ETV Bharat / bharat

ಸಿಗರೇಟ್ ಸೇದುವಂತೆ ರೂಮ್​​​​ಮೇಟ್​​ನಿಂದ ಒತ್ತಾಯ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ - ಧೂಮಪಾನಕ್ಕೆ ಒತ್ತಾಯಿಸಿದ್ದಕ್ಕೆ ಯುವಕ ಆತ್ಮಹತ್ಯೆ

ಸಿಗರೇಟ್​ ಸೇದುವಂತೆ ರೂಮ್‌ಮೇಟ್‌ ಒತ್ತಾಯಿಸುತ್ತಿದ್ದರಿಂದ ಮನ ನೊಂದು 18 ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

roommate forcing to smoke
ಧೂಮಪಾನಕ್ಕೆ ಒತ್ತಾಯಿಸಿದ್ದಕ್ಕೆ ಯುವಕ ಆತ್ಮಹತ್ಯೆ
author img

By

Published : Oct 16, 2020, 7:32 AM IST

ಪುಣೆ: ಧೂಮಪಾನ ಮಾಡುವಂತೆ ರೂಮ್​​ಮೇಟ್‌ ಒತ್ತಾಯಿಸುತ್ತಿದ್ದರಿಂದ ಮನ ನೊಂದು 18 ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಅಕ್ಟೋಬರ್ 10ರಿಂದ 13ರ ನಡುವೆ ಕಾರ್ವೆ ನಗರದ ಬಾಲಕರ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಸಾಗರ್ ಅಶೋಕ್ ಪವಾರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈ ಪ್ರಕರಣದಲ್ಲಿ ವಾರ್ಜೆ ಮಾಲ್ವಾಡಿ ಪೊಲೀಸರು ಲಕ್ಷ್ಮಣ್ ವಾಸುದೇವ್ ಪಾಟೀಲ್ (30) ಎಂಬಾತನನ್ನು ಬಂಧಿಸಿದ್ದಾರೆ.

ಸಾಗರ್ ಪವಾರ್ ಮೂರು ನಾಲ್ಕು ದಿನಗಳ ಹಿಂದೆ ಕಾರ್ವೆ ನಗರ ಪ್ರದೇಶದ ಪಠಾಣ್ ಹಾಸ್ಟೆಲ್‌ನಲ್ಲಿ ಉಳಿಯಲು ಬಂದಿದ್ದ. ಆತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ತನ್ನ ರೂಮ್​​​ಮೇಟ್​ ಆಗಿದ್ದ ಲಕ್ಷ್ಮಣ ಪಾಟೀಲ್ ಸಿಗರೇಟ್ ವ್ಯಸನಿಯಾಗಿದ್ದ. ಸಾಗರ್‌ನನ್ನೂ ಧೂಮಪಾನ ಮಾಡುವಂತೆ ಒತ್ತಾಯಿಸುತ್ತಿದ್ದನಂತೆ. ನಿರಾಕರಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಸಾಗರ್, ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಲಕ್ಷ್ಮಣ್ ಪಾಟೀಲ್​ನನ್ನು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.