ETV Bharat / bharat

2021ರ ಮಹಿಳಾ ವಿಶ್ವಕಪ್​: ಟೀಂ ಇಂಡಿಯಾ ಬದಲು ಪಾಕ್​ಗೆ ನೇರ ಪ್ರವೇಶ!? - ಟೀಂ ಇಂಡಿಯಾ ಮಹಿಳಾ ಕ್ರಿಕೆಟ್​​

2021ರಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ನೇರ ಪ್ರವೇಶ ಸಿಗುವುದು ಸ್ವಲ್ವ ಅನುಮಾನವಾಗಿದೆ.

2021 World Cup women
2021 World Cup women
author img

By

Published : Jan 31, 2020, 6:20 PM IST

ಹೈದರಾಬಾದ್​​: ನ್ಯೂಜಿಲ್ಯಾಂಡ್​ ​ ವಿರುದ್ಧ ನಡೆದ ಏಕದಿನ ಕ್ರಿಕೆಟ್​ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಐತಿಹಾಸಿಕ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್​ ಮಹಾಟೂರ್ನಿಯಲ್ಲಿ ನೇರ ಅರ್ಹತೆ ಪಡೆದುಕೊಂಡಿದೆ.

ಇದರ ಜತೆಗೆ ಆಸ್ಟ್ರೇಲಿಯಾ, ಇಂಗ್ಲೆಂಡ್​​ ಸಹ ನೇರ ಅರ್ಹತೆ ಪಡೆದುಕೊಂಡಿರುವ ಕಾರಣ ಮುಂದಿನ ಒಂದು ಸ್ಥಾನಕ್ಕಾಗಿ ಟೀಂ ಇಂಡಿಯಾ ಪೈಟ್​ ನಡೆಸಬೇಕಾಗಿದೆ. ಇದೀಗ ಟೀಂ ಇಂಡಿಯಾ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡಲು ನಿರಾಕರಣೆ ಮಾಡಿದ್ರೆ, 2021ರಲ್ಲಿ ನಡೆಯುವ ಏಕದಿನ ವಿಶ್ವಕಪ್​​ಗೆ ನೇರ ಅರ್ಹತೆ ಪಡೆದುಕೊಳ್ಳುವುದು ಡೌಟ್​ ಆಗಲಿದೆ. ಐಸಿಸಿ ಚಾಂಪಿಯನ್​ಶಿಪ್​ ಪಟ್ಟಿಯಲ್ಲಿ 20 ಹಾಗೂ 16 ಅಂಕಗಳೊಂದಿಗೆ ಭಾರತ-ಪಾಕ್​ ತಂಡ ಕ್ರಮವಾಗಿ 4 ಹಾಗೂ 5ನೇ ಕ್ರಮಾಂಕದಲ್ಲಿವೆ.

2021 World Cup
ಐಸಿಸಿ ಮಹಿಳಾ ತಂಡಗಳ ಶ್ರೇಯಾಂಕ

ಒಂದು ವೇಳೆ, ಪಾಕ್​ ವಿರುದ್ಧ ಟೀಂ ಇಂಡಿಯಾ ಸರಣಿ ಆಡದಿದ್ದರೆ ಭಾರತದ ಖಾತೆಯಿಂದ 6 ಅಂಕ ಕಡಿತಗೊಂಡು ಪಾಕ್​ ತಂಡಕ್ಕೆ ಹೋಗುವುದರಿಂದ ವಿಶ್ವಕಪ್​ಗೆ ಟೀಂ ಇಂಡಿಯಾ ಮಹಿಳಾ ಪಡೆ ನೇರ ಅರ್ಹತೆ ಕಳೆದುಕೊಳ್ಳಲಿದೆ. ವಿಶ್ವಕಪ್​​ನಲ್ಲಿ ಆತಿಥೇಯ ನ್ಯೂಜಿಲ್ಯಾಂಡ್​​ ಜತೆ ಅಗ್ರ 4 ತಂಡಗಳಿಗೆ ಅವಕಾಶ ಸಿಗಲಿದೆ. ಈಗಾಗಲೇ ಅಗ್ರ 4ರಲ್ಲಿ ನ್ಯೂಜಿಲ್ಯಾಂಡ್​​ ತಂಡ ಸ್ಥಾನ ಪಡೆದುಕೊಂಡರೆ ಮತ್ತೊಂದು ತಂಡಕ್ಕೆ ನೇರ ಪ್ರವೇಶ ಸಿಗಲಿದೆ. ವಿಶ್ವಕಪ್​​ನಲ್ಲಿ ಒಟ್ಟು 8ತಂಡಗಳು ಪ್ರಶಸ್ತಿಗಾಗಿ ಫೈಟ್​ ನಡೆಸಲಿವೆ.

ಹಾಲಿ ರನ್ನರ್​​ ಅಪ್​ ಆಗಿರುವ ಭಾರತ ತಂಡ ಮುಂದಿನ ಸಲದ ವಿಶ್ವಕಪ್​​ನಲ್ಲಿ ನೇರ ಅರ್ಹತೆ ಪಡೆದುಕೊಳ್ಳದಿದ್ದರೆ, ಅರ್ಹತಾ ಪಂದ್ಯಗಳನ್ನಾಡಿ ವಿಶ್ವಕಪ್​​ನಲ್ಲಿ ಭಾಗಿಯಾಗಬೇಕಾದ ಅನಿವಾರ್ಯತೆ ನಿರ್ಮಾಣವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.