ETV Bharat / bharat

ಸಿಡಿಲು ಬಡಿದು ಮಹಾರಾಷ್ಟ್ರದ 25 ಜನರಿಗೆ ಗಾಯ - ಹವಾಮಾನ ಇಲಾಖೆ

ಮಹಾರಾಷ್ಟ್ರದಲ್ಲಿ ಸಿಡಿಲು ಬಡಿದು 25 ಜನರು ಗಾಯಗೊಂಡಿದ್ದು, ಮುಂದಿನ ಏಳು-ಎಂಟು ದಿನಗಳ ವರೆಗೆ ಸಿಡಿಲು-ಮಿಂಚು ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

25 injured in lightning strike in Maharashtra's Thane
ಸಿಡಿಲು ಬಡಿದು ಮಹಾರಾಷ್ಟ್ರದ 25 ಜನರಿಗೆ ಗಾಯ
author img

By

Published : Oct 22, 2020, 11:54 AM IST

ಥಾಣೆ (ಮಹಾರಾಷ್ಟ್ರ): ಪ್ರವಾಹಕ್ಕೆ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಸಿಡಿಲು ಬಡಿದು ಆರು ತಿಂಗಳ ಮಗು ಸೇರಿದಂತೆ 25 ಜನರು ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದ ಥಾಣೆಯ ಶಿರೋಲ್​ ಪಂಚಾಯತ್​ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳುಗಳನ್ನು ಶಹಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಡಿಲು ಬಡಿದು ಮಹಾರಾಷ್ಟ್ರದ 25 ಜನರಿಗೆ ಗಾಯ

ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆ ಪ್ರವಾಹ ಪರಿಸ್ಥಿತಿಯನ್ನು ತಂದಿಟ್ಟಿದ್ದು, ಪುಣೆ, ಔರಂಗಾಬಾದ್​ ಹಾಗೂ ಕೊಂಕಣ ವಲಯದಲ್ಲಿ 48 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಎಕರೆ ಬೆಳೆಗಳು, ಸಾವಿರಾರು ಮನೆಗಳು ಜಲಾವೃತವಾಗಿದೆ.

ರಾಜ್ಯದಲ್ಲಿ ವರುಣನ ಆರ್ಭಟ ತಗ್ಗಿದ್ದು, ಮುಂದಿನ ಏಳು-ಎಂಟು ದಿನಗಳ ವರೆಗೆ ಸಿಡಿಲು-ಮಿಂಚು ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದಾಗಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.