ETV Bharat / bharat

15 ವರ್ಷದ ಬಾಲಕಿ ಮೇಲೆ ಅತ್ಯಾಚಾರ... ಕಾಮುಕನ ಬಂಧಿಸಿದ ಪೊಲೀಸರು! - ಪಂಜಾಬ್​ನ ಹೋಶಿಯಾಪುರ್​ನಲ್ಲಿ ಅಮಾನವೀಯ ಕೃತ್ಯ

ವಲಸೆ ಕಾರ್ಮಿಕರಾಗಿ ಕೆಲಸ ಮಾಡ್ತಿದ್ದ ಕಾಮುಕ ವ್ಯಕ್ತಿಯೋರ್ವ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ.

Minor rape
Minor rape
author img

By

Published : Oct 27, 2020, 12:59 AM IST

ಹೋಶಿಯಾಪುರ್​​​​​(ಪಂಜಾಬ್​): 15 ವರ್ಷದ ಬಾಲಕಿಯೋರ್ವಳ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಪಂಜಾಬ್​ನ ಹೋಶಿಯಾಪುರ್​ದಲ್ಲಿ ನಡೆದಿದೆ.

ಅಕ್ಟೋಬರ್​ 24ರಂದು ಈ ಘಟನೆ ನಡೆದಿದ್ದು, ಆರೋಪಿಯನ್ನ ಅರುಣ್​ ಕುಮಾರ್​ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸದರ್​​ ಪೊಲೀಸ್​ ಠಾಣೆ ಸಬ್​ ಇನ್ಸ್​ಪೆಕ್ಟರ್​​ ನಿಲಂ ಕುಮಾರಿ, ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳ ಕಾಯ್ದೆಯಡಿ ಬಂಧನ ಮಾಡಲಾಗಿದೆ ಎಂದಿದ್ದಾರೆ.

ಸಂತ್ರಸ್ತೆ ಕಾರ್ಮಿಕ ವಸತಿಗೃಹದಲ್ಲಿ ವಾಸಿಸುತ್ತಿದ್ದಳು. ಆರೋಪಿ ಕೂಡ ಹತ್ತಿರದ ಪ್ರದೇಶದಲ್ಲೇ ವಾಸವಿದ್ದನು. ಮನೆಯಲ್ಲಿ ಬಾಲಕಿ ಒಬ್ಬಂಟಿಯಾಗಿದ್ದ ವೇಳೆ ಆಕೆಯ ಅಪಹರಣ ಮಾಡಿ ಬೇರೆ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಬಾಲಕಿ ಕಿರುಚಾಟ ನಡೆಸುತ್ತಿದ್ದಂತೆ ಸ್ಥಳಕ್ಕೆ ಸಂತ್ರಸ್ತೆಯ ತಾಯಿ ಹೋಗುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ. ಆರೋಪಿ ಮತ್ತು ಬಾಲಕಿ ಇಬ್ಬರೂ ವಲಸೆ ಕಾರ್ಮಿಕರು ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.