ಚಂಡೀಗಢ : ಶೌಚಾಲಯಕ್ಕೆ ಹೋದ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಹೇಯ ಘಟನೆ ಹರಿಯಾಣದ ಕರ್ನಾಲ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾ ಬಳಿ ಜರುಗಿದೆ.
ಪಂಜಾಬ್‌ನ 19 ವರ್ಷದ ಮಹಿಳೆಯನ್ನು ಚಾಕು ತೋರಿಸಿ ಬೆದರಿಸಿದ ಕಾಮುಕರು, ಆಕೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾನು ಪತಿಯೊಂದಿಗೆ ಭಾನುವಾರ ತಡರಾತ್ರಿ ಪಾಣಿಪತ್‌ನಿಂದ ಸಂಬಂಧಿಕರನ್ನು ಭೇಟಿಯಾಗಲು ಬರುತ್ತಿದ್ದೆ. ಪತಿ ರಸ್ತೆ ಬದಿಯ ಟೀ ಅಂಗಡಿಯಲ್ಲಿ ಚಹಾ ಸೇವಿಸುತ್ತಿದ್ದರು, ನಾನು ವಾಶ್ ರೂಂಗೆ ಹೋದಾಗ ಇಬ್ಬರು ವ್ಯಕ್ತಿಗಳು ಚಾಕು ತೋರಿಸಿ ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ಥೆ ದೂರಿನಲ್ಲಿ ತಿಳಿಸಿದ್ದಾಳೆ. ಅತ್ಯಾಚಾರದ ನಂತರ ಪತಿ ಬಳಿ ಘಟನೆ ಬಗ್ಗೆ ವಿವರಿಸಿದ್ದಾಳೆ.
ಇನ್ನು ಪ್ರಮುಖ ಆರೋಪಿಯನ್ನು ಸೋಮವಾರ ಮತ್ತು ಆತನಿಗೆ ಸಹಕಾರ ನೀಡಿದ್ದ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.