ಗೋರಕ್ಪುರ್: ಕ್ವಾರಾಂಟೈನ್ನಲ್ಲಿದ್ದ 10 ತಿಂಗಳ ಮಗುವೊಂದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಸಿದ್ದಾರ್ಥನಗರ ಜಿಲ್ಲೆಯ ಉಸ್ಕಾ ಬಜಾರ್ನಲ್ಲಿ ನಡೆದಿದೆ.
ಕೊರೊನಾ ಶಂಕೆಯಿಂದ ಉಸ್ಕಾ ಬಜಾರ್ನ ಪ್ರಾಥಮಿಕ ಶಾಲೆಯಲ್ಲಿ ಏರ್ಪಾಡು ಮಾಡಿದ್ದ ಕ್ವಾರಂಟೈನ್ನಲ್ಲಿ ಮಗು ಮೃಪಟ್ಟಿದೆ. ಮಗುವಿಗೆ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಆ್ಯಂಬುಲೆನ್ಸ್ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದರಾದರೂ ವೈದ್ಯರು ಮಗು ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ಮಗುವಿನ ಕುಟುಂಬದವರು ಮುಂಬೈನಿಂದ ಬಂದಿದ್ದರಿಂದ ಚೌರಾಸಿ ನಲ್ಲಿರಲು ತಿಳಿಸಲಾಗಿತ್ತು ಎಂದು ಸಿದ್ದಾರ್ಥನಗರ ಡಿಎಂ ದೀಪಕ್ ಮೀನಾ ತಿಳಿಸಿದ್ದಾರೆ.
"ಮಗು ನಿದ್ದೆ ಮಾಡದೆ ನರಳಾಡುತ್ತಿತ್ತು ಹಾಗೂ ದಡಾರದಂತಹ ಲಕ್ಷಣಗಳು ಕಂಡುಬಂದಿದ್ದರಿಂದ ಗುರುವಾರ ಬೆಳಗ್ಗೆ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಾಲಾಯಿತಾದರೂ ವೈದ್ಯರು ಮಗು ಮೃತಪಟ್ಟಡಿದೆ ಎಂದು ಘೋಷಿಸಿದರು ಎಂದು ಮಗುವಿನ ತಂದೆ ನನಗೆ ತಿಳಿಸಿದ್ದಾರೆ" ಎಂದು ದೀಪಕ್ ಮೀನಾ ಮಾಧ್ಯಮಕ್ಕೆ ಹೇಳಿದರು.
"ಆ ಕುಟುಂಬ ಕ್ವಾರಂಟೈನ್ನಲ್ಲಿ 13 ದಿನ ಕಳೆದಿದ್ದರು. ಶುಕ್ರವಾರ ಅವರ ಕೊನೆ ಕ್ವಾರಂಟೈನ್ ದಿನವಾಗಿತ್ತು. ಆ ಕುಟುಂಬಲ್ಲಿ ಯಾರಿಗೂ ಕೊರೊನಾ ಲಕ್ಷಣಗಳು ಕಂಡುಬಂದಿರಲಿಲ್ಲ. ಮಗುವಿನ ಅಂತ್ಯ ಸಂಸ್ಕಾರವನ್ನು ಅವರ ಗ್ರಾಮದಲ್ಲಿ ನಡೆಸಿದ್ದಾರೆ. ನಾನು ಆ ಹಳ್ಳಿಗೆ ಭೇಟಿ ನೀಡಿ ಕುಟುಂಬದವರನ್ನು ಮಾತನಾಡಿಸಿದ್ದೇನೆ" ಎಂದು ಮೀನಾ ತಿಳಿಸಿದ್ದಾರೆ.
ಮಗುವಿನ ಪೋಷಕರು ಮಾರ್ಚ್ 29ರಂದು ಮುಂಬೈ ನಿಂದ ಬಂದು ಕ್ವಾರಂಟೈನ್ಗೆ ಒಳಗಾಗಿದ್ದರು.