ಪಣಜಿ: ಇನ್ನೂರ ಅರವತ್ತೈದು ಬ್ರಿಟಿಷ್ ಪ್ರಜೆಗಳನ್ನು ಹೊತ್ತ ವಿಶೇಷ ವಿಮಾನ ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೋಮವಾರ ಬ್ರಿಟನ್ಗೆ ಪ್ರಯಾಣ ಬೆಳೆಸಿತು.
ಕೋವಿಡ್- 19 ಲಾಕ್ ಡೌನ್ ಪ್ರಾರಂಭವಾದ ಬಳಿಕ ರಷ್ಯಾ, ಫ್ರಾನ್ಸ್, ಯುಎಸ್, ಕೆನಡಾ ಸೇರಿದಂತೆ ವಿವಿಧ ದೇಶಗಳ 5 ಸಾವಿರಕ್ಕೂ ಹೆಚ್ಚು ಜನರನ್ನು ವಿಶೇಷ ವಿಮಾನದ ಮೂಲಕ ವಾಪಸ್ ಕಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಗಗನ್ ಮಲಿಕ್, ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿರುವ 27ನೇ ವಿಶೇಷ ವಿಮಾನ ಇದಾಗಿದ್ದು, ಮಾರ್ಚ್ 25 ರಿಂದ ಇದುವರೆಗೆ 5,233 ಪ್ರಯಾಣಿಕರನ್ನು ವಿಶೇಷ ವಿಮಾನದ ಮೂಲಕ ಅವರ ದೇಶಕ್ಕೆ ವಾಪಸ್ ಕಳಿಸುವ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ.