ETV Bharat / bharat

ಗಲ್ಲು ತಪ್ಪಿಸಲು ರಾತ್ರೋ ರಾತ್ರಿ ಸುಪ್ರೀಂ ಮೆಟ್ಟಿಲೇರಿದ ನಿರ್ಭಯಾ ಹಂತಕರು... ತಪ್ಪದ ನೇಣು ಕುಣಿಕೆ - ನಿರ್ಭಯಾ ಗ್ಯಾಂಗ್​ರೇಪ್​

ಮರಣದಂಡನೆ ತಪ್ಪಿಸಿಕೊಳ್ಳಲು ತಡರಾತ್ರಿ ನಡೆಸಿದ ಸರ್ಕಸ್​ ಕೂಡ ವಿಫಲಗೊಂಡಿದ್ದು, ಕೊನೆಗೂ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಲಾಗಿದೆ.

2012 Delhi gang-rape case
2012 Delhi gang-rape case
author img

By

Published : Mar 20, 2020, 4:02 AM IST

ನವದೆಹಲಿ: 2012ರ ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಇಂದು ಬೆಳಗ್ಗೆ 5:30ಕ್ಕೆ ತಿಹಾರ್​ ಜೈಲಿನಲ್ಲಿ ನೇಣು ಗಂಬಕ್ಕೇರಿಸಲಾಗಿದ್ದು, ಕೊನೆಗೂ ಏಳು ವರ್ಷದ ಪ್ರಕರಣ ಅಂತ್ಯಗೊಂಡಿದೆ.

  • 2012 Delhi gang-rape case: Supreme Court dismisses the petition of death row convict Pawan Gupta against rejection of his mercy plea by the President and seeking stay on execution. pic.twitter.com/kBfu8tKe9F

    — ANI (@ANI) March 19, 2020 " class="align-text-top noRightClick twitterSection" data=" ">

ಇಂದು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು ಕನ್ಫರ್ಮ್​ ಆಗುತ್ತಿದ್ದಂತೆ ಅಪರಾಧಿಗಳ ಪರ ವಕೀಲರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಅದನ್ನ ವಜಾಗೊಳಿಸಲಾಗಿತ್ತು. ಇದಾದ ಬಳಿಕ ಹೊಸ ಅರ್ಜಿ ಸಲ್ಲಿಕೆ ಮಾಡಿದ್ದ ವಕೀಲರು ದೆಹಲಿ ಹೈಕೋರ್ಟ್​ ಮೇಟ್ಟಿಲೇರಿದ್ದರು. ಇದರ ಬೆನ್ನಲ್ಲೇ ತಡರಾತ್ರಿ ಮತ್ತೊಮ್ಮೆ ದೆಹಲಿ ಕೋರ್ಟ್​ ತೀರ್ಪು ಪ್ರಶ್ನೆ ಮಾಡಿ ಅಪರಾಧಿ ಪವನ್​ ಗುಪ್ತಾ ಪರ ವಕೀಲರಾಗಿದ್ದ ಎಪಿ ಸಿಂಗ್​ ಸುಪ್ರೀಂಕೋರ್ಟ್​​ನಲ್ಲಿ ಪ್ರಶ್ನೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ಅದರಂತೆ ರಾತ್ರಿ 1 ಗಂಟೆಗೆ ಸುಪ್ರೀಂಕೋರ್ಟ್​ ರಿಜಿಸ್ಟ್ರಾರ್​ ಮನೆಗೆ ತೆರಳಿ ಅಪರಾಧಿಗಳ ಪರ ವಕೀಲ ಎಪಿ ಸಿಂಗ್​ ತುರ್ತು ವಿಚಾರಣೆ ನಡೆಸುವಂತೆ ಮನವಿ ಸಲ್ಲಿಕೆ ಮಾಡಿದ್ದರು.

ಪವನ್​ ಗುಪ್ತಾ ಕ್ಷಮಾದಾನ ಅರ್ಜಿಯನ್ನ ರಾಷ್ಟ್ರಪತಿ ತಿರಸ್ಕಾರ ಮಾಡಿರುವುದನ್ನೇ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಅದರ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಭೂಷಣ್​ ಹಾಗೂ ನ್ಯಾಯಮೂರ್ತಿ ಬೋಪಣ್ಣ ನೇತೃತ್ವದ ತ್ರಿಸದಸ್ಯ ಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು.

ಈಗಾಗಲೇ ಫೈನಲ್​ ಆಗಿರುವ ವಿಚಾರಣೆ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಲು ಸಾಧ್ಯವಿಲ್ಲ. ತೀರ್ಪು ಪುನರ್​ ಪರಿಶೀಲನೆ ನಡೆಸುವಂತೆ ಒತ್ತಡ ಹೇರುವುದು ಸರಿಯಲ್ಲ ಎಂದ ತ್ರಿಸದಸ್ಯ ಪೀಠ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.