ETV Bharat / bharat

ಒಡಿಶಾದಲ್ಲಿ ಎರಡು ಕಾಡಾನೆ ಸಾವು.. ತನಿಖೆಗೆ ಮುಂದಾದ ಅರಣ್ಯ ಇಲಾಖೆ

ಒಡಿಶಾದ ಚಂಪುವಾ ಶ್ರೇಣಿಯ ಗುರುಬೇಡ ಗ್ರಾಮದ ಬಳಿ ಅರಣ್ಯ ಇಲಾಖೆಯ ಗಸ್ತು ತಂಡವು ಎರಡು ಆನೆಗಳ ಶವಗಳನ್ನು ಪತ್ತೆ ಮಾಡಿದೆ. ಸತ್ತ ಆನೆಗಳಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಆನೆ ಸೇರಿವೆ. ಸತ್ತ ಆನೆಗಳ ವಯಸ್ಸು ಸುಮಾರು 20 ರಿಂದ 22 ವರ್ಷಗಳು ಎಂದು ಅಂದಾಜಿಸಲಾಗಿದೆ.

odisha
ಒಡಿಶಾದಲ್ಲಿ ಎರಡು ಕಾಡಾನೆ ಸಾವು
author img

By

Published : Jun 15, 2020, 11:14 PM IST

ಒಡಿಶಾ : ಇಲ್ಲಿನ ಚಂಪುವಾ ಶ್ರೇಣಿಯ ಗುರುಬೇಡ ಗ್ರಾಮದ ಬಳಿ ಇರುವ ಬೈತರಾಣಿ (ಬಿ) ಮೀಸಲು ಅರಣ್ಯದಲ್ಲಿ ಎರಡು ಕಾಡಾನೆಗಳ ಶವ ಪತ್ತೆಯಾಗಿವೆ.

ವರದಿಗಳ ಪ್ರಕಾರ, ಅರಣ್ಯ ಇಲಾಖೆಯ ಗಸ್ತು ತಂಡವು ಎರಡು ಆನೆಗಳ ಶವಗಳನ್ನು ಪತ್ತೆ ಮಾಡಿದೆ. ಸತ್ತ ಆನೆಗಳಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಆನೆ ಸೇರಿವೆ. ಸತ್ತ ಆನೆಗಳ ವಯಸ್ಸು ಸುಮಾರು 20 ರಿಂದ 22 ವರ್ಷಗಳು ಎಂದು ಅಂದಾಜಿಸಲಾಗಿದೆ.

ಗಂಡು ಆನೆಯ ಸೊಂಡಿಲಿನ ಮೆಲೆ ಗಾಯದ ಗುರುತು ಕೂಡ ಕಂಡು ಬಂದಿವೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಂತೋಷ್ ಯೋಷಿ ಮತ್ತು ಕೆಂಡುಜಾರ್ ಡಿಎಫ್‌ಒ ಸ್ಥಳಕ್ಕೆ ಬಂದು ತನಿಖೆ ಆರಂಭಿಸಿದ್ದಾರೆ. ಇಲ್ಲಿಯವರೆಗೆ ಸಾವಿನ ಕುರಿತು ನಿಖರ ಮಾಹಿತಿ ದೊರಕಿಲ್ಲ. ಎರಡೂ ಆನೆಗಳ ಶವಗಳನ್ನು ನಾಳೆ ಶವಪರೀಕ್ಷೆ ಮಾಡುವ ನಿರೀಕ್ಷೆಯಿದೆ. ಮರಣೋತ್ತರ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯುತ್ತದೆ ಎಂದು ಡಿಎಫ್​ಓ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.