ಗುವಾಹತಿ(ಅಸ್ಸೋಂ): ಇಲ್ಲಿನ ಆಯಿಲ್ ಇಂಡಿಯಾ ಲಿಮಿಟೆಡ್ನ ಅನಿಲ ಬಾವಿಯಲ್ಲಿ ನಿನ್ನೆಯಿಂದ ಜ್ವಾಲೆ ಸ್ಫೋಟಗೊಳ್ಳುತ್ತಿದ್ದು, ಬೆಂಕಿ ನಿಯಂತ್ರಿಸುವಲ್ಲಿ ಹೋರಾಡುತ್ತಿರುವ ಇಬ್ಬರು ಅಗ್ನಿಶಾಮಕ ದಳ ಸಿಬ್ಬಂದಿಯ ಮೃತದೇಹಗಳು ಅನಿಲ ಬಾವಿಯ ಬಳಿ ಪತ್ತೆಯಾಗಿವೆ.
ಟಿನ್ಸುಕಿಯಾ ಜಿಲ್ಲೆಯ ಬಾಗ್ಜನ್ನಲ್ಲಿರುವ ಅನಿಲ ಬಾವಿಯಲ್ಲಿ ಕಳೆದ 14 ದಿನಗಳಿಂದ ಅನಿಲ ಸೋರಿಕೆಯಾಗುತ್ತಿದ್ದು, ನಿನ್ನೆ ಇದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯ ಹಾಗೂ ಬೆಂಕಿ ನಿಯಂತ್ರಣ ಮಾಡುತ್ತಿವೆ. ಈ ವೇಳೆ ನಾಪತ್ತೆಯಾಗಿದ್ದ ಇಬ್ಬರು ಅಗ್ನಿಶಾಮಕ ಸಿಬ್ಬಂದಿಯು ಇಂದು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
-
#WATCH Fire continues to rage at the gas well of Oil India Ltd at Baghjan in Tinsukia district, 2 persons dead. #Assam pic.twitter.com/WgUhEqonGI
— ANI (@ANI) June 10, 2020 " class="align-text-top noRightClick twitterSection" data="
">#WATCH Fire continues to rage at the gas well of Oil India Ltd at Baghjan in Tinsukia district, 2 persons dead. #Assam pic.twitter.com/WgUhEqonGI
— ANI (@ANI) June 10, 2020#WATCH Fire continues to rage at the gas well of Oil India Ltd at Baghjan in Tinsukia district, 2 persons dead. #Assam pic.twitter.com/WgUhEqonGI
— ANI (@ANI) June 10, 2020
ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ಮನವಿಯ ನಂತರ ಭಾರತೀಯ ವಾಯುಪಡೆ ಮತ್ತು ಸೇನೆ, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಈ ಪ್ರದೇಶದ ಸುತ್ತಮುತ್ತ ಅರೆಸೈನಿಕ ಪಡೆಗಳು ಬೀಡುಬಿಟ್ಟಿವೆ.