ETV Bharat / bharat

​ಕಾನ್ಪುರದ ಹಂತಕ ವಿಕಾಸ್ ದುಬೆಯ ಮೂವರು ಸಹಚರರ ಬಂಧನ, 10 ಕಾನ್‌ಸ್ಟೇಬಲ್‌ಗಳ ವರ್ಗಾವಣೆ - ರೌಡಿಶೀಟರ್ ​ವಿಕಾಸ್ ದುಬೆ

ಎಂಟು ಮಂದಿ ಪೊಲೀಸರು ಹತ್ಯೆಯಾಗಿದ್ದ ಉತ್ತರ ಪ್ರದೇಶದ ಕಾನ್ಪುರ ಎನ್​ಕೌಂಟರ್​ ಪ್ರಕರಣ ಸಂಬಂಧ ರೌಡಿಶೀಟರ್ ​ವಿಕಾಸ್ ದುಬೆಯ ಮೂವರು ಸಹಚರರನ್ನು ಬಂಧಿಸಲಾಗಿದ್ದು, 10 ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

kanpur encounter
ವಿಕಾಸ್ ದುಬೆ
author img

By

Published : Jul 7, 2020, 12:33 PM IST

ಕಾನ್ಪುರ (ಉತ್ತರ ಪ್ರದೇಶ): ಕಾನ್ಪುರ ಎನ್​ಕೌಂಟರ್​ ಪ್ರಕರಣ ಸಂಬಂಧ ರೌಡಿಶೀಟರ್ ​ವಿಕಾಸ್ ದುಬೆಯ ಮೂವರು ಸಹಚರರನ್ನು ಬಂಧಿಸಲಾಗಿದ್ದು, 10 ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಬೇರೆಡೆ ವರ್ಗಾಯಿಸಲಾಗಿದೆ.

ಜುಲೈ 3 ರಂದು ಕಾನ್ಪುರದ ಬಿಕ್ರು ಗ್ರಾಮದಲ್ಲಿ ವಿಕಾಸ ದುಬೆ ಬಂಧನಕ್ಕೆ ತೆರಳಿದ್ದ ವೇಳೆ, ಆತ ಹಾಗೂ ಆತನ ಸಹಚರರು ಪೊಲೀಸರ ಮೇಲೆಯೇ ದಾಳಿ ನಡೆಸಿ 8 ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು. ಬಳಿಕ ಕೂಂಬಿಂಗ್​ ಕಾರ್ಯಾಚರಣೆ ವೇಳೆ ದುಬೆಯ ಇಬ್ಬರು ಬಂಟರನ್ನು ಪೊಲೀಸರು ಹತ್ಯೆಗೈದಿದ್ದರು. ಈ ಸಂಬಂಧ ವಿಕಾಸ ದುಬೆ ಸೇರಿ 35 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಜುಲೈ 3ರ ಬಳಿಕ ನಡೆದದ್ದೇನು?

ಈ ಸಂಬಂಧ ಈಗಾಗಲೇ ವಿಕಾಸ್ ದುಬೆಯ ಓರ್ವ ಬಂಟನನ್ನು ಎನ್​ಕೌಂಟರ್​ ಮಾಡಿ ಬಂಧಿಸಲಾಗಿತ್ತು. ಅಲ್ಲದೇ ದುಬೆ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಇಬ್ಬರು ಸಬ್​ ಇನ್ಸ್​ಪೆಕ್ಟರ್​ ಹಾಗೂ ಮೂವರು ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿತ್ತು. ಹಾಗೆಯೇ ವಿಕಾಸ್​ ದುಬೆ ಮನೆಯನ್ನು ಕಾನ್ಪುರ ಜಿಲ್ಲಾಡಳಿತ ನೆಲಸಮ ಮಾಡಿತ್ತು. ಹಾಗೆಯೇ ವಿಕಾಸ್ ದುಬೆ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಗೆ 2.5 ಲಕ್ಷ ನೀಡುವುದಾಗಿ ಐಜಿ ಮೋಹಿತ್ ಅಗರವಾಲ್‌ ಘೋಷಿಸಿದ್ದಾರೆ.

ದುಬೆಯ ಮೂವರು ಸಹಚರರು ಅರೆಸ್ಟ್:

ಇಂದು ಮತ್ತೆ ವಿಕಾಸ್ ದುಬೆಯ ಸೋದರಳಿಯ ಸಂಜಯ್ ದುಬೆಯ ಪತ್ನಿ, ದುಬೆ ಮನೆಯ ಬಾಣಸಿಗನ ದಯಾ ಶಂಕರ್​ನ ಪತ್ನಿ ರೇಖಾ ಅಗ್ನಿಹೋತ್ರಿ ಹಾಗೂ ಸುರೇಶ್ ವರ್ಮಾ ಎಂಬವರನ್ನು ಅರೆಸ್ಟ್​ ಮಾಡಲಾಗಿದೆ. ಈ ಮೂವರ ವಿರುದ್ಧ ಸೆಕ್ಷನ್ 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸದ ಬಳಿಕ ಜೈಲಿಗೆ ಕಳುಹಿಸಲಾಗುವುದು ಎಂದು ಕಾನ್ಪುರ್ ಎಸ್‌ಎಸ್‌ಪಿ ದಿನೇಶ್ ಕುಮಾರ್ ಪ್ರಭು ಮಾಹಿತಿ ನೀಡಿದ್ದಾರೆ.

10 ಕಾನ್‌ಸ್ಟೇಬಲ್‌ಗಳ ವರ್ಗಾವಣೆ:

ಈ ಪ್ರಕರಣ ಸಂಬಂಧ ಹತ್ತು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಸೋಮವಾರ ಕಾನ್ಪುರದ ಚೌಬೆಪುರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಕಾನ್ಪುರ ಗಲಭೆಯಲ್ಲಿ ಹುತಾತ್ಮರಾಗಿದ್ದ ದೇವೇಂದ್ರ ಮಿಶ್ರಾ ಎಂಬ ಪೊಲೀಸ್, ಘಟನೆಗೂ ಮುನ್ನ ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ ಪತ್ರವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆ ಪತ್ರದಲ್ಲಿ ಎಸ್‌ಒ ವಿನಯ್ ತಿವಾರಿ ಮತ್ತು ವಿಕಾಸ್ ದುಬೆ ನಡುವಿನ ಸಂಬಂಧದ ಬಗ್ಗೆ ಸುಳಿವು ದೊರೆತಿದೆ. ಈ ಪತ್ರದ ಆಧಾರದ ಮೇಲೆ ಐಜಿ ಮೋಹಿತ್ ಅಗರ್ವಾಲ್ ತನಿಖೆಗೆ ಆದೇಶಿಸಿದ್ದಾರೆ. ಹೀಗಾಗಿ ಚೌಬೆಪುರ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಕಾನ್ಪುರ ಎನ್​ಕೌಂಟರ್​ ಪ್ರಕರಣ ನಡೆದು ಐದು ದಿನಗಳಾದರೂ ವಿಕಾಸ್​ ದುಬೆ ಮಾತ್ರ ಇನ್ನೂ ಸಿಕ್ಕಿಲ್ಲ. ಆರೋಪಿಗಾಗಿ ತೀವ್ರ ಶೋಧ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.