ಜೈಪುರ (ರಾಜಸ್ಥಾನ): ಧೋಲ್‌ಪುರ ಜಿಲ್ಲೆಯ ಬಾರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗಾ ಅವರ ಕುಟುಂಬದ 18 ಸದಸ್ಯರಿಗೆ ಕೊರೊನಾ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಸಕರ ಕುಟುಂಬದ ಎಲ್ಲಾ ಸೋಂಕಿತ ಸದಸ್ಯರು ಐಸೊಲೇಷನ್ನಲ್ಲಿದ್ದು, ಇಬ್ಬರು ಸೋಂಕು ಮುಕ್ತರಾಗಿದ್ದಾರೆ. ಇನ್ನೂ 16 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಧೋಲ್ಪುರದ ಪ್ರಧಾನ ವೈದ್ಯಕೀಯ ಅಧಿಕಾರಿ ಡಾ.ಶಿವದಯಾಳ್ ಮಂಗಲ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 11,675 ಜನರು ಗುಣಮುಖರಾಗಿದ್ದು 2,966 ಸಕ್ರಿಯ ಪ್ರಕರಣಗಳಿವೆ. ಒಟ್ಟು 356 ಸೋಂಕಿತರು ಮೃತಪಟ್ಟಿದ್ದಾರೆ.