ETV Bharat / bharat

ಆಪಲ್ ಸೀಡರ್ ವಿನೇಗರ್ ಸೇವನೆಯಿಂದ ಏನೇನು ಲಾಭ ಗೊತ್ತಾ? - Health Benefits of Apple Cider Vinegar

ವಿನೇಗರ್​​ನ‪ನ್ನು ನಾವು ಹೆಚ್ಚಾಗಿ ಆಹಾರ ತಯಾರಿಕೆ ವೇಳೆ ಬಳಸುತ್ತೇವೆ. ಆಹಾರಕ್ಕೆ ಹುಳಿ ನೀಡುವ ಇದು ಆರೋಗ್ಯಕ್ಕೂ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದರಲ್ಲೂ ಆಪಲ್ ಸೀಡರ್ ವಿನೇಗರ್ ಇಂದಿನ ದಿನಗಳಲ್ಲಿ ತುಂಬಾ ಜನಪ್ರಿಯವಾಗಿದೆ.ಈ ಆಪಲ್ ಸೀಡರ್ ವಿನೇಗರ್​ನನ್ನು ಹಿಂದಿನಿಂದಲೂ ಆರೋಗ್ಯ ವರ್ಧಕವಾಗಿ ಬಳಸಿಕೊಂಡು ಬರಲಾಗುತ್ತಿದೆ. ಇದು ಟೈಪ್ 2 ಮಧುಮೇಹ, ಇಸಬು ಮತ್ತು ಕೊಲೆಸ್ಟ್ರಾಲ್​ನನ್ನು ಕೂಡ ಕಡಿಮೆ ಮಾಡುವುದು ಎಂದು ಹೇಳಲಾಗ್ತಿದೆ.

ಆಪಲ್ ಸೀಡರ್ ವಿನೇಗರ್ ಸೇವನೆ
ಆಪಲ್ ಸೀಡರ್ ವಿನೇಗರ್ ಸೇವನೆ
author img

By

Published : Nov 4, 2020, 6:55 PM IST

ಸೇಬಿನ ರಸದಿಂದ ತಯಾರಿಸಲಾಗುವ ಒಂದು ರೀತಿಯ ಮದ್ಯದ ಅಂಶಕ್ಕೆ ರೂಪಾಂತರವಾಗುವ ರಸಕ್ಕೆ ಆಪಲ್‌ ಸೈಡರ್ ವಿನೆಗರ್ ಎಂದು ಕರೆಯಲಾಗುತ್ತದೆ. ಇದನ್ನು ಹಲವಾರು ರೋಗಗಳನ್ನು ಗುಣಪಡಿಸಲು ಮತ್ತು ಸೋಂಕುಗಳಾದ ಸೈನುಟಿಸ್, ಜ್ವರ, ಮತ್ತು ಫ್ಲೂ ಮೊದಲಾದವುಗಳನ್ನು ಗುಣಪಡಿಸಲು ಬಳಸಲಾಗುತ್ತಿದೆ.ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸಲು ಮತ್ತು ಖಿನ್ನತೆ, ಆಯಾಸ, ಸಂಧಿವಾತದಂತಹ ಅನೇಕ ದೀರ್ಘಕಾಲದ ಖಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯಕವಾಗಿದೆ. ಇದು ಎಲ್ಲಾ ಕಡೆ ಕೈಗೆಟಕುವ ದರದಲ್ಲಿ ಲಭ್ಯವಿದೆ.

ಆಪಲ್ ಸೈಡರ್ ವಿನೆಗರ್(ಎಸಿವಿ)ನನ್ನು ಬಳಸುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ತಿಳಿದುಬಂದಿದೆ. ಆದಾಗ್ಯೂ ಎಸಿವಿ ಆರೋಗ್ಯಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದರ ಕುರಿತು ಹೆಚ್ಚಿನ ಪುರಾವೆಗಳನ್ನು ಕಂಡುಹಿಡಿಯಲು ಸಂಶೋಧನೆ ಇನ್ನೂ ನಡೆಯುತ್ತಿದೆ. ಎಸಿವಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಡಾ.ಟಿ.ಸೈಲಾಜಾ, ಬಿ.ಎ.ಎಂ.ಎಸ್ ಎಂಡಿ (ಆಯುರ್ವೇದ), ಆಯುರ್ಕೇರ್, ಅವರೊಂದಿಗೆ ಮಾತನಾಡಿದ್ದು, ಅವರು ಹಲವು ಮಾಹಿತಿಯನ್ನು ನೀಡಿದ್ದಾರೆ.

ಎಸಿವಿ ಎರಡು ರೂಪಗಳಲ್ಲಿ ಲಭ್ಯವಿದೆ. ಮೊದಲನೇಯದು ಫಿಲ್ಟರ್ ಮಾಡದ ಅಥವಾ ಸಂಸ್ಕರಿಸದ್ದು,ಇದು ಎಲ್ಲಾ ಪ್ರೋಟೀನ್​ಗಳನ್ನು ಮತ್ತು ಉತ್ತಮ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ಇನ್ನೊಂದು ಸಂಸ್ಕರಿಸಿರುವುದು.ಇದಲ್ಲದೆ ಎಸಿವಿಯನ್ನು ಅದರ ರುಚಿ ಮತ್ತು ವಾಸನೆಯಿಂದ ದ್ರವ ರೂಪದಲ್ಲಿ ತೆಗೆದುಕೊಳ್ಳಲು ಸಾಧ್ಯವಾಗದ ಜನರು, ಟ್ಯಾಬ್ಲೆಟ್ ರೂಪವೂ ಪರ್ಯಾಯವಾಗಿ ಲಭ್ಯವಿದೆ. ಮಾತ್ರೆಗೆ ಅರಿಶಿನ ಮತ್ತು ಮೆಣಸಿನಂತಹ ಪದಾರ್ಥಗಳನ್ನು ಸೇರಿಸಲಾಗುತ್ತದೆ.

ಆಪಲ್ ಸೀಡರ್ ವಿನೇಗರ್ ಸೇವನೆ
ಆಪಲ್ ಸೀಡರ್ ವಿನೇಗರ್ ಸೇವನೆ

ಆಪಲ್ ಸೈಡರ್ ವಿನೆಗರ್​ನ ಆರೋಗ್ಯ ಪ್ರಯೋಜನಗಳು:

ಎಸಿವಿಯ ಕೆಲವು ಆರೋಗ್ಯ ಪ್ರಯೋಜನಗಳನ್ನು ಡಾ. ಸೈಲಾಜಾ ವಿವರಿಸುತ್ತಾರೆ. ಅದನ್ನು ಹೇಗೆ ಸೇವಿಸಬೇಕು/ಬಳಸಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಮಿಶ್ರಣವನ್ನು ಸೇವಿಸಬಹುದು:

1 ಟೀಸ್ಪೂನ್ ಎಸಿವಿಯನ್ನು 1 ಗ್ಲಾಸ್ (500 ಮಿಲಿ) ನೀರಿನಲ್ಲಿ ಹಾಕಿ ಕಲಕಿ ಕುಡಿಯಬಹುದಾಗಿದೆ.

ಮಧುಮೇಹ:

ನಿಯಮಿತವಾಗಿ ಆಪಲ್ ಸೀಡರ್ ವಿನೇಗರ್ ಸೇವನೆ ಮಾಡಿದರೆ ಅದು ಮಧುಮೇಹಿಗಳಿಗೆ ತುಂಬಾ ಸಹಕಾರಿ. ಇದು ಹೊಟ್ಟೆಯು ಖಾಲಿಯಾಗುವುದನ್ನು ನಿಧಾನಗೊಳಿಸುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗದಂತೆ ತಡೆಯುವುದು.ಆಪಲ್ ಸೀಡರ್ ವಿನೇಗರ್ ಸೇವನೆ ಮಾಡಿದರೆ ಅದು ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಿಸಲು ಸಹಕಾರಿ ಎಂದು ಸಾಬೀತಾಗಿದೆ. ರಾತ್ರಿ ಮಲಗುವ ಮೊದಲು ನೀರಿಗೆ ಬೆರೆಸಿ ಇದನ್ನು ಸೇವಿಸಿದರೆ ತುಂಬಾ ಸಹಕಾರಿ.

ಬೊಜ್ಜು ಕಡಿಮೆ ಮಾಡಲು ಎಸಿವಿ ಸೇವನೆ:

ಅಧಿಕ ತೂಕ ಹೊಂದಿರುವ ಜನರಿಗೆ ಎಸಿವಿ ಉತ್ತಮವಾಗಿದೆ. ಇದು ಹಸಿವನ್ನು ಕಡಿಮೆ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ.ಅಧಿಕ ರಕ್ತದ ಕೊಲೆಸ್ಟ್ರಾಲ್ ನಿಮ್ಮ ಹೃದಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.ಎಸಿವಿ ಪ್ರಕೃತಿಯಲ್ಲಿ ಆಮ್ಲೀಯವಾಗಿರುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ತಪ್ಪಿಸಲು 2 ಟೀಸ್ಪೂನ್ ಜೇನುತುಪ್ಪವನ್ನು ಸೇರಿಸಿ ಸೇವಿಸಿ.

ಹೃದಯದ ಆರೋಗ್ಯ ಕಾಪಾಡುತ್ತದೆ:

ಎಸಿವಿ ಹಲವಾರು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದಯದ ಅಪಾಯಗಳ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದು ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಮಿಶ್ರಣಕ್ಕೆ 2 ಟೀಸ್ಪೂನ್ ಜೇನುತುಪ್ಪವನ್ನು ಸೇರಿಸಿ ಸೇವಿಸಬಹುದಾಗಿದೆ.

ಡೀಪ್ ವೇನ್​ ಥ್ರಂಬೋಸಿಸ್ (ಡಿವಿಟಿ):

ಅಪಧಮನಿಗಳ ಅಡಚಣೆಯಿಂದ ಡಿವಿಟಿ ಉಂಟಾಗುತ್ತದೆ. ಆದ್ದರಿಂದ ಎಸಿವಿ ಅಂತಹ ಸ್ಥಿತಿಯನ್ನು ಹೊಂದಿರುವ ಜನರಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸಿದೆ. ವಿಶೇಷವಾಗಿ ಅದರ ತೂಕವನ್ನು ಕಡಿಮೆ ಮಾಡುವ ಗುಣಲಕ್ಷಣಗಳಿಂದಾಗಿ.

ಅತಿಸಾರ:

ಕೆಲವು ಜನರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇರುತ್ತದೆ. ಅಂತವರು ಊಟ ಮಾಡಿದ ನಂತರ ಮಲವಿಸರ್ಜನೆ ಮಾಡುವ ಹಂಬಲವನ್ನು ಹೊಂದಿರುತ್ತಾರೆ. ಎಸಿಟಿವಿ ಸೂಕ್ತವಾಗಿ ಬರಬಹುದು. ಏಕೆಂದರೆ ಇದು ಪೆಕ್ಟಿನ್ ಎಂಬ ವಸ್ತುವನ್ನು ಒಳಗೊಂಡಿರುತ್ತದೆ. ಇದು ದೇಹವನ್ನು ದೊಡ್ಡ ಪ್ರಮಾಣದ ನಾರಿನಂಶವನ್ನು ತಯಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇದು ಅತಿಸಾರವನ್ನು ನಿಲ್ಲಿಸುತ್ತದೆ. ರೋಗಲಕ್ಷಣಗಳು ಕಡಿಮೆಯಾಗುವವರೆಗೆ ಇದನ್ನು ಊಟದ ನಂತರ ತೆಗೆದುಕೊಳ್ಳಬಹುದು.

ಗಾರ್ಗ್ಲ್:

2 ಕಪ್ ನೀರಿಗೆ 1 ಟೀಸ್ಪೂನ್ ಎಸಿವಿ ಸೇರಿಸಿ

ಬಾಯಿ ಮತ್ತು ಗಂಟಲು:

ಎಸಿವಿ ಸಹಾಯದಿಂದ ನೋಯುತ್ತಿರುವ ಗಂಟಲು, ದುರ್ವಾಸನೆ ಮತ್ತು ಹಲ್ಲುಗಳ ಮೇಲೆ ಪ್ಲೇಕ್ ರಚನೆಯಂತಹ ಸಮಸ್ಯೆಗಳನ್ನು ಸಹ ನಿಭಾಯಿಸಬಹುದು. ನೀವು ಬೆಳಿಗ್ಗೆ 5-10 ನಿಮಿಷಗಳ ಕಾಲ ದ್ರಾವಣದೊಂದಿಗೆ ಬಾಯಿಯನ್ನು ಸ್ವಚ್ಛಗೊಳಿಸುವುದರಿಂದ ಇವೆಲ್ಲಾ ಸಮಸ್ಯೆಯಿಂದ ದೂರವಾಗಬಹುದು.

ಉಸಿರಾಡಲು ತೊಂದರೆ:

ಬೇಯಿಸಿದ ನೀರಿನ ಪಾತ್ರೆಯಲ್ಲಿ 1 ಟೀಸ್ಪೂನ್ ಸೇರಿಸಿ (5 ಲೀಟರ್ ಅಂದಾಜು)

ಸೈನಸ್ ತೊಂದರೆ:

ಸೈನುಟಿಸ್ ಇರುವ ಜನರಿಗೆ ಮೂಗು ಕಟ್ಟಿಕೊಳ್ಳುವುದರಿಂದ ನಿರಂತರ ಕಿರಿಕಿರಿ ಮತ್ತು ತುರಿಕೆಯಾಗುತ್ತಿರುತ್ತದೆ. ಇಂತವರಿಗೆ ಆವಿಯಾಗುವಿಕೆ ಸೂಕ್ತವಾಗಿದೆ. 5-10 ನಿಮಿಷಗಳ ಕಾಲ ಇದನ್ನು ಮಾಡಿ. ಇದು ತಕ್ಷಣ ಕಟ್ಟಿರುವ ಮೂಗು ತೆರೆಯುವಂತೆ ಮಾಡಿ, ಸರಿಯಾಗಿ ಉಸಿರಾಡಲು ಸಹಾಯ ಮಾಡುತ್ತದೆ. ನೀರನ್ನು ಕುದಿಸುವ ಮೊದಲು ಎಸಿವಿ ಸೇರಿಸಬೇಡಿ. ನೀರು ಹವೆ ಬರುವಂತೆ ಬಿಸಿಯಾದ ಮೇಲೆ ಎಸಿವಿ ಸೇರಿಸಿ.

ಇತರ ಉಪಯೋಗಗಳು:

2 ಕಪ್ ನೀರಿಗೆ 1 ಟೀಸ್ಪೂನ್ ಎಸಿವಿ ಸೇರಿಸಿ (250 ಮಿಲಿ ಅಂದಾಜು)

ಚರ್ಮದ ಆರೈಕೆ:

ಆಪಲ್ ಸೈಡರ್ ವಿನೆಗರ್ ಕೇವಲ ನಿಮ್ಮ ಆಂತರಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಮೊಡವೆ ಚಿಕಿತ್ಸೆ ಮತ್ತು ಕಲೆ ಕಡಿಮೆಗೊಳಿಸಲು ಬಹಳ ಉಪಯುಕ್ತವಾಗಿದೆ. ಬ್ಯಾಕ್ಟೀರಿಯಾದ ಕೆಲವು ತಳಿಗಳು ಮೊಡವೆ ಬೆಳವಣಿಗೆಗೆ ಕಾರಣವಾಗುತ್ತವೆ. ವಿನೆಗರ್ ಅದರ ಜೀವಿರೋಧಿ ಗುಣಗಳಿಗೆ ಹೆಸರುವಾಸಿಯಾಗಿದೆ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾದ ಅನೇಕ ತಳಿಗಳ ವಿರುದ್ಧ ಪರಿಣಾಮಕಾರಿಯಾಗಿದೆ.

ಉಗುರಿನ ಸೋಂಕು:

ಉಗುರುಗಳ ಮೇಲೆ ಶಿಲೀಂಧ್ರಗಳ ಸೋಂಕಿಗೆ ಸಹ ಇದು ಪ್ರಯೋಜನಕಾರಿಯಾಗಿದೆ. ಹತ್ತಿಯಿಂದ ಎಸಿವಿ ಅದ್ದಿ ಮತ್ತು 10-15 ನಿಮಿಷಗಳ ಕಾಲ ನಿಮ್ಮ ಉಗುರಿನ ಮೇಲೆ ಇರಿಸಿ. ಸೋಂಕಿನ ತೀವ್ರತೆಯನ್ನು ಅವಲಂಬಿಸಿ ಈ ಪ್ರಕ್ರಿಯೆಯನ್ನು ದಿನಕ್ಕೆ 3-4 ಬಾರಿ ಪುನರಾವರ್ತಿಸಬಹುದು.

ಕೂದಲುಗಳ ರಕ್ಷಣೆ:

ಆಪಲ್ ಸೈಡರ್ ವಿನೆಗರ್ ಅನ್ನು ಹಚ್ಚಿಕೊಂಡು ಹತ್ತಿಯ ಉಂಡೆಯನ್ನು ನಿಮ್ಮ ನೆತ್ತಿಯ ಚರ್ಮದ ಭಾಗಕ್ಕೆ ನಯವಾಗಿ ತಿಕ್ಕಿ. ನಂತರ ನಿಮ್ಮ ಕೂದಲನ್ನು ಕರವಸ್ತ್ರದೊಂದಿಗೆ ಬಿಗಿಯಾಗಿ ಕಟ್ಟಿಕೊಳ್ಳಿ. ಅರ್ಧ ಗಂಟೆಯ ನಂತರ ಬೆಚ್ಚನೆಯ ನೀರಿನಿಂದ ಕೂದಲನ್ನು ಸ್ವಚ್ಛಗೊಳಿಸಿ. ಈ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ವಾರಕ್ಕೆ ಎರಡು ಬಾರಿ ಅನುಸರಿಸಿದರೆ ನಿಮ್ಮ ತಲೆ ಹೊಟ್ಟು ಮಂಗಮಾಯವಾಗುತ್ತದೆ.

ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಗ್ಯಾಸ್ಟ್ರಿಕ್ ಸಮಸ್ಯೆ, ಹಲ್ಲುಗಳ ತೊಂದರೆ, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರು ಹಾಗೂ ಮಕ್ಕಳನ್ನು ಹೊಂದಿರುವ ತಾಯಿಯರಿಗೆ ಎಸಿವಿ ಸೂಕ್ತವಲ್ಲ. ಆದ್ದರಿಂದ ಒಮ್ಮೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ, ಬಳಿಕ ಉಪಯೋಗಿಸುವುದು ಸೂಕ್ತ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.