ETV Bharat / bharat

ಹರಿಯಾಣದಲ್ಲಿ ಗುರುವಾರ 11 ಸಾವು: ತೆಲಂಗಾಣದಲ್ಲಿ ಒಂದೇ ದಿನ 1200ಕ್ಕೂ ಹೆಚ್ಚು ಕೇಸ್​​​​​

author img

By

Published : Jul 3, 2020, 8:09 AM IST

ಹರಿಯಾಣದಲ್ಲಿ ಗುರುವಾರ ಅತೀ ಹೆಚ್ಚು 568 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 11 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,509 ಆಗಿದೆ. ಇನ್ನು ತೆಲಂಗಾಣದಲ್ಲೂ ಒಂದೇ ದಿನ 1200ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, 18,500ರ ಗಡಿ ದಾಟಿದೆ.

Haryana Covid tally
ಹರಿಯಾಣ ಕೊರೊನಾ ಅಪ್ಡೇಟ್​

ಚಂಡೀಗಢ/ ಹೈದರಾಬಾದ್​​ : ಹರಿಯಾಣದಲ್ಲಿ ಗುರುವಾರ 11 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಒಂದು ದಿನದಲ್ಲಿ ಅತಿ ಹೆಚ್ಚು 568 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 15,509 ಆಗಿದೆ.

ಗುರುಗ್ರಾಮದಲ್ಲಿ 4, ಫರೀದಾಬಾದ್​ನಲ್ಲಿ 3, ಕರ್ನಾಲ್​​ನಲ್ಲಿ 2, ರೋಹ್ಟಕ್ ಮತ್ತು ಹಿಸಾರ್​​ನಲ್ಲಿ ತಲಾ ಒಂದು ಸಾವು ಸಂಭವಿಸಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ. ಈ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ 251 ಕ್ಕೇರಿದೆ.

ಗುರುಗ್ರಾಮ ​ಮತ್ತು ಫರೀದಾಬಾದ್​ನಲ್ಲಿ ಅತೀ ಹೆಚ್ಚು ಸಾವು ಸಂಭವಿಸಿದ್ದು, ಎರಡು ಜಿಲ್ಲೆಗಳಲ್ಲಿ ಕ್ರಮವಾಗಿ 96 ಮತ್ತು 83 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 9,597 ಜನ ಸೋಂಕಿಗೆ ತುತ್ತಾಗಿದ್ದಾರೆ.

ಇನ್ನು ಹೈದರಾಬಾದ್​​ ನಗರದಲ್ಲಿ ನಿನ್ನೆ ಒಂದೇ ದಿನ 998 ಜನ ಸೋಂಕಿಗೆ ಸಿಲುಕಿದ್ದಾರೆ. ರಾಜ್ಯದಲ್ಲಿ ಒಟ್ಟು ನಿನ್ನೆಯೇ 1213 ಜನರಿಗೆ ಸೋಂಕು ದೃಢಪಟ್ಟಿದೆ. ಒಟ್ಟಾರೆ ಸಂಖ್ಯೆ 18570ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 275ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.