ETV Bharat / bharat

ರಾಜಸ್ಥಾನ ಜೈಲಿನಲ್ಲಿ 116 ಕೈದಿಗಳು, ಜೈಲು ಅಧೀಕ್ಷಕರಿಗೆ ಕೊರೊನಾ ಪಾಸಿಟಿವ್ - ಕೋವಿಡ್‌-19

ದೇಶದಲ್ಲಿ ಕೋವಿಡ್‌ ತನ್ನ ಹಡುವಿಕೆಯನ್ನು ವಿಸ್ತರಿಸಿಕೊಳ್ಳುತ್ತಲೇ ಇದೆ. ರಾಜಸ್ಥಾನದ ಜೈಲ್​ ಒಂದರಲ್ಲಿ 116 ಕೈದಿಗಳು ಮತ್ತು ಜೈಲು ಅಧೀಕ್ಷಕರೊಬ್ಬರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.

116-prisoners-jail-superintendent-test-corona-positive-in-rajasthan-prisoners-being-shifted-elsewhere
ರಾಜಸ್ಥಾನ ಜೈಲಿನಲ್ಲಿ 116 ಕೈದಿಗಳು, ಜೈಲು ಅಧೀಕ್ಷಕರಿಗೆ ಕೊರೊನಾ ಪಾಸಿಟಿವ್
author img

By

Published : May 16, 2020, 11:34 PM IST

Updated : May 17, 2020, 7:33 AM IST

ಜೈಪುರ‌: ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಕೊರೊನಾ ವೈರಸ್‌ ಹರಡುತ್ತಲೇ ಇದೆ. ರಾಜಸ್ಥಾನದ ಜೈಲ್ಲೊಂದರಲ್ಲಿ 116 ಮಂದಿ ಕೈದಿಗಳು ಹಾಗೂ ಜೈಲು ಅಧೀಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೊಡ್ಡ ಪ್ರಮಾಣದಲ್ಲಿ ವೈರಸ್‌ ಹರಡುತ್ತಿರುವುದರಿಂದ ಎಚ್ಚೆತ್ತಿರುವ ಜೈಲಿನ ಆಡಳಿತಾಧಿಕಾರಿಗಳು ವಿಶೇಷ ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಜೈಲಿನ ಡಿಐಜಿ ವಿಕಾಸ್‌ ಕುಮಾರ್‌, ಜೈಪುರ ಜಿಲ್ಲಾ ಕಾರಾಗೃಹದಲ್ಲಿ 480 ಮಂದಿ ಕೈದಿಗಳಿದ್ದಾರೆ. ಜೈಲು ಅಧೀಕ್ಷಕರು ಸೇರಿ 9 ಮಂದಿ ಕೈದಿಗಳಿಗೆ ಕೊರೊನಾ ಸೋಂಕು ತಗುಲಿರುವುದರಿಂದ ತಿಳಿದ ಕೂಡಲೇ ಇವರಿಂದ ಇತರ ಕೈದಿಗಳ ಪ್ರತ್ಯೇಕಗೊಳಿಸಲಾಗಿತ್ತು. ಇದಾದ ಬಳಿಕ 116 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಹೇಳಿದ್ದಾರೆ.

ಇನ್ನೂ ಕೆಲವರ ವರದಿಗಳು ಬರಬೇಕಿದೆ. ಜೈಲಿನಲ್ಲಿದ್ದ 55 ವರ್ಷಕ್ಕಿಂತ ಮೇಲ್ಪಟ್ಟವರನ್ನೆಲ್ಲ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಉಳಿದಂತೆ ಜೈಲಿನ ಒಳಗಡೆಯೇ ಮೂರು ವಾರ್ಡ್‌ಗಳನ್ನು ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ ಎಂದು ಕುಮಾರ್‌ ಅವರು ತಿಳಿಸಿದ್ದಾರೆ.

ಇಲ್ಲಿದ್ದ ಇತರ ಕೈದಿಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗಿದೆ. ಎಲ್ಲರನ್ನೂ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದ್ದು, ಐಸೋಲೇಷನ್‌ ವಾರ್ಡ್‌ಗಳಲ್ಲಿ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Last Updated : May 17, 2020, 7:33 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.