ETV Bharat / bharat

ಕೊರೊನಾ ಚಿಕಿತ್ಸೆಗಾಗಿ 16 ಹಜ್​ ಕಟ್ಟಡ ನೀಡಲಾಗಿದೆ: ಕೇಂದ್ರ ಸಚಿವ ನಖ್ವಿ

author img

By

Published : May 9, 2020, 10:04 PM IST

ದೇಶದಾದ್ಯಂತ ಕೊರೊನಾ ಚಿಕಿತ್ಸೆಗಾಗಿ 16 ಹಜ್​ ಕಟ್ಟಡಗಳನ್ನು ನೀಡಲಾಗಿದೆ. ಅಲ್ಲದೆ ಕೊರೊನಾ ಸೋಂಕಿತರ ಕ್ವಾರಂಟೈನ್​ಗೂ ಈ ಕಟ್ಟಡ ಬಳಸಲಾಗುತ್ತಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್​ ನಖ್ವಿ ತಿಳಿಸಿದ್ದಾರೆ.

16 Haj houses given to states to treat COVID-19 patients: Naqvi
ಕೊರೊನಾ ಚಿಕಿತ್ಸೆಗಾಗಿ 16 ಹಜ್​ ಕಟ್ಟಡ ನೀಡಲಾಗಿದೆ: ಸಚಿವ ಅಬ್ಬಾಸ್​​ ನಖ್ವಿ

ನವದೆಹಲಿ: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ದೇಶದಾದ್ಯಂತ 16 ಹಜ್​ ಕಟ್ಟಡಗಳನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್​ ನಖ್ವಿ ತಿಳಿಸಿದ್ದಾರೆ. ಅಲ್ಲದೆ ಈ ಕೇಂದ್ರದಗಳನ್ನು ಕೊರೊನಾ ಸೋಂಕಿತರನ್ನು ಕ್ವಾರಂಟೈನ್ ಮಾಡಲು ಹಾಗೂ ಚಿಕಿತ್ಸೆ ನೀಡಿಲು ಬಳಸಬಹುದು ಎಂದಿದ್ದಾರೆ.

ಅಲ್ಲದೆ ವಿವಿಧ ರಾಜ್ಯ ಸರ್ಕಾರಗಳು ಈ ಸೌಲಭ್ಯವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿವೆ ಎಂದಿದ್ದಾರೆ. ಇದಲ್ಲದೆ ಕೊರೊನಾ ವೈರಸ್ ಜಾಗೃತಿಗಾಗಿ ರಾಷ್ಟ್ರವ್ಯಾಪಿಯಾಗಿ ಜಾನ್​ ಬಿ ಜಹಾನ್​ ಬಿ ಎಂಬ ಜಾಗೃತಿ ಅಭಿಯಾನವನ್ನು ಸಚಿವಾಲಯದ ವತಿಯಿಂದ ಆರಂಭಿಸಲಾಗುವುದು ಎಂದಿದ್ದಾರೆ.

ಇನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿ ತರಬೇತಿ ಪಡೆದಿರುವ ಸುಮಾರು 1,500ಕ್ಕೂ ಹೆಚ್ಚು ಆರೋಗ್ಯ ಸಹಾಯಕರು, ಇದೀಗ ಕೊರೊನಾ ರೋಗಿಗಳ ಚಿಕಿತ್ಸೆಯೂ ಸೇರಿ ಅವರ ಆರೈಕೆಯಲ್ಲಿ ತೊಡಗಿದ್ದಾರೆ. ವಿಶೇಷ ಅಂದರೆ ಇದರಲ್ಲಿ ಶೇ. 50ರಷ್ಟು ಮಹಿಳೆಯರಿದ್ದಾರೆ ಎಂದಿದ್ದಾರೆ.

ಇದಲ್ಲದೆ ದೇಶದಾದ್ಯಂತ ವಕ್ಫ್​​ ಮಂಡಳಿಗಳು ವಿವಿಧ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಂಸ್ಥೆಗಳ ಬೆಂಬಲದೊಂದಿಗೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ 51 ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ. ಇನ್ನು ಅಗತ್ಯವಿರುವವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಗಿದೆ ಎಂದಿದ್ದಾರೆ.

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು ಕೊರೊನಾ ಚಿಕಿತ್ಸೆಗಾಗಿ 100 ಬೆಡ್​​​ಗಳ ವ್ಯವಸ್ಥೆ ಕಲ್ಪಿಸಿದ್ದಲ್ಲದೆ, 1.40 ಕೋಟಿ ರೂಪಾಯಿಗಳನ್ನು ಪಿಎಂ ಕೇರ್ಸ್​ ನಿಧಿಗೆ ದೇಣಿಗೆ ನೀಡಿದೆ ಎಂದು ನಖ್ವಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.