ಮುಂಬೈ: ದಕ್ಷಿಣ ಮುಂಬೈನ ಐದು ಅಂತಸ್ತಿನ ಹೋಟೆಲ್‌ವೊಂದರಲ್ಲಿ ಬುಧವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದೆ.
ಫಸ್ಟ್ ಮೆರೈನ್ ಸ್ಟ್ರೀಟ್ನ ಮೆಟ್ರೋ ಸಿನಿಮಾ ಮಂದಿರ ಬಳಿಯ ಐದು ಅಂತಸ್ತಿನ ಹೋಟೆಲ್ ಫಾರ್ಚೂನ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಹೋಟೆಲ್ನಲ್ಲಿ ತಂಗಿದ್ದ 25 ಜನ ವೈದ್ಯಕೀಯ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊರೊನಾ ವೈರಸ್ ಹಿನ್ನೆಲೆ ತುರ್ತು ಅಗತ್ಯಗಳಿಗೆ ಬೇಕಾಗುವ ವೈದ್ಯರು, ದಾದಿಯರಿಗೆ ಈ ಹೋಟೆಲ್ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ 8 ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಏಣಿಗಳನ್ನು ಬಳಸಿ ಹೋಟೆಲ್ನಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ.