ಮೇಷ
ನೀವು ಅಸಂತೃಪ್ತರಾದಂತೆ ಕಂಡುಬಂದಿದ್ದೀರಿ. ನೀವು ಪ್ರೀತಿಯಲ್ಲಿರುವುದಾದರೆ ಅದು ವಿವಾದಕ್ಕೆ ಎಡೆ ಮಾಡಿಕೊಡಬಹುದು. ಅದರ ಬಗ್ಗೆ ನಿವೇ ನಿರ್ಧರಿಸಿ.
ವೃಷಭ
ನಿಮ್ಮ ಕಾರ್ಯದೊತ್ತಡದಿಂದ ಬಿಡುವು ಪಡೆದು ಸ್ವಲ್ಪ ವಿನೋದ ಮತ್ತು ವಿಶ್ರಾಂತಿ ಪಡೆಯುವ ದಿನ. ಆದ್ದರಿಂದ, ನಿಮ್ಮ ಮಿತ್ರರು ಹಾಗೂ ಕುಟುಂಬ ಸದಸ್ಯರನ್ನು ವಿನೋದ ತುಂಬಿದ ಸಂಜೆಗಾಇ ಕೊಂಡೊಯ್ದು ಅವರೊಂದಿಗೆ ಸಂತೋಷವಾಗಿ ಕಾಲ ಕಳೆಯಿರಿ.
ಮಿಥುನ
ನೀವು ಇಂದು ಅತ್ಯಂತ ಒತ್ತಡ ಹಾಗೂ ಬೇಡಿಕೆಯ ದಿನವನ್ನು ಎದುರಿಸುತ್ತೀರಿ. ಇಡೀ ದಿನವನ್ನು ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಒಂದು ದಾರಿಗೆ ತರುವುದು ಹೇಗೆಂದು ಆಲೋಚಿಸುತ್ತೀರಿ. ಮೂಡ್ ಏರಿಳಿತಗಳನ್ನೂ ನೀವು ಎದುರಿಸಬಹುದು. ಧ್ಯಾನದ ತಂತ್ರಗಳು ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ನೆರವಾಗುತ್ತವೆ.
ಕರ್ಕಾಟಕ
ಇಂದು ಮನೆಯಲ್ಲಿ ಹಬ್ಬದ ವಾತಾವರಣ ಇದೆ. ಕುಟುಂಬದೊಂದಿಗೆ ನೀವು ಆನಂದಿಸುತ್ತೀರಿ. ಅತಿಥಿಗಳ ಆಗಮನ ಮತ್ತಷ್ಟು ಖುಷಿ ನೀಡುತ್ತದೆ.
ಸಿಂಹ
ಇಂದು ನಿರ್ಧಾರಗಳನ್ನು ಕೈಗೊಳ್ಳಲು ಇತರರ ಅಭಿಪ್ರಾಯಗಳನ್ನು ನಿರೀಕ್ಷಿಸುತ್ತೀರಿ. ನೀವು ಸಂವಹನದಲ್ಲಿ ಇತರರನ್ನು ತಾಳ್ಮೆಯಿಂದ ಆಲಿಸಬೇಕು. ನಿಮ್ಮ ಆತ್ಮವಿಶ್ವಾಸ ಕುಸಿಯುತ್ತಿದೆ, ಆದ್ದರಿಂದ, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ಕನ್ಯಾ
ಇಂದು, ನೀವು ಅತ್ಯಂತ ಉತ್ಸಾಹ ಮತ್ತು ಶಕ್ತಿಯುತವಾಗಿದ್ದೀರಿ. ನಿಮ್ಮ ದಕ್ಷತೆ ಮತ್ತು ಬುದ್ಧಿಮತೆ ನಿಮ್ಮನ್ನು ಶ್ರೇಷ್ಠ ಕಲಾವಿದನಾಗಿ ಪ್ರತ್ಯೇಕವಾಗಿ ನಿಲ್ಲಿಸುತ್ತದೆ. ನಿಮ್ಮ ಮಾತುಗಳನ್ನು ಕಾರ್ಯರೂಪಕ್ಕೆ ತಂದರೆ ಸೃಜನಶೀಲತೆ ಅಪಾರವಾಗಿ ಹರಿಯುತ್ತದೆ. ನೀವು ಹಾಡಿರಿ ಅಥವಾ ಕುಣಿಯಿರಿ ಅದು ನಿಖರ ಮತ್ತು ಕರಾರುವಾಕ್ಕಾಗಿರಬೇಕು. ಪ್ರದರ್ಶನ ಕಲೆ ಅಥವಾ ಸೃಜನಶೀಲ ಬರವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತೀರಿ.
ತುಲಾ
ಕ್ಷುಲ್ಲಕ ವಿಷಯಗಳ ಕುರಿತು ನೀವು ತಲೆ ಕೆಡಿಸಿಕೊಳ್ಳುವುದು ಅಥವಾ ಆತಂಕಗೊಳ್ಳುವುದು ಅಗತ್ಯವಿಲ್ಲ. ಒತ್ತಡ ನಿವಾರಿಸಲು ಪ್ರಯತ್ನಿಸುವಾಗ ಧ್ಯಾನ ನಿಮಗೆ ಅತ್ಯಂತ ಪ್ರಯೋಜನಕಾರಿಯಾಗುತ್ತದೆ. ನೀವು ಅತಿಯಾದ ಕೆಲಸದ ಒತ್ತಡಕ್ಕೆ ಸಿಲುಕಬಹುದು. ಆದ್ದರಿಂದ ಕೆಲಸದಲ್ಲಿ ಅಥವಾ ಮತ್ತಾವುದರಲ್ಲೇ ಆಗಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅನುಕೂಲ ಮತ್ತು ಅನಾನುಕೂಲಗಳನ್ನು ಅಳೆದು ತೂಗಿರಿ.
ವೃಶ್ಚಿಕ
ನೀವು ಇಂದು ಅತ್ಯಂತ ಪರಿಪೂರ್ಣವಾಗಿದ್ದೀರಿ. ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡಲಿದ್ದೀರಿ. ಈ ಮೂಲಕ ಸುತ್ತಲಿನವರೆಗೆ ನೀವು ಮಾದರಿಯಾಗಿ ನಿಲ್ಲಲಿದ್ದೀರಿ.
ಧನು
ಸಂಪೂರ್ಣ ಜಾಗರೂಕತೆಯ ದಿನವಾಗಿದೆ. ನಿಮ್ಮ ಹೃದಯ ಅದರ ಸಂಗಾತಿಯನ್ನು ಕಂಡುಕೊಳ್ಳುವ ದಿನವಾಗಿದ್ದು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ನೀವು ಪ್ರಣಯದೇವತೆಯ ಮುಂದಿನ ಬಲಿಪಶು. ಆದಾಗ್ಯೂ, ನಿಮ್ಮ ಹೆಜ್ಜೆಗಳನ್ನು ಗಮನಿಸಿ, ಬಾಂಧವ್ಯದ ಪ್ರಾರಂಭಿಕ ಹಂತಗಳು ಅತ್ಯಂತ ಸೂಕ್ಷ್ಮವಾಗಿವೆ ಮತ್ತು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ. ಅಲ್ಲದೆ, ನಿಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಬೇಕಾದ ಸಮಯವಾಗಿದೆ.
ಮಕರ
ನೀವು ಅತ್ಯಂತ ಒತ್ತಡದಲ್ಲಿರುತ್ತೀರಿ. ನಿಮ್ಮ ಕೆಲಸದ ಬೇಡಿಕೆಗಳಿಂದ ಕೈ ಕಟ್ಟಿರುವುದರಿಂದ ನಿಮಗೆ ನಿಮ್ಮ ಕುರಿತು ಆಲೋಚಿಸುವುದೂ ಬಹಳ ಕಷ್ಟವಾಗಿದೆ. ನೀವು ಸೃಜನಶೀಲರಾಗಲು ಬಯಸಿದರೆ ಕಾರ್ಯದೊತ್ತಡದಿಂದ ಅಂತಹ ಸ್ವಾತಂತ್ರ್ಯ ದೊರೆಯುವುದಿಲ್ಲ. ನೀವು ಸಮಯ ನಿರ್ವಹಣೆಯ ಕಲೆಯನ್ನು ಕಲಿತಿದ್ದೀರಿ. ಆದ್ದರಿಂದ, ನಿಮ್ಮ ಆದ್ಯತೆಗಳನ್ನು ಸರಿಯಾಗಿ ರೂಪಿಸಿಕೊಂಡಿದ್ದೀರಿ. ಯಶಸ್ಸು ನಿಮಗಾಗಿ ಕಾಯುತ್ತಿದೆ.
ಕುಂಭ
ವಿಶ್ವದ ಎಲ್ಲಾ ಕಡೆಗಳಿಂದ ಏನೋ ಒಂದು ಸಕಾರಾತ್ಮಕತೆ ನಿಮ್ಮ ದಾರಿಯಲ್ಲಿದೆ. ಇಂದು ಇಡೀ ದಿನ ಧನಾತ್ಮಕ ಬೆಳಕಿನಲ್ಲಿದೆ. ನೀವು ನಿಮ್ಮ ಮಿತ್ರರು ಹಾಗೂ ಪ್ರೀತಿಪಾತ್ರರೊಂದಿಗೆ ದಿನವನ್ನು ಆನಂದಿಸುತ್ತೀರಿ.
ಮೀನ
ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಗ್ರಹಗಳು ಪರಿಪೂರ್ಣವಾಗಿ ಹೊಂದಿಕೊಂಡಿವೆ. ಕೆಲಸದಲ್ಲಿ ಇಂದು ನೀವು ಬಯಸಿದ ಫಲಿತಾಂಶವನ್ನು ಸ್ವಾಗತಿಸುತ್ತೀರಿ. ಆದ್ದರಿಂದ ಸಂತೋಷದಲ್ಲಿರುತ್ತೀರಿ. ಶೈಕ್ಷಣಿಕ ಉದ್ದೇಶಗಳಿಗೆ ಮನೆಯಿಂದ ಹೊರಗಡೆ ಹೋಗಲು ಬಯಸುವವರು ಪ್ರಗತಿಯನ್ನು ಕಾಣುತ್ತಾರೆ ಮತ್ತು ಅವರ ಕನಸಿನತ್ತ ಮುನ್ನಡೆಯುತ್ತಾರೆ.