ಮುಂಬೈ: ವೈದ್ಯರು ಮತ್ತು ನರ್ಸ್ಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆ ನಗರದ ಎರಡು ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲಾಗಿದೆ.
ಸೆಂಟ್ರಲ್ ಮುಂಬೈನ ವೊಕಾರ್ಡ್ ಆಸ್ಪತ್ರೆ ಮತ್ತು ಜಾಸ್ಲೋಕ್ ಆಸ್ಪತ್ರೆಯನ್ನು ತಾತ್ಕಾಲಿಕ ಮುಚ್ಚಲಾಗಿದೆ. ವೊಕಾರ್ಡ್ ಆಸ್ಪತ್ರೆಯಲ್ಲಿ ಮೂವರು ವೈದ್ಯರು ಮತ್ತು 26 ನರ್ಸ್ಗಳಿಗೆ ಕೊರೊನಾ ದೃಢಪಟ್ಟಿದೆ. ಹೀಗಾಗಿ ಸೋಂಕು ಹರಡುವುದನ್ನು ತಡೆಗಟ್ಟಲು ಆಸ್ಪತ್ರೆಯನ್ನು ಮುಚ್ಚಲಾಗಿದೆ. ಅಲ್ಲದೆ ಆಸ್ಪತ್ರೆ ಪ್ರದೇಶಕ್ಕೆ ಹೊರಗಿನವರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಬಿಎಂಸಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್ಚಿನ ಸಿಬ್ಬಂದಿ ಕೇರಳ ಮೂಲದವರಾಗಿದ್ದಾರೆ. ಹೀಗಾಗಿ ಕೇರಳ ಕಾಂಗ್ರೆಸ್ ನಾಯ ರಮೇಶ್ ಚೆನ್ನಿತ್ತಲ ಟ್ವೀಟ್ ಒಂದನ್ನು ಮಾಡಿದ್ದು, ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಜಿ ತಕ್ಷಣ ಮಧ್ಯೆ ಪ್ರವೇಶಿಸಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 40 ಮಲಯಾಳಿಗಳ ಸುರಕ್ಷತೆಯ ಬಗ್ಗೆ ಕ್ರಮವಹಿಬೇಕೆಂದು ಆಗ್ರಹಿಸಿದ್ದಾರೆ.
-
Called Maharashtra health minister Shri. Rajesh Tope ji @rajeshtope11 seeking urgent intervention to ensure safety of 40 Covid19 positive Malayalee nurses workng @ a pvt hospital in Mumbai.
— Ramesh Chennithala (@chennithala) April 6, 2020 " class="align-text-top noRightClick twitterSection" data="
">Called Maharashtra health minister Shri. Rajesh Tope ji @rajeshtope11 seeking urgent intervention to ensure safety of 40 Covid19 positive Malayalee nurses workng @ a pvt hospital in Mumbai.
— Ramesh Chennithala (@chennithala) April 6, 2020Called Maharashtra health minister Shri. Rajesh Tope ji @rajeshtope11 seeking urgent intervention to ensure safety of 40 Covid19 positive Malayalee nurses workng @ a pvt hospital in Mumbai.
— Ramesh Chennithala (@chennithala) April 6, 2020
ಇನ್ನು ಜಾಸ್ಲೋಕ್ ಆಸ್ಪತ್ರೆಯಲ್ಲಿಯೂ ಹೊರ ರೋಗಿ ವಿಭಾಗ (ಒಪಿಡಿ) ವನ್ನು ಬಂದ್ ಮಾಡಲಾಗಿದೆ. ಆಸ್ಪತ್ರೆಯ ಸಿಬ್ಬಂದಿಗೆ ಕೊರೊನಾ ಬಾಧಿಸಿದ ಬಗ್ಗೆ ನರ್ಸ್ ಒಬ್ಬರು ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ಇದರಲ್ಲಿ ಆಸ್ಪತ್ರೆಯ ಹಲವು ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಬಾಧಿಸಿದ್ದು, ಒಬ್ಬರಿಗೆ ಮಾತ್ರ ದೃಢಪಟ್ಟಿದೆ ಎಂದು ತಿಳಿಸಿದ್ದರು.