ETV Bharat / bharat

ಪ್ರೇಯಸಿಯನ್ನು ಗುಂಡಿಕ್ಕಿ ಕೊಂದು ತಾನೂ ಶೂಟ್​ ಮಾಡಿಕೊಂಡ ಪ್ರೇಮಿ! - ಪ್ರೇಯಸಿಗೆ ಶೂಟ್​ ಮಾಡಿ ಪ್ರಿಯಕರ ಆತ್ಮಹತ್ಯೆ

ಮುಂಬೈನ ಮಲಾಡ್​ ಪ್ರದೇಶದಲ್ಲಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಗುಂಡು ಹಾರಿಸಿ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

man shoots himself after shoots his lover
ಪ್ರೇಯಸಿಗೆ ಶೂಟ್​ ಮಾಡಿದ ಪ್ರಿಯಕರ
author img

By

Published : Jan 5, 2021, 7:22 AM IST

ಮುಂಬೈ/ಮಹಾರಾಷ್ಟ್ರ : ಪ್ರೇಯಸಿಗೆ ಗುಂಡು ಹಾರಿಸಿ ಪ್ರಿಯಕರನೊಬ್ಬ ತಾನೂ ಶೂಟ್​ ಮಾಡಿಕೊಂಡು ಸಾವನ್ನಪ್ಪಿರುವ ಪ್ರಕರಣ ಮಲಾಡ್​ ಏರಿಯಾ ಬಂಗೂರ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರೇಯಸಿಗೆ ಶೂಟ್​ ಮಾಡಿದ ಪ್ರಿಯಕರ..

ಮೃತ 24 ಯುವತಿ ಹಾಗೂ 25 ವರ್ಷದ ಯುವಕ ಇಬ್ಬರೂ ಕಂಡಿವಲಿಯ ಘಾನೋಕರ್ ವಾಡಿ ನಿವಾಸಿಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗ್ತಿದೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಶಾಪಿಂಗ್​ ಮಾಲ್​ವೊಂದರ ಬಳಿ ಪ್ರಿಯಕರ ಯುವತಿಗೆ ಗುಂಡು ಹಾರಿಸಿ, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರ ಮೃತದೇಹಗಳನ್ನು ಶತಾಬ್ಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಚಿವ ದಿಲೀಪ್​ ಅಸ್ಲಾಮ್​ ಶೇಖ್ ನೀಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್​ ಆಯುಕ್ತ ದಿಲೀಪ್​ ಸಾವಂತ್, ಪ್ರೀತಿ ವಿಚಾರದಲ್ಲಿ ಇಬ್ಬರ ನಡುವೆ ವೈಮನಸ್ಸು ಏರ್ಪಟ್ಟು, ಮೃತ ಯುವತಿಗೆ ಬೇರೆ ಯುವಕನೊಂದಿಗೆ ಕೆಲವು ದಿನಗಳ ಹಿಂದೆ ನಿಶ್ಚಿತಾರ್ಥ ನಡೆದಿತ್ತು.

ಇದರಿಂದ ಕೋಪಗೊಂಡ ಪ್ರಿಯಕರ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ. ಇನ್ನು, ನಗರದಲ್ಲಿ ನಡೆದ ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಏರ್ಪಟ್ಟಿದೆ. ಪೊಲೀಸರು ಘಟನಾ ಸ್ಥಳದಲ್ಲಿ ದೊರೆತ ಗನ್‌ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.