯ ಉಜ್ಜೈನಿಯಲ್ಲಿ ಒಂದು ಹೆಲಿಪ್ಯಾಡ್​ ನಿರ್ಮಿಸಲಾಗುತ್ತಿದೆ.

ಇಂಡೋ- ನೇಪಾಳ ಸಂಬಂಧದಲ್ಲಿ ಬಿರುಕು: ಎರಡೂ ದೇಶಗಳ ಜನರು ಗಡಿ ಪ್ರದೇಶದ ಜನರು ಪಾಸ್ಪೋರ್ಟ್ ಇಲ್ಲದೇ ಪ್ರಯಾಣಿಸುತ್ತಿದ್ದರು. ಅಲ್ಲದೇ ಎರಡೂ ರಾಷ್ಟ್ರಗಳ ನಾಗರಿಕರು ಯಾವುದೇ ನಿರ್ಬಂಧಗಳಿಲ್ಲದೇ ಪರಸ್ಪರರ ದೇಶಕ್ಕೆ ಬಂದು ಹೋಗುತ್ತಿದ್ದರು. ಅಲ್ಲದೇ ಉಭಯ ರಾಷ್ಟ್ರಗಳ ನಡುವೆ ಸಾಕಷ್ಟು ಕುಟುಂಬ ಸಂಬಂಧಗಳೂ ಇದ್ದವು. ಆದರೆ, ಈಗ ನೇಪಾಳ ಸರ್ಕಾರದ ಸರ್ವಾಧಿಕಾರಿ ಮನೋಭಾವದಿಂದಾಗಿ ಇವಕ್ಕೆಲ್ಲ ಎಳ್ಳು ನೀರು ಬಿಡುವ ಪರಿಸ್ಥಿತಿ ಉದ್ಬವಿಸಿದೆ.

ನೇಪಾಳ ಸರ್ಕಾರ ಗಡಿಯಲ್ಲಿ ಹೆಲಿಪ್ಯಾಡ್​ ನಿರ್ಮಾಣ ಮಾಡುತ್ತಿರುವ ಬಗ್ಗೆ ಮಾತನಾಡಿರುವ, ಎಸ್‌ಎಸ್‌ಬಿಯ ಕಮಾಂಡರ್ ರಾಜೇಂದ್ರ ಭಾರದ್ವಾಜ್, ಉನ್ನತ ಅಧಿಕಾರಿಗಳಿಗೆ ನೇಪಾಳದ ದುಸ್ಸಾಹಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಗಡಿ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲಾಗಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.