ETV Bharat / bharat

ಕೊರೊನಾದಿಂದ ಚೇತರಿಸಿಕೊಳ್ತಿದೆ ಕೇರಳ; ಒಂದೇ ದಿನ 36 ಡಿಸ್ಚಾರ್ಜ್​, 179 ಮಂದಿ ಗುಣಮುಖ

ಮಹಾಮಾರಿ ಕೊರೊನಾದಿಂದ ತತ್ತರಿಸಿ ಹೋಗಿದ್ದ ಕೇರಳ ದಿನದಿಂದ ದಿನಕ್ಕೆ ಚೇತರಿಕೆ ಕಾಣುತ್ತಿದೆ.

COVID19 cases
COVID19 cases
author img

By

Published : Apr 12, 2020, 5:48 PM IST

ತಿರುವನಂತಪುರಂ(ಕೇರಳ): ದೇಶದಲ್ಲಿ ಮೊದಲು ಕೊರೊನಾ ವೈರಸ್​​ ಕಾಣಿಸಿಕೊಂಡಿದ್ದು ಕೇರಳದಲ್ಲಿ. ಚೀನಾದ ವುಹಾನ್​​ನಿಂದ ಇಲ್ಲಿಗೆ ಆಗಮಿಸಿದ್ದ ಮೂವರಲ್ಲಿ ಈ ಮಹಾಮಾರಿ ಕಾಣಿಸಿದ್ದ ಬಳಿಕ ದೇಶದ ಎಲ್ಲ ಭಾಗಗಳಲ್ಲೂ ಈ ಡೆಡ್ಲಿ ವೈರಸ್​ ಕಾಣಿಸಿಕೊಂಡಿದೆ. ಇದೀಗ ಮಹಾರಾಷ್ಟ್ರ, ನವದೆಹಲಿ, ಮಧ್ಯಪ್ರದೇಶಗಳಲ್ಲಿ ಈ ರಕ್ಕಸ ಸೋಂಕಿನ ಅಬ್ಬರ ಜೋರಾಗಿದೆ. ಕೇರಳದಲ್ಲಿ ಮಾತ್ರ ದಿನದಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ.

ಕೇರಳದಲ್ಲಿ ಇಂದು ಕೇವಲ ಎರಡು ಕೊರೊನಾ ಕೇಸ್​ ಕಾಣಿಸಿಕೊಂಡಿದ್ದು, 36 ಮಂದಿಯ ವರದಿ ನೆಗೆಟಿವ್​ ಬಂದಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಲ್ಲಿಯವರೆಗೆ 375 ಜನರಿಗೆ ಕೋವಿಡ್​-19 ಕಾಣಿಸಿಕೊಂಡಿದ್ದು ಅದರಲ್ಲಿ 179 ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದು ಆರೋಗ್ಯ ಸಚಿವೆ ಕೆ. ಶೈಲಜಾ ಮಾಹಿತಿ ನೀಡಿದ್ದಾರೆ. ವಿಶೇಷವೆಂದರೆ, ಇಂದು ಒಂದೇ ದಿನ 36 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಉಳಿದಂತೆ ವಿವಿಧ ಆಸ್ಪತ್ರೆಗಳಲ್ಲಿ 194 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಮೂವರು ಸಾವನ್ನಪ್ಪಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,16,941 ಜನರನ್ನ ಮನೆಯಲ್ಲೇ ಕ್ವಾರಂಟೈನ್​​ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ. 14,989 ಜನರ ರಕ್ತದ ಮಾದರಿ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಈಗಾಗಲೇ ಬಂದಿರುವ 13,802 ಜನರ ರಕ್ತದ ಮಾದರಿ ನೆಗೆಟಿವ್​ ಆಗಿದೆ ಎಂಬ ಮಾಹಿತಿಯನ್ನು ಹೊರಗೆಡವಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.