ETV Bharat / bharat

ನಿರ್ಭಯಾ ಅಪರಾಧಿ ಅಕ್ಷಯ್​ ಕುಮಾರ್​ಗೆ 'ಗಲ್ಲು' ಫಿಕ್ಸ್​: ಸುಪ್ರೀಂ ನಿಂದ ಮಹತ್ವದ ತೀರ್ಪು

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಓರ್ವ ಅಪರಾಧಿ ಅಕ್ಷಯ್​ ಕುಮಾರ್​ ಸಿಂಗ್​ ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದ ಸರ್ವೋಚ್ಛ ನ್ಯಾಯಾಲಯ ಗಲ್ಲು ಶಿಕ್ಷೆ ತೀರ್ಪನ್ನು ಮತ್ತೆ ಎತ್ತಿ ಹಿಡಿದಿದೆ.

ನಿರ್ಭಯಾ ಅಪರಾಧಿ ಅಕ್ಷಯ್​ ಕುಮಾರ್​ಗೆ 'ಗಲ್ಲು' ಫಿಕ್ಸ್​,  2012 Delhi gang rape case
ನಿರ್ಭಯಾ ಅಪರಾಧಿ ಅಕ್ಷಯ್​ ಕುಮಾರ್​ಗೆ 'ಗಲ್ಲು' ಫಿಕ್ಸ್​
author img

By

Published : Dec 18, 2019, 12:30 PM IST

Updated : Dec 18, 2019, 1:35 PM IST

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಅಕ್ಷಯ್​ ಕುಮಾರ್​ ಸಿಂಗ್​ ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್​ ತಿರಸ್ಕರಿಸಿದೆ. ಈ ಮೂಲಕ ಅಪರಾಧಿಗೆ ಗಲ್ಲುಶಿಕ್ಷೆ ಫಿಕ್ಸ್​ ಆಗಿದೆ.

2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಆರೋಪ ಸಾಬೀತಾಗಿ, ಕಳೆದ ವರ್ಷ ಅಪರಾಧಿಗಳಿಗೆ ಸರ್ವೋಚ್ಛ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್​ ಕುಮಾರ್ ಸಿಂಗ್​​, ಸುಪ್ರೀಂ ಕೋರ್ಟ್​ ನೀಡಿರುವ ಮರಣ ದಂಡನೆ ತೀರ್ಪು ಮರುಪರಿಶೀಲನೆ ನಡೆಸುವಂತೆ ಅರ್ಜಿ ಸಲ್ಲಿಸಿದ್ದ. ಇಂದು ಇದರ ವಿಚಾರಣೆ ನಡೆಸಿದ ಕೋರ್ಟ್​ ತೀರ್ಪು ಪ್ರಕಟಿಸಿದೆ.

ಸುಪ್ರಿಂಕೋರ್ಟ್​ನಲ್ಲಿ ಅಕ್ಷಯ್​ ಪರ ವಾದ ಮಂಡಿಸಿದ ವಕೀಲ ಎ.ಪಿ.ಸಿಂಗ್​, ನಿರ್ಭಯಾ ಪ್ರಕರಣದ ಅಪರಾಧಿ ಅಕ್ಷಯ್​ ಮುಗ್ದ ಹಾಗೂ ಬಡವ- ಗಲ್ಲುಶಿಕ್ಷೆ ಅಪರಾಧಿಯನ್ನು ಕೊಲ್ಲುತ್ತದೆಯೇ ಹೊರತು ಅಪರಾಧವನ್ನಲ್ಲ. ಹೀಗಾಗಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು ಎಂದು ವಾದಿಸಿದರು.

ಆದರೆ ತೀರ್ಪು ಪ್ರಕಟಿಸಿದ ಕೋರ್ಟ್​, ಗಲ್ಲು ಶಿಕ್ಷೆ ತೀರ್ಪನ್ನೇ ಮತ್ತೆ ಎತ್ತಿಹಿಡಿದಿದೆ.

Intro:Body:

nirbhaya

Conclusion:
Last Updated : Dec 18, 2019, 1:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.