ETV Bharat / bharat

ನಕ್ಸಲ್​ ನಿಗ್ರಹ ಕಾರ್ಯಾಚರಣೆ: ಪೊಲೀಸ್ ದಾಳಿಗೆ ಇಬ್ಬರು ಬಲಿ

ಚತ್ತೀಸ್​ಗಢದ ಗುಮಿಯಾಪಾಲ್ ಗ್ರಾಮದ ಅರಣ್ಯಪ್ರದೇಶದಲ್ಲಿ ಜಿಲ್ಲಾ ಮೀಸಲು ಪಡೆ ನಕ್ಸಲರ ಮೇಲೆ ಗುಂಡಿನ ಮಳೆಗರೆದಿದ್ದು ಇಬ್ಬರು ಸಾವಿಗೀಡಾಗಿದ್ದಾರೆ ಎಂದು ದಂತೆವಾಡದ ಎಸ್​ಪಿ ಅಭಿಷೇಕ್​ ಪಲ್ಲಾವ ಹೇಳಿದ್ದಾರೆ.

Naxals
author img

By

Published : Jul 14, 2019, 12:43 PM IST

ದಂತೆವಾಡ: ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಮಹಿಳಾ ನಕ್ಸಲ್ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಚತ್ತೀಸ್​ಗಢದ ದಂತೆವಾಡದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಇಲ್ಲಿನ ಗುಮಿಯಾಪಾಲ್ ಗ್ರಾಮದ ಅರಣ್ಯಪ್ರದೇಶದಲ್ಲಿ ಬೆಳಗ್ಗೆ ಗುಂಡಿನ ಕಾಳಗ ನಡೆದಿದೆ. ಜಿಲ್ಲಾ ಮೀಸಲು ಪಡೆ ನಕ್ಸಲರ ಮೇಲೆ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಮಟ್ಟ ಹಾಕಿದೆ ಎಂದು ದಂತೆವಾಡದ ಎಸ್​ಪಿ ಅಭಿಷೇಕ್​ ಪಲ್ಲಾವ ಮಾಹಿತಿ ನೀಡಿದ್ರು.

ಮೃತಪಟ್ಟ ನಕ್ಸಲರನ್ನು ದೇವ ಹಾಗೂ ಮಂಗ್ಲಿ ಎಂದು ಗುರ್ತಿಸಲಾಗಿದೆ. ಮಲಂಗಿರ್​ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ ಇವರನ್ನು ಹಿಡಿದುಕೊಟ್ಟವರಿಗೆ 5 ಲಕ್ಷ ನೀಡುವುದಾಗಿಯೂ ಪೊಲೀಸರು ಬಹುಮಾನ ಘೋಷಿಸಿದ್ದರು.

ಕಾರ್ಯಾಚರಣೆ ವೇಳೆ ಕೆಲ ನಕ್ಸಲರು ಕಾಡಿನೊಳಗೆ ಓಡಿಹೋದರು. ಸದ್ಯ ಇಬ್ಬರ ಮೃತದೇಹ ಹಾಗೂ ಗನ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಸಂಶಯದ ಮೇಲೆ ಕೋಸಿ ಎಂಬ ಮಹಿಳೆಯನ್ನು ಬಂಧಿಸಲಾಗಿದೆ ಎಂದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.