ETV Bharat / bharat

ಸೈನಿಕರನ್ನೂ ಬಿಡದ ಕೊರೊನಾ ವೈರಸ್: ರಾಜಸ್ಥಾನದ 8 ಯೋಧರಿಗೆ ಸೋಂಕು - rajasthan corona updates

ರಾಜಸ್ಥಾನದ ಅಲ್ವಾರ್​​ನಲ್ಲಿ 25 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಹೆಚ್ಚಿನವರು ರಾಜಸ್ಥಾನ್ ಸಶಸ್ತ್ರ ಪಡೆಯ ಯೋಧರೇ ಆಗಿದ್ದಾರೆ. ಇವರು ಕರ್ತವ್ಯ ನಿಮಿತ್ತ ದೆಹಲಿಗೆ ನಿಯೋಜನೆಗೊಂಡು ನಂತರ ಮೀನಾಪುರ ಕೇಂದ್ರಕ್ಕೆ ವಾಪಸ್ಸಾಗಿದ್ದರು ಎನ್ನಲಾಗಿದೆ.

25-new-corona-positive-patients-revealed-in-alwar
ರಾಜಸ್ಥಾನದ 8 ಯೋಧರಿಗೆ ಸೋಂಕು
author img

By

Published : Jun 13, 2020, 1:40 PM IST

ರಾಮಗಢ(ರಾಜಸ್ಥಾನ) : ರಾಜಸ್ಥಾನದ ಸಶಸ್ತ್ರ ಪಡೆಯ 8 ಸೈನಿಕರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ರಾಜಸ್ಥಾನದ 8 ಯೋಧರಿಗೆ ಸೋಂಕು

ಮೂಲಗಳ ಪ್ರಕಾರ, ಅಲ್ವಾರ್ ರಾಜಸ್ಥಾನ ಸಶಸ್ತ್ರ ಪಡೆಯ ಒಂದು ಬೆಟಾಲಿಯನ್​ ದೆಹಲಿಯಲ್ಲಿ ಬೀಡು ಬಿಟ್ಟಿತ್ತು. ಕರ್ತವ್ಯ ಮುಗಿಸಿದ ನಂತರ ಅಲ್ವಾರ್ ಜಿಲ್ಲೆಯಲ್ಲಿರುವ ಮೀನಾಪುರ ಕೇಂದ್ರಕ್ಕೆ ವಾಪಸ್ಸಾಗಿತ್ತು. ಇದರಲ್ಲಿ 18 ಜನರಿಗೆ ಕೆಮ್ಮು, ಶೀತ ಕಾಣಿಸಿಕೊಂಡಿದ್ದು, ಅವರನ್ನು ಕೊರೊನಾ ಟೆಸ್ಟ್​​ಗೆ ಒಳಪಡಿಸಲಾಗಿತ್ತು. ಇದೀಗ 18 ರಲ್ಲಿ 8 ಜನ ಸೈನಿಕರಿಗೆ ಕೋವಿಡ್​-19 ಪಾಸಿಟಿವ್​​ ಬಂದಿದೆ.

ಇನ್ನೂ 6 ಜನರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಆರ್​​ಸಿ ಬೆಟಾಲಿಯನ್​​ಗೆ ಕೊರೊನಾ ವಕ್ಕರಿಸಿದ ಹಿನ್ನೆಲೆಯಲ್ಲಿ ಮೀನಾಪುರ ಕೇಂದ್ರವನ್ನು ಸ್ಯಾನಿಟೈಸಿಂಗ್​ ಮಾಡಲಾಗುತ್ತಿದೆ. ಒಟ್ಟಾರೆ ಅಲ್ವಾರ್ ​ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಇದೀಗ 215 ಕ್ಕೆ ಏರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.