ETV Bharat / bharat

4ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿ ಅಚ್ಚರಿ ಮೂಡಿಸಿದ 105ರ ಅಜ್ಜಿ! - ಸಾಕ್ಷರತಾ ಮಿಷನ್​ ಯೋಜನೆ

105 ವರ್ಷದ ವೃದ್ಧೆಯೊಬ್ಬರು ನಾಲ್ಕನೇ ತರಗತಿ ಪರೀಕ್ಷೆ ಎದುರಿಸಿ ಉತ್ತೀರ್ಣರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

105-year-old Bageerathi Amma  has passed her exam with 74.5 percent marks.

author img

By

Published : Feb 5, 2020, 8:27 PM IST

Updated : Feb 5, 2020, 11:34 PM IST

ಕೇರಳ: ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ. ಅದಕ್ಕೆ ಇಚ್ಛಾಶಕ್ತಿ ಇರಬೇಕು ಎಂಬುದಕ್ಕೆ ಇಲ್ಲಿದೆ ಒಂದು ಉತ್ತಮ ಉದಾಹರಣೆ. ಹೌದು, ಇಲ್ಲಿನ ಕೊಲ್ಲಂ ಜಿಲ್ಲೆಯ ಪಾರಕುಲಂ ಅದಕ್ಕೆ ಸಾಕ್ಷಿಯಾಗಿದೆ. 105 ವರ್ಷದ ವೃದ್ಧೆಯೊಬ್ಬರು ನಾಲ್ಕನೇ ತರಗತಿ ಪರೀಕ್ಷೆ ಎದುರಿಸಿ ಉತ್ತೀರ್ಣರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕೇರಳದ ಸಾಕ್ಷರತಾ ಮಿಷನ್ ಹಮ್ಮಿಕೊಂಡಿರುವ ಸಮಾನತೆ ಪರೀಕ್ಷೆಯ ನಾಲ್ಕನೇ ತರಗತಿ ಪರೀಕ್ಷೆಯಲ್ಲಿ ಭಾಗೀರಥಿ ಅಮ್ಮ ಎಂಬವರು 275ಕ್ಕೆ 205 ಅಂಕಗಳನ್ನು ಗಳಿಸಿದ್ದಾರೆ. ಶೇ 74.5 ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಪಾಸಾಗಿ ದೇಶದ ಗಮನ ಸೆಳೆದಿದ್ದಾರೆ.

ಭಾಗೀರಥಿ ಅಮ್ಮ

ಭಾಗೀರಥಿ ಅಮ್ಮ ಅವರು ಓದಬೇಕೆಂಬ ಹಂಬಲವನ್ನು ಕೇರಳ ಸರ್ಕಾರ ಹಮ್ಮಿಕೊಂಡಿರುವ ಸಾಕ್ಷರತಾ ಮಿಷನ್​ ಯೋಜನೆಯ ಮೂಲಕ ನೆರವೇರಿಸಿಕೊಂಡಿದ್ದಾರೆ. ಅಜ್ಜಿ ಉತ್ತೀರ್ಣರಾಗುತ್ತಿದ್ದಂತೆ ತನ್ನ ಮಕ್ಕಳೆಲ್ಲಾ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದರು. ವಯಸ್ಸು ಶತಕ ಬಾರಿಸಿದರೂ ನಮ್ಮ ಅಮ್ಮನ ಓದಿನ ಆಸೆ ಬಿಟ್ಟಿಲ್ಲ ಎಂದು ಮಕ್ಕಳು ಹರ್ಷ ವ್ಯಕ್ತಪಡಿಸಿದರು.

ಶಾಲೆ ಬಿಟ್ಟಿದ್ಯಾಕೆ?

ತಾಯಿ ತೀರಿಕೊಂಡ ನಂತರ ಭಾಗೀರಥಿ ಅಮ್ಮ ಅವರು, 3 ನೇ ತರಗತಿಯಲ್ಲಿದ್ದಾಗ (9 ವರ್ಷ) ತನ್ನ ಕಿರಿಯ ಸಹೋದರರನ್ನು ನೋಡಿಕೊಳ್ಳುವ ಸಲುವಾಗಿ ವಿದ್ಯಾಭ್ಯಾಸ ತ್ಯಜಿಸಿದ್ದರು. ಬಳಿಕ 30ನೇ ವರ್ಷದಲ್ಲಿ ಗಂಡನನ್ನು ಕಳೆದುಕೊಂಡಾಗ ನಾಲ್ವರು ಹೆಣ್ಣುಮಕ್ಕಳು ಸೇರಿದಂತೆ ತನ್ನ ಆರು ಮಕ್ಕಳನ್ನು ಬೆಳೆಸುವ ಸಂಪೂರ್ಣ ಜವಾಬ್ದಾರಿ ಅವಳ ಹೆಗಲ ಮೇಲೆ ಬಿದ್ದಿತು. ಈ ಹಿನ್ನೆಲೆಯಲ್ಲಿ ಓದುವ ಆಸೆ ಮತ್ತೊಮ್ಮೆ ಕೈ ಚೆಲ್ಲಿತ್ತು. ಕೊಲ್ಲಂ ಜಿಲ್ಲೆಯ ಪಾರಕುಲಂ ನಿವಾಸದ ಈ ಅಜ್ಜಿಗೆ ಆರು ಮಕ್ಕಳು ಹಾಗೂ 16 ಮೊಮ್ಮಕ್ಕಳಿದ್ದಾರೆ.

105-year-old Bageerathi Amma  has passed her exam with 74.5 percent marks.
ಮಕ್ಕಳೊಂದಿಗೆ ಭಾಗೀರಥಿ ಅಮ್ಮಾ

Last Updated : Feb 5, 2020, 11:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.