ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಭಾರೀ ಮಳೆಯಾಗುತ್ತಿದ್ದ ವೇಳೆ 13 ವರ್ಷದ ಬಾಲಕನೊಬ್ಬ ತನ್ನ ತಾಯಿಗೆ ಸಮಯೋಚಿತ ಎಚ್ಚರಿಕೆ ನೀಡುವ ಮೂಲಕ ತನ್ನ ಕುಟುಂಬವನ್ನು ಅಪಾಯದಿಂದ ರಕ್ಷಿಸಿದ್ದಾನೆ.
ಹೌದು, ಹಿಮಾಂಶು ಎಂಬ ಬಾಲಕ ಮಳೆ ಮನೆ ಛಾವಣಿಯಿಂದ ಜೋರಾಗಿ ಬರುತ್ತಿರುವ ಕಾರಣ ಮನೆಯ ಚಾವಣಿ ಬೀಳಬಹುದು ಎಂದು ತನ್ನ ತಾಯಿಗೆ ಹೇಳಿದ್ದಾನೆ.
ನನ್ನ ತಾಯಿ, ಮಲಗಿದ್ದ ನನ್ನನ್ನು ಎಬ್ಬಿಸಿ ಉದ್ಯಾನವನಕ್ಕೆ ತೆರಳುವಂತೆ ಹೇಳಿದಳು. ಆದರೆ ಅಷ್ಟರಲ್ಲೇ ನಾನು ಕೋಣೆಯಲ್ಲಿ ನೀರು ಚಾವಣಿ ಮೂಲಕ ಹರಿಯುತ್ತಿರುವುದನ್ನು ಗಮನಿಸಿದೆ. ತಕ್ಷಣವೇ ಅವಳನ್ನು ಮತ್ತೊಂದು ಕೋಣೆಗೆ ಎಲ್ಲವನ್ನೂ ಸ್ಥಳಾಂತರಿಸಲು ಕೇಳಿಕೊಂಡೆ" ಎನ್ನುತ್ತಾನೆ 13 ವರ್ಷದ ಬಾಲಕ.
ತಾಯಿ ಆರಂಭದಲ್ಲಿ ನನ್ನ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ನಾನು ಅವಳಿಗೆ ಇದೊಂದು ಸಮಸ್ಯೆಯಾಗಬಹುದು ಎಂದಾಗ ನನ್ನ ಮಾತಿನಿಂದ ಅದೇ ಕೋಣೆಯಲ್ಲಿ ಮಲಗಿದ್ದ ನನ್ನ ಅನಾರೋಗ್ಯಪೀಡಿತ ತಂದೆಗೆ ಸ್ಥಳಾಂತರಗೊಳ್ಳಲು ಮೊದಲು ಸಹಾಯ ಮಾಡಲು ಪ್ರಾರಂಭಿಸಿದಳು. ಇನ್ನೇನು ಅಲ್ಲಿಂದ ತೆರಳಬೇಕೆನ್ನುವಷ್ಟರಲ್ಲಿ ಸೀಲಿಂಗ್‌ನ ಒಂದು ಭಾಗ ನನ್ನ ಪೋಷಕರು ಮತ್ತು ಸಹೋದರಿಯ ಮೇಲೆ ಬಿದ್ದು ಅವರಿಗೆ ಗಾಯವಾಯಿತು ಎಂದು ಆತ ಹೇಳಿದ್ದಾನೆ.
ಬಾಲಕನ ತಾಯಿಗೆ ಗಂಭೀರ ಗಾಯವಾಗಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಹಿಮಾಂಶು ಮತ್ತು ಅವರ ಕುಟುಂಬಕ್ಕೆ ನೆರೆಹೊರೆಯವರು ಸಹಾಯ ಮಾಡಿದ್ದಾರೆ.