ETV Bharat / bharat

ದೇಶದಲ್ಲಿ19 ವರ್ಷಗಳಲ್ಲಿ ಹಾವು ಕಡಿತದಿಂದ 12 ಲಕ್ಷ ಜನ ಸಾವು! - 1.2 million snakebite deaths in India

ಹಾವು ಕಡಿತಕ್ಕೆ ಬಲಿಯಾದವರಲ್ಲಿ ಅರ್ಧದಷ್ಟು ಜನರು 30 ರಿಂದ 69 ವರ್ಷ ವಯಸ್ಸಿನವರಾಗಿದ್ದಾರೆ. ನಾಲ್ಕನೇ ಒಂದು ಭಾಗದಷ್ಟು ಜನ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎಂದು ಅಧ್ಯಯನ ಹೇಳಿದೆ..

snake
ಹಾವು
author img

By

Published : Jul 11, 2020, 6:23 PM IST

ಹೈದರಾಬಾದ್ : 2000ದಿಂದ 2019ರ ನಡುವೆ ಭಾರತದಲ್ಲಿ ಹಾವಿನ ಕಡಿತದಿಂದ ಅಂದಾಜು 12 ಲಕ್ಷ ಜನ ಸಾವನ್ನಪ್ಪಿದ್ದಾರೆ ಎಂದು ಅಧ್ಯಯನವೊಂದರಿಂದ ಬಹಿರಂಗವಾಗಿದೆ. ಇದರಲ್ಲಿ ಹೆಚ್ಚಿನ ಪ್ರಕರಣ ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಸಂಭವಿಸಿದೆಯಂತೆ.

ಭಾರತ ಮತ್ತು ಯುಕೆ ಜೊತೆಗೂಡಿ ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಗ್ಲೋಬಲ್ ಹೆಲ್ತ್ ರಿಸರ್ಚ್ (CGHR) ನಡೆಸಿದ ಸಂಶೋಧನಾ ಅಧ್ಯಯನದ ಪ್ರಕಾರ, ಜೂನ್‌ನಿಂದ ಸೆಪ್ಟೆಂಬರ್​ವರೆಗೆ ಮಳೆಗಾಲದ ಅವಧಿಯಲ್ಲೇ ಸುಮಾರು ಅರ್ಧದಷ್ಟು ಹಾವು ಕಡಿತದಿಂದ ಸಾವು ಸಂಭವಿಸಿವೆ ಎಂದು ವರದಿ ಹೇಳಿದೆ.

ಪ್ರಮುಖ ಅಂಶವೆಂದ್ರೆ, ಬಲಿಯಾದವರಲ್ಲಿ ಅರ್ಧದಷ್ಟು ಜನರು 30 ರಿಂದ 69 ವರ್ಷ ವಯಸ್ಸಿನವರಾಗಿದ್ದಾರೆ. ಕಾಲು ಭಾಗದಷ್ಟು ಜನ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎಂದು ಅಧ್ಯಯನ ಹೇಳಿದೆ. ಒಟ್ಟು ಪ್ರಕರಣಗಳ ಸುಮಾರು 70 ಶೇ. ಕೇಸ್​, ಕೇವಲ ಎಂಟು ರಾಜ್ಯಗಳಲ್ಲೇ ವರದಿಯಾಗಿವೆಯಂತೆ.

70 ವರ್ಷ ವಯಸ್ಸಾಗುವ ಮುಂಚೆ ಭಾರತೀಯನೊಬ್ಬ ಹಾವಿನ ಕಡಿತದಿಂದ ಸಾಯುವ ಸರಾಸರಿ ಅಪಾಯ 250ರಲ್ಲಿ ಒಬ್ಬರಿಗಿದೆ. ಆದರೆ, ಕೆಲವು ಪ್ರದೇಶಗಳಲ್ಲಿ, ಈ ಅಪಾಯವು 100ರಲ್ಲಿ ಒಬ್ಬರಂತಿದೆ ಎಂದು ಅಧ್ಯಯನ ಹೇಳುತ್ತದೆ.

ಜಾಗತಿಕವಾಗಿ ಪ್ರತಿವರ್ಷ 54 ಲಕ್ಷ ಜನರು ಹಾವು ಕಡಿತಕ್ಕೊಳಗಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಅದರಲ್ಲಿ ಪ್ರತಿ ವರ್ಷ 1,00,000 ಜನರು ಹಾವು ಕಡಿತದಿಂದ ಸಾವನ್ನಪ್ಪುತ್ತಾರೆ ಮತ್ತು 4,00,000 ಜನರು ಇದರಿಂದಾದ ಗಾಯಗಳಿಂದ ಅಂಗವಿಕಲರಾಗಿದ್ದಾರೆ. ಹೀಗಾಗಿ ಹಾವು ಕಡಿತವು ಪ್ರಕರಣ ಈಗ ಜಾಗತಿಕ ಆರೋಗ್ಯ ಆದ್ಯತೆಯಾಗಿದೆ ಎಂದು WHO ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.