ನವದೆಹಲಿ: ಇದೇ ಮೊದಲ ಬಾರಿಗೆ ಫೇಸ್‌ಬುಕ್ ತನ್ನ ಪೇಜ್ನಲ್ಲಿ ಹಾಕಲಾಗುವ ಪೋಸ್ಟ್ಗಳಲ್ಲಿ ಎಷ್ಟು ದ್ವೇಷವನ್ನು ಬಿತ್ತುವಂತಹವು ಇವೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಮೂರನೇ ತ್ರೈಮಾಸಿಕದಲ್ಲಿ ಫೇಸ್ಬುಕ್ಗೆ ಹಾಕಲಾಗುವ ಪ್ರತಿ 10000 ವಿಡಿಯೋಗಳಲ್ಲಿ 10ರಿಂದ 11 ದ್ವೇಷವನ್ನು ಬಿತ್ತುವಂತಹವು ಇರುತ್ತವೆ ಎಂದಿದೆ.
ಜಾಗತಿಕವಾಗಿ 1.82 ಶತಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್, ಭಾರತದಲ್ಲಿ ದ್ವೇಷವನ್ನು ಹರಡುವಂತಹ ಪೋಸ್ಟ್ಗಳನ್ನು ನಿಭಾಯಿಸಿದ್ದಕ್ಕಾಗಿ ಈ ಹಿಂದೆ ಪ್ರಶಂಸೆಯನ್ನು ಪಡೆದುಕೊಂಡಿತ್ತು. ಸೆಪ್ಟೆಂಬರ್ 2020 ರ ತ್ರೈಮಾಸಿಕದ ಅವಧಿಯಲ್ಲಿ ಮಾನದಂಡಗಳನ್ನು ಜಾರಿಗೊಳಿಸಿದ ವರದಿಯಲ್ಲಿ, ಫೇಸ್‌ಬುಕ್ ಜಾಗತಿಕವಾಗಿ ಮೊದಲ ಬಾರಿಗೆ ದ್ವೇಷವನ್ನು ಹರಡುವಂತ ಪೋಸ್ಟ್ಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಿದೆ.
ನಮ್ಮ ಬುದ್ಧಿವಂತಿಕೆಯನ್ನು ಬಳಸಿ, ನಾವು ಅನೇಕ ದ್ವೇಷ ಬಿತ್ತುವ ವಿಡಿಯೋಗಳನ್ನು ವರದಿ ಮಾಡುವ ಮೊದಲೇ ಗುರುತಿಸಿ ತೆಗೆದುಹಾಕಲು ಸಾಧ್ಯವಾಯಿತು. ಈ ತ್ರೈಮಾಸಿಕದಲ್ಲಿ ನಮ್ಮ ಜಾರಿ ಮಾಪನಗಳಿಂದ ನಾವು ಅನೇಕ ಎಷ್ಟೋ ದ್ವೇಷಪೂರಿತ ಭಾಷಣ ವಿಷಯವನ್ನು ಪೂರ್ವಭಾವಿಯಾಗಿ ಕಂಡುಕೊಂಡಿದ್ದೇವೆ. ಅಲ್ಲದೇ ಎಷ್ಟೋ ವಿಷಯಗಳ ವಿರುದ್ಧ ಕ್ರಮ ಕೈಗೊಂಡು, ಅವು ಎಷ್ಟೂ ಹಾನಿಕಾರಕ ಎಂಬುದನ್ನು ಕಂಡುಕೊಳ್ಳುವಲ್ಲಿ ನಾವು ಪ್ರಗತಿ ಸಾಧಿಸುತ್ತಿದ್ದೇವೆ ಎಂದು ಫೇಸ್‌ಬುಕ್ ಹೇಳಿದೆ.
ಮೂರನೇ ತ್ರೈಮಾಸಿಕದಲ್ಲಿ 22.1 ಮಿಲಿಯನ್ ದ್ವೇಷದ ಭಾಷಣ ವಿಷಯಗಳ ಮೇಲೆ ಫೇಸ್‌ಬುಕ್ ಕ್ರಮ ಕೈಗೊಂಡಿದೆ. ಅದರಲ್ಲಿ ಶೇ.95ರಷ್ಟು ಪೂರ್ವಭಾವಿಯಾಗಿ ಗುರುತಿಸಲ್ಪಟ್ಟಿವೆ. ಇನ್ಸ್ಟಾಗ್ರಾಂನಲ್ಲಿ ಕಂಪನಿಯು 6.5 ಮಿಲಿಯನ್ ದ್ವೇಷದ ಭಾಷಣ ವಿಷಯಗಳ ಮೇಲೆ ಕ್ರಮಕೈಗೊಂಡಿದೆ.