ETV Bharat / bharat

24 ಗಂಟೆಯಲ್ಲಿ 8,380 ಪ್ರಕರಣ, ಅತಿ ಹೆಚ್ಚು ಕೇಸ್​ ಪತ್ತೆಯಾದ 7ನೇ ದೇಶವಾದ ಭಾರತ! - ಮಹಾಮಾರಿ ಕೊರೊನಾ

ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್​ ಸೋಂಕು ಹರಡುವ ವೇಗ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಈ ಹಿಂದಿನಿಗಿಂತಲೂ ಅತಿ ಹೆಚ್ಚು ಪ್ರಕರಣ ಕಾಣಿಸಿಕೊಂಡಿವೆ.

COVID case in india
COVID case in india
author img

By

Published : Jun 1, 2020, 3:58 AM IST

ನವದೆಹಲಿ: ದೇಶದಲ್ಲಿ ಹೇರಿಕೆ ಮಾಡಲಾಗಿರುವ ಲಾಕ್​ಡೌನ್​ ಸಡಲಿಕೆ ಮಾಡುತ್ತ ಸಾಗುತ್ತಿದ್ದಂತೆ ಅತಿ ಹೆಚ್ಚು ಕೋವಿಡ್​-19 ಪ್ರಕರಣ ಕಂಡು ಬರುತ್ತಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 8,380 ಹೊಸ ಕೊರೊನಾ ಪ್ರಕರಣ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ. ಇದರ ಜತೆಗೆ 193 ಜನರು ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಇದೀಗ 1.88 ಲಕ್ಷ ಕೋವಿಡ್​ ಪ್ರಕರಣ ಕಂಡು ಬಂದಿದ್ದು, ಜರ್ಮನಿ ಹಾಗೂ ಫ್ರಾನ್ಸ್​​ಗಿಂತಲೂ ಅತಿ ಹೆಚ್ಚು ಕೊರೊನಾ ಸೋಂಕಿತರು ದೇಶದಲ್ಲಿ ಸಿಕ್ಕಿದ್ದಾರೆ. ಈ ಮೂಲಕ ಅತಿ ಹೆಚ್ಚು ಪ್ರಕರಣ ಪತ್ತೆಯಾದ 7ನೇ ದೇಶವಾಗಿ ಭಾರತ ಹೊರಹೊಮ್ಮಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ ಬರೋಬ್ಬರಿ 2,940 ಕೋವಿಡ್​ ಪ್ರಕರಣ ಕಾಣಿಸಿಕೊಂಡಿದ್ದು, ತಮಿಳುನಾಡಿನಲ್ಲಿ 938 ಹಾಗೂ ದೆಹಲಿಯಲ್ಲಿ 1,163 ಕೊರೊನಾ ಪ್ರಕರಣ ಕಾಣಿಸಿಕೊಂಡಿವೆ. ದೇಶದಲ್ಲಿ ಇಲ್ಲಿಯವರೆಗೆ ಡೆಡ್ಲಿ ವೈರಸ್​ನಿಂದ 5,300 ಜನರು ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಹೇರಿಕೆ ಮಾಡಲಾಗಿದ್ದ ಲಾಕ್​ಡೌನ್​ ಇದೀಗ ಮತ್ತಷ್ಟು ಸಡಿಲಗೊಳಿಸಿರುವ ಕಾರಣ ಹೆಚ್ಚು ಹೆಚ್ಚು ಕೋವಿಡ್​-19 ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಕಳೆದ ಮೂರು ದಿನಗಳಲ್ಲಿ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್​ ಬೆಳಕಿಗೆ ಬಂದಿವೆ.

ಜೂನ್​ 8ರಿಂದ ದೇಶದಲ್ಲಿ ಮಾಲ್​, ರೆಸ್ಟೋರೆಂಟ್​, ಹೋಟೆಲ್​ ಓಪನ್​ ಆಗುವುದರಿಂದ ಸೋಂಕು ಮತ್ತಷ್ಟು ಹಬ್ಬುವ ಸಾಧ್ಯತೆ ಇದೆ ಎನ್ನಲಾಗಿದೆ. ಜಾಗತಿಕವಾಗಿ 62.09 ಲಕ್ಷ ಪ್ರಕರಣ ಕಾಣಿಸಿಕೊಂಡಿದ್ದು, ಅಮೆರಿಕದಲ್ಲಿ 18.23 ಲಕ್ಷ, ಸ್ಪೇನ್ 2.86 ಲಕ್ಷ, ಇಟಲಿ 2.33 ಲಕ್ಷ, ಬ್ರಿಟನ್​ 2.74 ಲಕ್ಷ, ರಷ್ಯಾ 4.05ಲಕ್ಷ ಜನರಲ್ಲಿ ಕೋವಿಡ್​​-19 ಸೋಂಕು ಕಾಣಿಸಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.