ತೂತುಕುಡಿ : ಜಿಲ್ಲೆಯ ಸಾಥಂಕುಲಂ ಬಳಿಯ ಆನಂದಪುರಂನಲ್ಲಿರುವ ಕ್ಯಾಲ್ವರಿ ಚಾಪೆಲ್ ಟ್ರಸ್ಟ್ ಹೆಚ್‌ಐವಿಯಿಂದ ಬಳಲುತ್ತಿರುವ 10 ಜೋಡಿಗೆ ಮದುವೆ ಮಾಡಿಸಿದೆ.
ಕ್ಯಾಲ್ವರಿ ಚಾಪೆಲ್ ಟ್ರಸ್ಟ್ ಹೆಚ್‌ಐವಿ ಸೋಂಕಿತ ವಿದ್ಯಾರ್ಥಿಗಳನ್ನು ರಕ್ಷಿಸುತ್ತಿದೆ. ಅನೇಕ ವಿದ್ಯಾರ್ಥಿಗಳು ಈ ಟ್ರಸ್ಟ್ ಸಹಾಯದಿಂದ ಶಿಕ್ಷಣ ಪಡೆಯುತ್ತಿದ್ದಾರೆ ಮತ್ತು ಹಲವರು ಉತ್ತಮ ಉದ್ಯೋಗದಲ್ಲಿದ್ದಾರೆ. ಅಷ್ಟೇ ಅಲ್ಲ, ಇದೀಗ ಟ್ರಸ್ಟ್ ಹೆಚ್‌ಐವಿ ಸೋಂಕಿತ ಜೋಡಿಗೆ ಮದುವೆಯನ್ನೂ ಮಾಡಿಸಿದೆ.
ತೂತುಕುಡಿ ಜಿಲ್ಲಾಧಿಕಾರಿ ಸಂದೀಪ್ ನಂದೂರಿ ಸಮ್ಮುಖದಲ್ಲಿ 10 ಹೆಚ್‌ಐವಿ ಪೀಡಿತ ಜೋಡಿಗಳ ವಿವಾಹ ಕಾರ್ಯಕ್ರಮ ನಡೆಯಿತು. ಇದರಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ, ಸುಮಾರು 50ಕ್ಕೂ ಅಧಿಕ ಹೆಚ್‌ಐವಿ ಸೋಂಕಿತರು ಇಲ್ಲಿ ಸುಶಿಕ್ಷಿತರಾಗಿದ್ದಾರೆ ಮತ್ತು ಉತ್ತಮ ಉದ್ಯೋಗ ಪಡೆದಿದ್ದಾರೆ ಎಂಬುವುದರಲ್ಲಿ ತುಂಬಾ ಸಂತೋಷವಿದೆ ಎಂದರು. ಕಾರ್ಯಕ್ರಮದ ಕೊನೆಯಲ್ಲಿ ದಕ್ಷಿಣ ಜಿಲ್ಲೆಗಳಲ್ಲಿ ಹೆಚ್‌ಐವಿ ಪೀಡಿತರಿಗೆ ಸಹಾಯ ಮಾಡಲು ಬಯಸುವವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.