ETV Bharat / bharat

ಭಾರೀ ಮಳೆ ಸಾಧ್ಯತೆ: 20 ರಾಜ್ಯಗಳಲ್ಲಿ 122 ತಂಡಗಳ ನಿಯೋಜಿಸಿದ ಎನ್​ಡಿಆರ್​ಎಫ್​..!

author img

By

Published : Jul 23, 2020, 5:26 PM IST

ಈ ಬಾರಿ ದೇಶದ ಹಲವೆಡೆ ಹೆಚ್ಚು ಮಳೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಎನ್​ಡಿಆರ್​ಎಫ್​ನಿಂದ ಸುಮಾರು 20 ರಾಜ್ಯಗಳಲ್ಲಿ 120 ತಂಡಗಳು ನಿಯೋಜನೆಗೊಂಡಿವೆ ಎಂದು ಎನ್​ಡಿಆರ್​​ಎಫ್​ ಡಿಜಿ ಸ್ಪಷ್ಟನೆ ನೀಡಿದ್ದಾರೆ.

NDRF
ಎನ್​ಡಿಆರ್​​ಎಫ್

ನವದೆಹಲಿ: ದೇಶದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಬರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸುಮಾರು 20 ರಾಜ್ಯಗಳಲ್ಲಿ ಎನ್​ಡಿಆರ್​ಎಫ್​ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎನ್​ಡಿಆರ್​​ಎಫ್​ ಡಿಜಿ ಎಸ್​.ಎನ್​. ಪ್ರಧಾನ್ ಮಾಹಿತಿ ನೀಡಿದ್ದಾರೆ.

ಈಗಾಗಲೇ ಹಲವು ರಾಜ್ಯಗಳಲ್ಲಿ ತೀವ್ರ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಅಸ್ಸೋಂನಲ್ಲಿ 16 ಹಾಗೂ ಬಿಹಾರದಲ್ಲಿ 21 ತಂಡಗಳನ್ನು ನಿಯೋಜಿಲಾಗಿದ್ದು, ದೇಶಾದ್ಯಂತ ಸುಮಾರು 122 ತಂಡಗಳು ಸಜ್ಜಾಗಿವೆ ಎಂದು ಪ್ರಧಾನ್ ಹೇಳಿದರು.

ಬಿಹಾರದ ಪ್ರವಾಹ ನೇಪಾಳದ ತೆಹ್ರೀ ಪ್ರದೇಶದಲ್ಲಿ ಬೀಳುವ ಮಳೆಯನ್ನು ಅವಲಂಬಿಸಿದ್ದು, ರಾಜ್ಯದಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಎನ್​ಡಿಆರ್​ಎಫ್​ನಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಕೆಲವು ಜಿಲ್ಲೆಗಳ ಗ್ರಾಮಾಂತರ ಪ್ರದೇಶದ ಜನರನ್ನು ಕ್ಯಾಂಪ್​ಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದರು.

ಅಸ್ಸೋಂ ನಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಸ್ಥಳಾಂತರ ಕಾರ್ಯಾಚರಣೆ ನಡೆಯುತ್ತಿದ್ದು, ಈವರೆಗೆ ಸುಮಾರು 40 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಇಲ್ಲಿ ಪ್ರವಾಹಕ್ಕೆ ಭಾರೀ ಪ್ರಮಾಣದ ಹಾನಿಯಾಗಿದೆ ಎಂದು ಪ್ರಧಾನ್​ ಸ್ಪಷ್ಟನೆ ನೀಡಿದರು.

ಇಂಥಹ ಪ್ರದೇಶಗಳಲ್ಲಿ ಸ್ಥಳಾಂತರ ಮಾಡಲು ವಾಯುಮಾರ್ಗದ ಅವಶ್ಯಕತೆ ಇಲ್ಲ. ನಮ್ಮ ತಂಡಗಳು ಪಿಪಿಇ ಕಿಟ್​ ಬಳಸಿ, ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜನರನ್ನು ರಕ್ಷಿಸುವ ಕಾರ್ಯ ಮಾಡುತ್ತಿವೆ. ಕೋವಿಡ್ ಹಾಗೂ ಪ್ರವಾಹ ಎರಡೂ ಸವಾಲುಗಳನ್ನು ನಮ್ಮ ತಂಡಗಳು ಎದುರಿಸುತ್ತಿವೆ. ಪ್ರವಾಹ ಪ್ರದೇಶಗಳಲ್ಲಿ ಹರಿಯುತ್ತಿರುವ ನದಿಗಳು ಅಪಾಯ ಮಟ್ಟದಲ್ಲಿ ಮೀರಿ ಹರಿಯುತ್ತಿವೆ. ಕೋಸಿ, ಗಂಡಕ್, ಕಮಲಾಬನಾಲ್​ ಮುಂತಾದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಪ್ರಧಾನ್ ಆತಂಕ ವ್ಯಕ್ತಪಡಿಸಿದ್ದಾರೆ.

ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಈವರೆಗೆ ಪ್ರವಾಹಕ್ಕೆ ಸಿಲುಕಿ 89 ಮಂದಿ ಸಾವನ್ನಪ್ಪಿದ್ದು, 30 ಜಿಲ್ಲೆಗಳು ಹಾನಿಗೊಳಗಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.