ETV Bharat / bharat

2ನೇ ಹಂತದ ಲೋಕಸಮರ- ಕಣದಲ್ಲಿ 251 ಮಂದಿ ಕ್ರೈಂ ಹಿನ್ನೆಲೆಯ ಅಭ್ಯರ್ಥಿಗಳು..!

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡನೇ ಹಂತದ ಮತದಾನಕ್ಕೆ ದೇಶ ಸಜ್ಜುಗೊಂಡಿದೆ. ಕಣದಲ್ಲಿ ಒಟ್ಟು 1,644 ಅಭ್ಯರ್ಥಿಗಳಿದ್ದಾರೆ. ನ್ಯಾಷನಲ್​​ ಎಲೆಕ್ಷನ್​ ವಾಚ್​​ ಹಾಗು ಅಸೋಸಿಯೇಷನ್​​ ಫಾರ್​​ ಡೆಮಾಕ್ರಟಿಕ್​​​ ರಿಫಾರ್ಮ್ಸ್‌​ ಸಂಸ್ಥೆ 1,590 ಅಭ್ಯರ್ಥಿಗಳ ಬಗ್ಗೆ ಅಧ್ಯಯನ ಮಾಡಿ ಅಪರಾಧ ಹಿನ್ನೆಲೆಯಿರುವ ಅಭ್ಯರ್ಥಿಗಳನ್ನು ಪತ್ತೆ ಹಚ್ಚಿದೆ.

ಲೋಕಸಭಾ ಚುನಾವಣೆ
author img

By

Published : Apr 14, 2019, 12:48 PM IST

ನವದೆಹಲಿ: ಲೋಕಸಭಾ ಚುನಾವಣೆಗೆ ಏಪ್ರಿಲ್ 18ರಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯಿದೆ. ಒಟ್ಟು 13 ರಾಜ್ಯಗಳ 97 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಕ್ರಿಮಿನಲ್ ಹಿನ್ನೆಲೆಯಿರುವ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಇವರ ವಿರುದ್ಧ ಕೊಲೆ, ಮಹಿಳೆಯರ ಮೇಲೆ ದೌರ್ಜನ್ಯ ಹಾಗು ಅಪಹರಣದಂತಹ ಗಂಭೀರ ಸ್ವರೂಪದ ಪ್ರಕರಣವಿದೆ.

ಎರಡನೇ ಹಂತದ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ಹಾಗು ಸ್ವತಂತ್ರವಾಗಿ 1,644 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ನ್ಯಾಷನಲ್​​ ಎಲೆಕ್ಷನ್​ ವಾಚ್​​ ಹಾಗೂ ಅಸೋಸಿಯೇಷನ್​​ ಫಾರ್​​ ಡೆಮಾಕ್ರಟಿಕ್​​​ ರಿಫಾರ್ಮ್​ ಸಂಸ್ಥೆ ಕಣದಲ್ಲಿರುವ ಘಟಾನುಘಟಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಕಣದಲ್ಲಿರುವ 1,590 ಅಭ್ಯರ್ಥಿಗಳ ಪೈಕಿ 251 ಮಂದಿ ವಿರುದ್ಧ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ದಾಖಲಾಗಿರುವುದಾಗಿ ಹೇಳಿದೆ.

ಅಂಕಿ ಅಂಶಗಳ ಪ್ರಕಾರ, ಈ 251 ಅಭ್ಯರ್ಥಿಗಳಲ್ಲಿ ಮೂವರು ಅಭ್ಯರ್ಥಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಇನ್ನು, 25 ಮಂದಿ ವಿರುದ್ಧ ಕೊಲೆಯತ್ನ, 8 ಮಂದಿ ವಿರುದ್ಧ ಕಿಡ್ನ್ಯಾಪ್‌​ ಕೇಸ್‌ ದಾಖಲಾಗಿದೆ.

ಅಪರಾಧ ಹಿನ್ನೆಲೆಯಲ್ಲಿ ಪಕ್ಷಗಳ ಬಲಾಬಲ:

ಅಪರಾಧ ಹಿನ್ನೆಲೆಯಿರುವ ಅಭ್ಯರ್ಥಿಗಳು ಎಲ್ಲಾ ಪಕ್ಷದಲ್ಲೂ ಇರುವುದು ಗೊತ್ತಾಗಿದೆ. ಪ್ರಮುಖ ಪಕ್ಷಗಳ ಪೈಕಿ, ಬಿಜೆಪಿ 16, ಕಾಂಗ್ರೆಸ್​ 23, ಬಿಎಸ್ಪಿ 16, ಎಐಎಡಿಎಂಕೆ 3, ಡಿಎಂಕೆ 11 ಹಾಗೂ ಶಿವಸೇನೆ 11 ಮಂದಿ ಅಪರಾಧ ಪ್ರಕರಣವನ್ನು ಹೊಂದಿದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನುಳಿದಂತೆ ಇತರ ಸಣ್ಣಪುಟ್ಟ ಪಕ್ಷಗಳಲ್ಲೂ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳಿದ್ದಾರೆ.

ಏಳು ಹಂತದ ಲೋಕಸಭಾ ಚುನಾವಣೆ ಏಪ್ರಿಲ್ 11ರಂದು ಆರಂಭವಾಗಿದ್ದು, ಮೇ 19ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಮೇ 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

Intro:Body:

ಲೋಕಸಮರದ ಎರಡನೇ ಹಂತದಲ್ಲಿ 251 ಕ್ರಿಮಿನಲ್​​ಗಳು... !

ನವದೆಹಲಿ: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಏಪ್ರಿಲ್ 18ರಂದು 13 ರಾಜ್ಯಗಳ 97 ಕ್ಷೇತ್ರಗಳಲ್ಲಿ ನಡೆಯಲಿದೆ.

ಎರಡನೇ ಹಂತದ ಚುನಾವಣೆಯಲ್ಲಿ 1644 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನ್ಯಾಷನಲ್​​ ಎಲೆಕ್ಷನ್​ ವಾಚ್​​ ಹಾಗೂ ಅಸೋಸಿಯೇಷನ್​​ ಫಾರ್​​ ಡೆಮಾಕ್ರಟಿಕ್​​​ ರಿಫಾರ್ಮ್​ ಸಂಸ್ಥೆ 1590 ಅಭ್ಯರ್ಥಿಗಳ ಬಗ್ಗೆ ಅಧ್ಯಯನ ನಡೆಸಿದೆ.

1590 ಅಭ್ಯರ್ಥಿಗಳಲ್ಲಿ 251(ಶೇ.61) ಮಂದಿ ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿದ್ದಾರೆ. 167(ಶೇ.11) ಅಪರಾಧಿಗಳಾಗಿದ್ದಾರೆ.

ಮೂವರು ಅಭ್ಯರ್ಥಿಗಳು ಕೊಲೆ ಆರೋಪವಿರುವುದಾಗಿ ಹೇಳಿಕೊಂಡಿದ್ದರೆ, 25 ಮಂದಿ ಕೊಲೆ ಪ್ರಯತ್ನ, 8 ಮಂದಿ ಕಿಡ್ನ್ಯಾಪ್​​ ಸಂಬಂಧ ಆರೋಪ ಹೊಂದಿದ್ದಾರೆ.

ಪಕ್ಷಗಳ ವಿಭಾಗೀಕರಣ:

ಬಿಜೆಪಿಯ 16, ಕಾಂಗ್ರೆಸ್​ನ 23, ಬಿಎಸ್ಪಿಯ 16, ಎಐಎಡಿಎಂಕೆಯ 3, ಡಿಎಂಕೆಯ 11 ಹಾಗೂ ಶಿವಸೇನೆಯ 11 ಮಂದಿ ಅಪರಾಧ ಪ್ರಕರಣವನ್ನು ಹೊಂದಿದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಏಳು ಹಂತದ ಲೋಕಸಭಾ ಚುನಾವಣೆ ಏಪ್ರಿಲ್ 11ರಂದು ಆರಂಭವಾಗಿದ್ದು ಮೇ 19ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.