ರಾಯಗಢ(ಮಹಾರಾಷ್ಟ್ರ): ಸೋಮವಾರ ಸಂಜೆ ರಾಯಗಢ ಜಿಲ್ಲೆಯ ಮಹಾದ್ ಪ್ರದೇಶದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತಗೊಂಡಿದ್ದು, ಸ್ಥಳದಲ್ಲಿ ಕಳೆದ 24 ಗಂಟೆಗಳಿಂದ ಭರದ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇಲ್ಲಿಯವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೇರಿಕೆಯಾಗಿದೆ. ಇನ್ನು ಅನೇಕರು ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಇಲ್ಲಿಯವರೆಗೆ 60ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದೆ. ಈ ಕಟ್ಟಡದಲ್ಲಿ ಸುಮಾರು 60ಕ್ಕೂ ಕುಟುಂಬಗಳು ವಾಸವಾಗಿದ್ದವು.
-
We've announced an ex-gratia of Rs 5 lakhs each to the families of the deceased. Financial assistance of upto Rs 50,000 will be provided to those injured in the incident: Maharashtra Minister Vijay Wadettiwar
— ANI (@ANI) August 25, 2020 " class="align-text-top noRightClick twitterSection" data="
At least 10 people lost their lives in Raigad building collapse. pic.twitter.com/b7YPSjp54f
">We've announced an ex-gratia of Rs 5 lakhs each to the families of the deceased. Financial assistance of upto Rs 50,000 will be provided to those injured in the incident: Maharashtra Minister Vijay Wadettiwar
— ANI (@ANI) August 25, 2020
At least 10 people lost their lives in Raigad building collapse. pic.twitter.com/b7YPSjp54fWe've announced an ex-gratia of Rs 5 lakhs each to the families of the deceased. Financial assistance of upto Rs 50,000 will be provided to those injured in the incident: Maharashtra Minister Vijay Wadettiwar
— ANI (@ANI) August 25, 2020
At least 10 people lost their lives in Raigad building collapse. pic.twitter.com/b7YPSjp54f
ಪರಿಹಾರ ಘೋಷಣೆ
ಘಟನೆಯಲ್ಲಿ ಸಾವನ್ನಪ್ಪಿರುವ ವ್ಯಕ್ತಿಗಳ ಕುಟುಂಬದವರಿಗೆ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ. ಜತೆಗೆ ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿಗಳಿಗೆ 50 ಸಾವಿರ ರೂ. ನೀಡಲಾಗುವುದು ಎಂದು ಸಚಿವ ವಿಜಯ್ ವಾಡೆಟ್ಟಿವರ್ ತಿಳಿಸಿದ್ದಾರೆ. ಮನೆ ಕಳೆದುಕೊಂಡವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕು ಎಂಬುದರ ಕುರಿತು ನಾಳೆಯ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು ಎಂದಿರುವ ಅವರು, ಕಟ್ಟಡ ನಿರ್ಮಾಣದ ವೇಳೆ ಕಳಪೆ ಮಟ್ಟದ ಉಪಕರಣ ಬಳಕೆ ಮಾಡಿರುವುದು ಇದಕ್ಕೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.