ವಯನಾಡು(ಕೇರಳ): ಸಂಬಂಧದಲ್ಲಿ ಸೋದರ ಸೊಸೆಯಾಗಬೇಕಾಗಿದ್ದ ಬಾಲಕಿ ಮೇಲೆ ಕಾಮುಕ ಪೊಲೀಸ್ ಪೇದೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಕೇರಳದ ವಯನಾಡುವಿನಲ್ಲಿ ನಡೆದಿದೆ.
14 ವರ್ಷದ ಅಪ್ರಾಪ್ತೆ ಅಪಹರಣ ಮಾಡಿರುವ ಪೊಲೀಸ್ ಪೇದೆ ಅರಣ್ಯ ಪ್ರದೇಶದಲ್ಲಿ ಬೆದರಿಸಿ ಆಕೆಯ ಮೇಲೆ ದುಷ್ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ 8 ಗಂಟೆಗೆ ಈ ಘಟನೆ ನಡೆದಿದೆ. ಘಟನೆಯಿಂದ ಆಘಾತಕ್ಕೊಳಗಾಗಿರುವ ಬಾಲಕಿಯನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪೋಷಕರು ನೀಡಿರುವ ದೂರಿನನ್ವಯ ಕೇಸ್ ದಾಖಲು ಮಾಡಿಕೊಳ್ಳಲಾಗಿದ್ದು, ಆರೋಪಿ ಬಂಧನ ಮಾಡಿರುವ ಕುರಿತು ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ.