ETV Bharat / bharat

ಅಭ್ಯಾಸ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟ ಮಹಿಳಾ ಬಾಕ್ಸರ್​! - ಪೊಲೀಸ್​ ಅಧಿಕಾರಿ

ಯುವ ಮಹಿಳಾ ಬಾಕ್ಸರ್ ಒಬ್ಬರು ಅಭ್ಯಾಸ ನಡೆಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಬಾಕ್ಸರ್​ ಜ್ಯೋತಿ ಪ್ರಧಾನ್
author img

By

Published : Jul 4, 2019, 6:55 PM IST

ಕೋಲ್ಕತ್ತಾ: 20 ವರ್ಷದ ಯುವ ಮಹಿಳಾ ಬಾಕ್ಸರ್ ಒಬ್ಬರು ಅಭ್ಯಾಸ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬಾವಾನಿಪುರದಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬಾಕ್ಸರ್​ ಜ್ಯೋತಿ ಪ್ರಧಾನ್​ ಮೃತಪಟ್ಟ ಯುವ ಬಾಕ್ಸರ್​. ರಾಷ್ಟ್ರೀಯ ಬಾಕ್ಸಿಂಗ್​ ಟೂರ್ನಮೆಂಟ್​ಗಳಲ್ಲಿ ಪಶ್ಚಿಮ ಬಂಗಾಳ ರಾಜ್ಯವನ್ನ ಪ್ರತಿನಿಧಿಸುತ್ತಿದ್ದರು. ಭವಾನಿಪುರದ ಬಾಕ್ಸಿಂಗ್ ಅಸೋಸಿಯೇಷನ್‍ನಲ್ಲಿ ​ ಅಭ್ಯಾಸ ನಡೆಸುತ್ತಿದ್ದ ವೇಳೆ ಮೂರ್ಛೆ ಹೋಗಿದ್ದಾರೆ. ತಕ್ಷಣ ಅವರನ್ನ ಎಸ್​​ಎಸ್​​ಕೆಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಕೆ ಸಾವನ್ನಪ್ಪಿದ್ದಾಳೆಂದು ವೈದ್ಯರು ಘೋಷಣೆ ಮಾಡಿದ್ದಾರೆ.

ಜೋಗೇಶ್ ಚಂದ್ರ ಚೌಧರಿ ಕಾನೂನು ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಜ್ಯೋತಿ, ಕಿಡ್ಡರ್ ಪುರ ಪ್ರದೇಶದ ಭೂಕೈಲಾಶ್‍ನ ನಿವಾಸಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಲಿಖಿತ ದೂರು ನೀಡಿಲ್ಲ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದು,ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.

Intro:Body:

ಬಾಕ್ಸಿಂಗ್​ ಅಭ್ಯಾಸ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ಯುವ ಮಹಿಳಾ ಬಾಕ್ಸರ್​! 

ಕೋಲ್ಕತ್ತಾ: 20 ವರ್ಷದ ಯುವ ಮಹಿಳಾ ಬಾಕ್ಸರ್​ವೋರ್ವಳು ಅಭ್ಯಾಸ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬಾವಾನಿಪುರದಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಬಾಕ್ಸರ್​ ಜ್ಯೋತಿ ಪ್ರಧಾನ್​ ಸಾವನ್ನಪ್ಪಿರುವ ಯುವ ಬಾಕ್ಸರ್​. ರಾಷ್ಟ್ರೀಯ ಬಾಕ್ಸಿಂಗ್​ ಟೂರ್ನಾಮೆಂಟ್​ಗಳಲ್ಲಿ ಪಶ್ಚಿಮ ಬಂಗಾಳ ರಾಜ್ಯವನ್ನ ಪ್ರತಿನಿಧಿಸುತ್ತಿದ್ದರು. ಭವಾನಿಪುರದ ಬಾಕ್ಸಿಂಗ್ ಅಸೋಸಿಯೇಶನ್‍ನಲ್ಲಿ ​ ಅಭ್ಯಾಸ ನಡೆಸುತ್ತಿದ್ದ ವೇಳೆ ಮೂರ್ಛೆ ಹೋಗಿದ್ದಾರೆ. ತಕ್ಷಣ ಅವರನ್ನ ಎಸ್​​ಎಸ್​​ಕೆಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಕೆ ಸಾವನ್ನಪ್ಪಿದ್ದಾಳೆಂದು ವೈದ್ಯರು ಘೋಷಣೆ ಮಾಡಿದ್ದಾರೆ. 

ಜೋಗೇಶ್ ಚಂದ್ರ ಚೌಧರಿ ಕಾನೂನು ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಜ್ಯೋತಿ, ಕಿಡ್ಡರ್ ಪುರ ಪ್ರದೇಶದ ಭೂಕೈಲಾಶ್‍ನ ನಿವಾಸಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಲಿಖಿತ ದೂರು ನೀಡಿಲ್ಲ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದು,ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.