ETV Bharat / bharat

ಟಿಎಂಸಿ ನಾಯಕನ ಮಗನ ಅಪಹರಣ, ಕೊಲೆ: ಇಬ್ಬರು ಅಂದರ್​ - ಮಾಲ್ಡಾ ಜಿಲ್ಲೆ

ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡನ ಮಗನನ್ನು ಅಪಹರಿಸಿ, ಹಣಕ್ಕೆ ಬೇಡಿಕೆಯಿಟ್ಟು ಕೊಲೆ ಮಾಡಿದ ಘಟನೆ ಪಶ್ಚಿಮ ಬಂಗಾಳದ ಇಂಗ್ಲಿಷ್​​​ ಬಜಾರ್​ನಲ್ಲಿ ನಡೆದಿದೆ.

tmc leader's son murder
ಟಿಎಂಸಿ ನಾಯಕನ ಮಗನ ಕೊಲೆ
author img

By

Published : Aug 13, 2020, 12:58 PM IST

ಇಂಗ್ಲಿಷ್ ಬಜಾರ್​ (ಪಶ್ಚಿಮ ಬಂಗಾಳ): ಅಪಹರಣಕ್ಕೆ ಒಳಗಾಗಿದ್ದ ತೃಣಮೂಲ ಕಾಂಗ್ರೆಸ್ ನಾಯಕನೊಬ್ಬನ 10 ವರ್ಷದ ಮಗ ಶವವಾಗಿ ಪತ್ತೆಯಾದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ.

ತೃಣಮೂಲ ಕಾಂಗ್ರೆಸ್​ ಪಕ್ಷದ ಪಂಚಾಯತ್ ಸದಸ್ಯರಾದ ಆಯೇಷಾ ಬಿಬಿ ಎಂಬುವವರ ಮಗನಾದ ಓಮರ್ ಫಾರೂಖ್​ ಎಂಬಾತ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈತನನ್ನು ದುಷ್ಕರ್ಮಿಗಳು ಅಪಹರಣ ಮಾಡಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಇದಾದ ಮೂರು ದಿನಗಳ ನಂತರ ಬಾಲಕನ ಶವ ಪತ್ತೆಯಾಗಿದೆ.

ಈ ಘಟನೆ ಮೋಠಬಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಲಿತಾಲಾ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇರುವುದೇ ಬಾಲಕನ ಕೊಲೆಗೆ ಕಾರಣ ಎಂದು ಬಾಲಕನ ಪೋಷಕರು ಆರೊಪ ಮಾಡುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ಸಂಬಂಧಿಗಳಾದ ರಷೀದುಲ್​ ಶೇಖ್​ (18) ಹಾಗೂ ರಂಜಾನ್ ಶೇಖ್ (19) ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೌಟುಂಬಿಕ ಕಲಹವೂ ಘಟನೆಗೆ ಕಾರಣ ಇರಬಹುದೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾನುವಾರ ಸಂಜೆ ಬಾಲಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗಲಾಗಿದ್ದು, ಆನಂತರ ದುಷ್ಕರ್ಮಿಗಳು ಬಾಲಕನ ತಂದೆ ಹಫೀಜುಲ್ ಇಸ್ಲಾಂಗೆ ಕರೆಮಾಡಿ 50 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬೇಡಿಕೆ ಈಡೇರಿಸದ ಕಾರಣ ಬಾಲಕನನ್ನು ಕೊಂದು ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಎಸೆಯಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.