ETV Bharat / bharat

ಐಎನ್‌ಎಸ್ ಶಿವಾಜಿ: ಒಟ್ಟು 12 ಟ್ರೈನಿ ನಾವಿಕರಿಗೆ ಕೋವಿಡ್ -19 ದೃಢ!

ಜೂನ್ 18ರಂದು ಐಎನ್‌ಎಸ್ ಶಿವಾಜಿಯಲ್ಲಿ ವರದಿಯಾದ ಮೊದಲ ಕೋವಿಡ್-19 ಪ್ರಕರಣದ ಬಳಿಕ 12 ಟ್ರೈನಿ ನಾವಿಕರಲ್ಲಿ ಈವರೆಗೆ ವೈರಸ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

corona
corona
author img

By

Published : Jun 24, 2020, 12:50 PM IST

ಪುಣೆ (ಮಹಾರಾಷ್ಟ್ರ): ಭಾರತೀಯ ನೌಕಾಪಡೆ ಪ್ರಮುಖ ತರಬೇತಿ ಸಂಸ್ಥೆಗಳಲ್ಲಿ ಒಂದಾದ ಲೋನಾವಾಲಾ ಮೂಲದ ಐಎನ್‌ಎಸ್ ಶಿವಾಜಿಯ ಕನಿಷ್ಠ 12 ತರಬೇತಿ ನಾವಿಕರಲ್ಲಿ ಈವರೆಗೆ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಪ್ರಕರಣ ಜೂನ್ 18ರಂದು ಪತ್ತೆಯಾಗಿತ್ತು. ಸೋಂಕಿತ ಕೆಡೆಟ್ 157 ತರಬೇತಿ ನಾವಿಕರ ತಂಡದ ಭಾಗವಾಗಿದ್ದು, ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಅವರು ಕರ್ತವ್ಯಕ್ಕೆ ಮರಳಿದ್ದರು ಎಂದು ನೌಕಾ ಕೇಂದ್ರ ತಿಳಿಸಿದೆ.

"ಜೂನ್ ಮೊದಲ ವಾರದಲ್ಲಿ ಅನ್ಲಾಕ್ 1.0ರ ಪ್ರಕಾರ ಲಾಕ್​ಡೌನ್ ಸಡಿಲಿಕೆಯಾದ ಬಳಿಕ ರಜೆಯಲ್ಲಿದ್ದ 157 ಟ್ರೈನಿ ನಾವಿಕರು ಹಿಂತಿರುಗಿ ಬಂದಿದ್ದರು. ಎಲ್ಲರನ್ನೂ 14 ದಿನಗಳವರೆಗೆ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು" ಎಂದು ನೌಕಾ ಕೇಂದ್ರ ಹೇಳಿದೆ.

ಕ್ವಾರಂಟೈನ್ ಅವಧಿಯಲ್ಲಿ ಒಬ್ಬರಲ್ಲಿ ಕೊರೊನಾ ರೋಗ ಲಕ್ಷಣವಿತ್ತು. ಜೂನ್ 18ರಂದು ಅವರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ. ಅದಾದ ಬಳಿಕ ಈವರೆಗೆ ಒಟ್ಟು 12 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.