ETV Bharat / bharat

ಎರಡೇ ತಿಂಗಳಲ್ಲಿ ಈ ರಾಜ್ಯದಲ್ಲಿ 121 ಜನ ಆತ್ಮಹತ್ಯೆ: ಕಾರಣ ಏನು ಗೊತ್ತಾ? - ಹಿಮಾಚಲ ಪ್ರದೇಶ ಆತ್ಮಹತ್ಯೆ ಪ್ರಕರಣ

ಕೊರೊನಾ ವೈರಸ್​ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಜನಸಾಮಾನ್ಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿರುವುದು ಒಂದೆಡೆಯಾದರೆ, ಇದರಿಂದ ಹೇರಲಾದ ಲಾಕ್​ಡೌನ್​ನಿಂದ ಸಾಕಷ್ಟು ಜನರು ಹತಾಷೆಗೆ ಒಳಗಾಗಿರುವುದು ಕೂಡಾ ಅಷ್ಟೇ ಸತ್ಯ. ಎಲ್ಲಿಯವರೆಗೆ ಅಂದರೆ ಮನೆಯಲ್ಲಿ ಕುಳಿತು ಜೀವನದ ಬಗ್ಗೆ ಜಿಗುಪ್ಸೆಗೊಂಡ ಹಲವರು ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೂ ಶರಣಾಗುವಂತೆ ಮಾಡಿದೆ.

suicide
ಆತ್ಮಹತ್ಯೆ
author img

By

Published : Jun 17, 2020, 12:14 PM IST

ಶಿಮ್ಲಾ (ಹಿಮಾಚಲ ಪ್ರದೇಶ): ಲಾಕ್​ಡೌನ್​ ಅವಧಿಯ ಕೇವಲ ಎರಡೇ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ದಾಖಲಾದ ಆತ್ಮಹತ್ಯೆಯ ಪ್ರಕರಣಗಳ ಅಂಕಿ-ಅಂಶಗಳು ಆಘಾತ ಉಂಟು ಮಾಡುತ್ತಿವೆ. ಕಳೆದ ಏಪ್ರಿಲ್​ ಹಾಗೂ ಮೇ ತಿಂಗಳಲ್ಲೇ ರಾಜ್ಯಾದ್ಯಂತ ಒಟ್ಟು 121 ಜನ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ವರದಿಯಾಗಿದೆ.

ಭಾನುವಾರವಷ್ಟೇ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ 6 ತಿಂಗಳಿನಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಇದೇ ಸಮಯದಲ್ಲಿ ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ತಿಂಗಳಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ದಾಖಲೆಯ ಹೆಚ್ಚಳ ಕಂಡುಬಂದಿದೆ. ಇದಕ್ಕೆ ಮಾನಸಿಕ ಖಿನ್ನತೆಯೇ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ.

ಏಪ್ರಿಲ್ ಮತ್ತು ಮೇ ತಿಂಗಳ ಲಾಕ್​ಡೌನ್ ಸಮಯದಲ್ಲಿ 121 ಜನರು ತಮ್ಮ ಜೀವನವನ್ನು ತಾವೇ ಅಂತ್ಯ ಕಾಣಿಸಿದ್ದಾರೆ. 2019ರಲ್ಲಿ ರಾಜ್ಯದಲ್ಲಿ ಸುಮಾರು 563 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020 ರಲ್ಲಿ ಈವರೆಗೆ 237 ಆತ್ಮಹತ್ಯೆ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಇದರಲ್ಲಿ ಕೇವಲ ಏಪ್ರಿಲ್ ಮತ್ತು ಮೇ ತಿಂಗಳೊಂದರಲ್ಲೇ ಅತಿ ಹೆಚ್ಚು ಅಂದರೆ, 121 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಈವರೆಗೆ ಕಾಂಗ್ರಾ ಜಿಲ್ಲೆಯಲ್ಲಿ 140 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇನ್ನೊಂದೆಡೆ ಮಂಡಿಯಲ್ಲಿ 82 ಹಾಗೂ ಸೋಲನ್‌ ಜಿಲ್ಲೆಯಲ್ಲಿ 67 ಪ್ರಕರಣಗಳು ದಾಖಲಾಗಿವೆ.

ಏಪ್ರಿಲ್‌ ತಿಂಗಳಲ್ಲಿ 40 ಆತ್ಮಹತ್ಯೆ ಪ್ರಕರಣಗಳು:

ಕೊರೊನಾ ಮಹಾಮಾರಿ ಹರಡುವುದನ್ನು ತಡೆಗಟ್ಟಲು ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ, ಮೊದಲ ಹಂತದ ಲಾಕ್​ಡೌನ್ ಘೋಷಿಸಿದರು. ಮಾರ್ಚ್ 24 ರಿಂದ ಏಪ್ರಿಲ್ 17ರವರೆಗಿನ ಮೊದಲ ಹಂತದ ಲಾಕ್​ಡೌನ್​ಅನ್ನು ಮತ್ತೆ ವಿಸ್ತರಿಸಲಾಗಿತ್ತು. ಈ ಅವಧಿಯಲ್ಲಿ ರಾಜ್ಯದಲ್ಲಿ 40 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.

ಮೇ ತಿಂಗಳಲ್ಲಿ 81 ಜನ ಸೂಸೈಡ್​:

ಮೇ ತಿಂಗಳಲ್ಲಿ ದೇಶಾದ್ಯಂತ ಲಾಕ್‌ಡೌನ್ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಯಿತು. ಈ ಸಂದರ್ಭ ಪೊಲೀಸರು ಹಾಗೂ ಸರ್ಕಾರ ಲಾಕ್​ಡೌನ್​ ನಿಯಮ ಮೀರಿ ಮನೆಯಿಂದ ಹೊರಬಂದ ಜನರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿತು. ಹಿಮಾಚಲದಲ್ಲೂ ಸರ್ಕಾರ ಸಂಪೂರ್ಣ ಕರ್ಫ್ಯೂ ವಿಧಿಸಿತ್ತು. ಹೀಗಾಗಿ ಜನರು ಅನಿವಾರ್ಯವಾಗಿ ಮನೆಗಳಲ್ಲೇ ಬಂಧಿಯಾಗಬೇಕಾಯ್ತು. ಇಂತಹ ಪರಿಸ್ಥಿತಿಯಲ್ಲಿ ಮೇ ತಿಂಗಳಲ್ಲಿ ರಾಜ್ಯದಲ್ಲಿ 81 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಪ್ರಕರಣ ದ್ವಿಗುಣವಾಗಿದೆ. ಹೀಗಾಗಿ ಲಾಕ್‌ಡೌನ್‌ ಅವಧಿಯಲ್ಲಿ ಜನರು ವಿಭಿನ್ನ ಕಾರಣಗಳಿಂದ ಖಿನ್ನತೆಗೆ ಒಳಗಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.