ಉತ್ತರ ಪ್ರದೇಶ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ವೈರಸ್ ರೋಗಿಗಳ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ಇಂದೂ ಹೊಸದಾಗಿ 26 ಕೊರೊನಾ ಪ್ರಕರಣ ವರದಿಯಾಗಿದೆ.
ಕೆಜಿಯಂನಲ್ಲಿ ಇಂದು 610 ಕೊರೊನಾ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 26 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಅವರಲ್ಲಿ 2 ಸಹರಾನ್‌ಪುರದವರು, 1 ಫಿರೋಜಾಬಾದ್, 14 ಮಂದಿ ಆಗ್ರಾದವರು, 9 ಮಂದಿ ಕಾನ್ಪುರದವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಆಗ್ರಾದಿಂದ ದಾಖಲಾದ 14 ರೋಗಿಗಳಲ್ಲಿ 3 ಮಹಿಳೆಯರು,11 ಪುರುಷರು, ಕಾನ್ಪುರದ 9 ರೋಗಿಗಳಲ್ಲಿ 7 ಪುರುಷರು, 2 ಮಹಿಳೆಯರು, ಸಹರಾನ್ಪುರದ ಇಬ್ಬರಲ್ಲಿ ಓರ್ವ ಮಹಿಳೆ ಹಾಗೂ ಓರ್ವ ಪುರುಷ, ಕಾನ್ಪುರದ 9 ರೋಗಿಗಳ ಪೈಕಿ ಎಲ್ಲರೂ ಪುರುಷರು, ಫಿರೋಜಾಬಾದ್ನಿಂದ ಒಬ್ಬರಲ್ಲಿ ಕೊರೊನಾ ಪಾಸಿಟಿವ್ ಲಕ್ಷಣಗಳು ಕಂಡುಬಂದಿದೆ.

ಈ ವರದಿ ಬಂದ ಬಳಿಕ, ಆಗ್ರಾ, ಕಾನ್ಪುರ್, ಸಹರಾನ್ಪುರ್, ಫಿರೋಜಾಬಾದ್ ಈ ಪ್ರದೇಶಗಳನ್ನು ಕೆಂಪು ವಲಯಗಳನ್ನು ಖಾತ್ರಿಪಡಿಸಲಾಗಿದೆ. ಈ ಎಲ್ಲಾ ಕೊರೊನಾ ರೋಗಿಗಳಲ್ಲಿ ಮೊದಲ ಹಂತದ ರೋಗ ಲಕ್ಷಣ ಕಂಡುಬಂದಿದ ಕಾರಣ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.
ಈ ಕೊರೊನಾ ರೋಗಿಗಳ ಪ್ರಕರಣದ ಬಳಿಕ ಉತ್ತರಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿತ ರೋಗಿಗಳ ಸಂಖ್ಯೆ 2,792 ಕ್ಕೆ ಏರಿದೆ. ಇನ್ನು ರಾಜ್ಯಾದ್ಯಂತ ಕ್ವಾರಂಟೈನ್ ಆಗಿರುವವರು 10,970. ಇನ್ನು ಐಸೋಲೇಷನ್ನಲ್ಲಿರುವವರ ಸಂಖ್ಯೆ 2,078. ಇದರಲ್ಲಿ 802 ರೋಗಿಗಳು ಗುಣಮುಖರಾಗಿದ್ದಾರೆ. ಇನ್ನು ಕರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 50.