ಮೇಷ
ಇಂದು ನಿಮ್ಮ ಸ್ವತ್ತುಗಳ ಕುರಿತು ಅತ್ಯಂತ ಆತಂಕ ಹೊಂದಿರುತ್ತೀರಿ, ಮತ್ತು ಅವುಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಈ ಮನಸ್ಥಿತಿ ಯಾರೋ ಒಬ್ಬರಿಂದ ಉಂಟಾಗಿರಬಹುದು. ಪ್ರೀತಿಗೆ ಸಂಬಂಧಿಸಿದ ವ್ಯವಹಾರಗಳು ಉತ್ತಮ ಪ್ರಗತಿ ಕಾಣುತ್ತವೆ, ಮತ್ತು ನಿಮ್ಮ ವೈವಾಹಿಕ ಜೀವನ ಅರಳುತ್ತದೆ.
ವೃಷಭ
ಒಂದು ಕಿರುಪ್ರವಾಸದ ಸಾಧ್ಯತೆ ಇಂದು ನಿಮಗಿದೆ. ಅದಕ್ಕೆ ಹೊರಡುವ ಮುನ್ನ ನಿಮ್ಮ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಹೊಸ ವೇಳಾಪಟ್ಟಿ ಕುರಿತು ನೀವು ಸಂತೋಷವಾಗಿಲ್ಲ ಮತ್ತು ನಿಮ್ಮ ಮೊದಲ ಯೋಜನೆಗೆ ಬದ್ಧರಾಗಲು ನಿರ್ಧರಿಸುತ್ತೀರಿ, ದಿನದ ಅಂತ್ಯಕ್ಕೆ ನೀವು ವಿಚಲಿತ, ಅಹಿತದ ಭಾವನೆ ಹೊಂದುವ ಸಾಧ್ಯತೆ ಇದೆ. ಅಗತ್ಯವಿರುವ ಬದಲಾವಣೆಗಳಿಗೆ ನೀವು ಹೊಂದಿಕೊಂಡರೆ ಉತ್ತಮ.
ಮಿಥುನ
ನಿಮ್ಮ ಸುತ್ತಲಿನ ಜನರು ನಿಮ್ಮನ್ನು ನಾಯಕತ್ವದ ಮತ್ತು ಎಲ್ಲರನ್ನೂ ನಿರ್ದೇಶಿಸುವ ವ್ಯಕ್ತಿಯಾಗಿ ಕಾಣುತ್ತಾರೆ. ನಿಮ್ಮ ಹೃದಯ ಏನನ್ನು ಬಯಸುತ್ತದೋ ಅದನ್ನು ಪಡೆಯುವಲ್ಲಿ ನೀವು ಗಮನ ನೀಡಿರಬಹುದು. ಕೆಲ ಕಾಲದಿಂದ ಉತ್ತರ ದೊರೆಯದೆ ಉಳಿದ ಅನುಮಾನಗಳಿಗೆ ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನೀವು ಯಶಸ್ವಿಯಾಗಬಹುದು.
ಕರ್ಕಾಟಕ
ದೇವರ ಆಶೀರ್ವಾದ ನಿಮಗೆ ಇಂದು ಯಶಸ್ಸು ಗಳಿಸಲು ನೆರವಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಅವರ ಪೂರ್ಣಗೊಳ್ಳದ ಕಾರ್ಯಗಳನ್ನು ಮುಗಿಸಿ ಇತರರಿಗಿಂತ ಉತ್ತಮ ಸಾಧನೆ ಮಾಡಲು ಸುವರ್ಣ ಸಮಯವಾಗಿದೆ. ಕಲ್ಪನಾಶಕ್ತಿ ಕಾಡಿನ ಬೆಂಕಿಯಂತೆ ನಿಮ್ಮಲ್ಲಿ ಉರಿಯುತ್ತಿದೆ ಮತ್ತು ಇಂದು ಎಲ್ಲವೂ ನಿಮ್ಮ ದಾರಿಯಲ್ಲಿ ಮುನ್ನಡೆಯುವಂತೆ ಕಾಣುತ್ತಿವೆ.
ಸಿಂಹ
ನೀವು ಇಂದು ನಿಮ್ಮ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಕೆಲಸದಲ್ಲಿ ಕಳೆದರೂ, ನಿಮಗೆ ಆಶ್ಚರ್ಯಗೊಳಿಸಲು ಸಕಾರಾತ್ಮಕ ಫಲಿತಾಂಶಗಳು ಕಾಯುತ್ತಿವೆ. ಕಚೇರಿಯಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪ್ರಬುದ್ಧತೆ ಮತ್ತು ಅರ್ಥ ಮಾಡಿಕೊಳ್ಳುವುದು ಅಗತ್ಯ. ಈ ಪವಿತ್ರ ದಿನದಂದು ವ್ಯಾಪಾರವು ಮಹತ್ತರ ಪುರಸ್ಕಾರಗಳು ಹಾಗೂ ಲಾಭಗಳನ್ನು ತಂದುಕೊಡಲಿದೆ.
ಕನ್ಯಾ
ಇಲ್ಲಿಯವರೆಗೂ ನೀವು ತಡೆಹಿಡಿದಿದ್ದ ಭಾವನೆಗಳನ್ನು ಇಂದು ನೀವು ಹೊರತರಬಹುದು.ಇಂದು ನಿಮಗೆ ವಿಶ್ರಾಂತಿಯ ಅಗತ್ಯವಿದೆ.
ತುಲಾ
ವಿವಾಹಿತರು ಅಥವಾ ಪ್ರೀತಿಯಲ್ಲಿರುವ ನೀವು ಇಂದು ಒಳ್ಳೆಯ ಸಮಯ ಅನುಭವಿಸುತ್ತೀರಿ. ನಿಮ್ಮ ಜೀವನ ಸಂಗಾತಿಯೊಂದಿಗೆ ಡ್ರೈವ್ ಹೋಗುವ ಅಥವಾ ಡಿನ್ನರ್ಗೆ ಕರೆದೊಯ್ಯುವ ಮೂಲಕ ಹೆಚ್ಚು ಸಮಯ ಕಳೆದಂತೆ ನೀವು ಅವರಿಗೆ ಹತ್ತಿರವಾಗುತ್ತೀರಿ. ಇಂದು ನಿಮಗೆ ಸಂಪೂರ್ಣ ಸಂತೋಷ, ಹುರುಪು ಮತ್ತು ಆನಂದದ ದಿನವಾಗಿದೆ.
ವೃಶ್ಚಿಕ
ನೀವು ಆತುರಪಡದೆ ತಾಳ್ಮೆಯಿಂದ ಇದ್ದರೆ ನೀವು ಬಯಸಿದೆ ಫಲಿತಾಂಶ ನಿಮಗೆ ದೊರೆಯಲಿದೆ. ಆದರೆ ಎಚ್ಚರದಿಂದ ಇರಿ ನೀವು ಆತುರ ಮಾಡಿದಷ್ಟೂ ಫಲಿತಾಂಶ ತಡವಾಗಲಿದೆ.
ಧನು
ಆತಂಕದ ಮೋಡಗಳು ನಿಮ್ಮನ್ನು ಅಂಧಕಾರದಲ್ಲಿರಿಸುವ ಸಾಧ್ಯತೆ ಇದೆ. ಆ ಮೋಡಗಳನ್ನು ಸಿಡಿಸಲು ಸಿದ್ಧರಾಗಿ, ಮತ್ತು ನಿಮ್ಮ ತೊಂದರೆಗಳನ್ನು ಪರಿಹರಿಸಲು ನೆರವಾಗುವ ನಿರ್ಧಾರವನ್ನು ತೆಗೆದುಕೊಳ್ಳಿ. ನೀವು ಸನ್ನಿವೇಶ ಸಹಜಸ್ಥಿತಿಗೆ ಬರಲು ಬಯಸಿದರೆ ಅದು ಕೊಂಚ ತಡವಾಗಬಹುದು. ಆದಾಗ್ಯೂ, ದಿನದ ಅಂತ್ಯಕ್ಕೆ ಅನುಕೂಲ ಪಡೆಯಲಿದ್ದಿರಿ.
ಮಕರ
ಉನ್ನತ ಶಿಕ್ಷಣಕ್ಕಾಗಿ ನೀವು ವಿದೇಶಕ್ಕೆ ಹಾರಾಟ ಯೋಜಿಸುತ್ತಿದ್ದರೆ, ಇಂದು ದಾಖಲೆಗಳು ಮತ್ತಿತರೆ ಸಿದ್ಧತೆಗಳನ್ನು ಪ್ರಾರಂಭಿಸಿ. ನೀವು ವಿದ್ಯಾರ್ಥಿಯಾಗಿರಲಿ ಅಥವಾ ಇಲ್ಲದೇ ಇರಲಿ, ಈ ಅನುಕೂಲಕರ ದಿನದಲ್ಲಿ, ನೀವು ಮಾಡಬೇಕಾದುದು ಆದ್ಯತೆಯ ಪಟ್ಟಿಯನ್ನು ಸಿದ್ಧಪಡಿಸುವುದು, ಅದನ್ನು ಅನುಸರಿಸುವುದು ಮತ್ತು ಒಂದಾದ ನಂತರ ಒಂದರಂತೆ ನಿಮ್ಮ ಕೆಲಸಗಳನ್ನು ಪೂರೈಸುವುದು. ನೀವು ಷೇರು ಮಾರುಕಟ್ಟೆಯಲ್ಲಿ ತೊಡಗಿದ್ದರೆ, ಅನುಕೂಲಕರ ದಿನ ಮುಂದಿರುವುದನ್ನು ನಿರೀಕ್ಷಿಸಿ.
ಕುಂಭ
ನಿಮ್ಮ ದಾರಿಯಲ್ಲಿ ಅಡ್ಡಿಯನ್ನು ಎದುರಿಸುತ್ತಿದ್ದೀರಾ...? ನಿಮ್ಮ ಮಾರ್ಗದಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಿ, ಹಾಗೂ ಮತ್ತೊಮ್ಮೆ ಸರಾಗ ಮತ್ತು ಸ್ಪಷ್ಟ ರಸ್ತೆ ನಿಮಗೆ ಕಾಣುತ್ತದೆ. ಹಿಂದೆ ನೀವು ಮಾಡಿದ ಪ್ರಯತ್ನಗಳು ಇಂದು ಫಲ ನೀಡಲು ಸಜ್ಜಾಗಿವೆ. ನಿಮ್ಮ ಪ್ರಸ್ತುತದ ಸಾಧನೆಗಳ ಕುರಿತು ಸಂತೃಪ್ತರಾಗಬೇಡಿ. ನೀವು ಕಠಿಣ ಪರಿಶ್ರಮ ಪಡುವಲ್ಲಿ ಇನ್ನೂ ದೂರ ಸಾಗಬೇಕಾಗಿದೆ.
ಮೀನ
ಪ್ರೀತಿಯಲ್ಲಿರುವವರಿಗೆ, ಇಂದು ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಉತ್ತಮ ದಿನ. ಪ್ರೀತಿಯ ನಿರೀಕ್ಷೆಯಲ್ಲಿರುವವರು ನೀವು ಬಹಳ ದಿನಗಳಿಂದ ಇಷ್ಟಪಡುತ್ತಿದ್ದವರ ಬಳಿ ನಿಮ್ಮ ವಿಚಾರವನ್ನು ಹೇಳಿಕೊಳ್ಳಲು ಒಳ್ಳೆಯ ಸಮಯ.