ಜೈಪುರ್: 2008ರಲ್ಲಿ ರಾಜಸ್ಥಾನದ ಜೈಪುರದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಐವರು ಆರೋಪಿಗಳ ಪೈಕಿ ನಾಲ್ವರು ದೋಷಿ ಹಾಗೂ ಓರ್ವ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ನೀಡಿದೆ.
-
Jaipur bomb blasts case: Four accused Sarvar Aazmi, Mohammad Saif, Saifur Rahman, and Salman convicted. Another accused Shahbaaz acquitted after being given benefit of doubt. 71 people were killed & 183 were injured in the serial blasts in the city on 13th May 2008. #Rajasthan https://t.co/th9N5rFaem
— ANI (@ANI) December 18, 2019 " class="align-text-top noRightClick twitterSection" data="
">Jaipur bomb blasts case: Four accused Sarvar Aazmi, Mohammad Saif, Saifur Rahman, and Salman convicted. Another accused Shahbaaz acquitted after being given benefit of doubt. 71 people were killed & 183 were injured in the serial blasts in the city on 13th May 2008. #Rajasthan https://t.co/th9N5rFaem
— ANI (@ANI) December 18, 2019Jaipur bomb blasts case: Four accused Sarvar Aazmi, Mohammad Saif, Saifur Rahman, and Salman convicted. Another accused Shahbaaz acquitted after being given benefit of doubt. 71 people were killed & 183 were injured in the serial blasts in the city on 13th May 2008. #Rajasthan https://t.co/th9N5rFaem
— ANI (@ANI) December 18, 2019
ಘಟನೆಯ ಬಳಿಕ ಮುಜಾಹಿದ್ದೀನ್ ಉಗ್ರವಾದಿ ಸಂಘಟನೆ ಸ್ಪೋಟದ ಹೊಣೆ ಹೊತ್ತುಕೊಂಡಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಶಹಬಾಜ್ ಹುಸೇನ್ ಅಲಿಯಾಸ್ ಶಹಬಾಜ್ ಅಹ್ಮದ್ ಅಲಿಯಾಸ್ ಶಾನು ಖುಲಾಸೆಗೊಂಡಿದ್ದಾನೆ.
ಕರಾಳ ದಿನದ ನೆನಪು:
ಮೇ 13, 2008ರಂದು ನಡೆದ ಈ ಸರಣಿ ಬಾಂಬ್ ಸ್ಫೋಟದಲ್ಲಿ 70 ಜನರು ಸಾವನ್ನಪ್ಪಿದ್ದು, 185 ಮಂದಿ ಗಾಯಗೊಂಡಿದ್ದರು. ಸಂಜೆ 7.20ರಿಂದ 7.45ರೊಳಗೆ ಒಟ್ಟು 9 ಸ್ಥಳಗಳಲ್ಲಿ ಬಾಂಬ್ ಸ್ಪೋಟಗೊಂಡಿದ್ದವು. ಜೈಪುರದನ ಮನಕ್ ಚೌಕ್ ಪೊಲೀಸ್ ಠಾಣೆ, ಬಡಿ ಚೌಪಾಡ್, ಕೊಟ್ವಾಲಿ ಪೊಲೀಸ್ ಠಾಣೆ, ಟ್ರಿಪೋಲಿಯಾ ಬಜಾರ್, ಚಾಂದ್ಪೋಲ್ ಹನುಮಾನ್ ದೇವಸ್ಥಾನ, ಜೌಹರಿ ಬಜಾರ್‌ನಲ್ಲಿನ ರಾಷ್ಟ್ರೀಯ ಕೈಮಗ್ಗ, ಸಂಗನೇರಿ ಗೇಟ್ ಹನುಮಾನ್ ದೇವಸ್ಥಾನದ ಬಳಿ ಬಾಂಬುಗಳು ಸ್ಪೋಟಗೊಂಡಿದ್ದವು.