ಘಾಜಿಯಾಬಾದ್/ಉತ್ತರಪ್ರದೇಶ : ಕೊರೊನಾ ವೈರಸ್ ತಗುಲಿರುವ ಶಂಕಿತ ಐವರು ಇಂಡೋನೇಷ್ಯಾದ ಮಹಿಳಾ ಪಾದ್ರಿಗಳು ಸೇರಿದಂತೆ ಸುಮಾರು15 ತಬ್ಲಿಘಿ ಜಮಾತ್ ಸದಸ್ಯರನ್ನು ಘಾಜಿಯಾಬಾದ್ ಪೊಲೀಸರು ವಶಕ್ಕೆ ಪಡೆದು ಕ್ಯಾರಂಟೈನ್‌ನಲ್ಲಿಟ್ಟಿದ್ದಾರೆ.
ತಬ್ಲಿಘಿ ಜಮಾತ್ ಸದಸ್ಯರು ಮಸೀದಿಗಳು ಮತ್ತು ಮದರಸಾಗಳಲ್ಲಿ ಉಳಿದುಕೊಂಡಿರುವ ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಪಾದ್ರಿಗಳ ಸಹಾಯದಿಂದ ಅವರಿದ್ದ ಸ್ಥಳವನ್ನು ಪತ್ತೆ ಹಚ್ಚಲಾಯಿತು. ಇವರಲ್ಲಿ ಹೆಚ್ಚಿನವರು ನಿಜಾಮುದ್ದೀನ್ ಮಾರ್ಕಾಜ್ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದರು ಎಂದು ಸಾಹಿರಾಬಾದ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈಥಾನಿ ಮಾಹಿತಿ ನೀಡಿದ್ದಾರೆ.
ಈ 15 ಜನರಲ್ಲಿ ಐದು ಪುರುಷರು ಮತ್ತು ಐದು ಮಹಿಳಾ ಜಮಾತ್ ಸದಸ್ಯರು ಇಂಡೋನೇಷ್ಯಾ ಮೂಲದವರು ಹಾಗೂ ಉಳಿದವರೆಲ್ಲಾ ಸ್ಥಳೀಯ ನಿವಾಸಿಗಳು ಎಂದು ತಿಳಿದು ಬಂದಿದೆ. ಇವರಲ್ಲಿ ಕೆಲವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆಂದು ಶಂಕಿಸಲಾಗಿರುವುದರಿಂದ ಅವರನ್ನು ಕ್ಯಾರೆಂಟೈನ್‌ನಲ್ಲಿಡಲಾಗಿದೆ. ಇವರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆ, 7 ವಿದೇಶಿ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವಕ್ತಾರ ಸೋಹನ್ವೀರ್ ಸೋಲಂಕಿ ತಿಳಿಸಿದ್ದಾರೆ.