ಮೇಷ
ಇಂದು ನಿಮ್ಮ ಪ್ರೀತಿಪಾತ್ರರನ್ನು ಪ್ರಭಾವಿಸಲು ಪ್ರಯತ್ನಿಸುತ್ತೀರಿ. ಗೊತ್ತಿಲ್ಲದ ಕಾರಣಗಳಿಗೆ ನಿಮ್ಮ ಮಿತ್ರರು ಹಾಗೂ ಬಂಧುಗಳ ಕುರಿತು ಹೆಚ್ಚೇನೂ ಸಂತೋಷ ಹೊಂದಿರುವುದಿಲ್ಲ, ಏನೇ ಆದರೂ ನೀವು ರಾತ್ರಿಯಲ್ಲಿ ಜನರೊಂದಿಗೆ ಬೆರೆಯುವ ಮತ್ತು ಹೊಸಮಿತ್ರರನ್ನು ಮಾಡಿಕೊಳ್ಳುವ ಭರವಸೆ ಹೊಂದಬಹುದು.
ವೃಷಭ
ಈ ದಿನ ನಿಮಗೆ ನಿರಾಸೆಗೊಳಿಸುವ ಆಶ್ಚರ್ಯಗಳೊಂದಿಗೆ ಕೂಡಿರುತ್ತದೆ. ಯಾವುದೂ ಯೋಜಿಸಿದಂತೆ ಮತ್ತು ನಿರೀಕ್ಷಿಸಿದಂತೆ ನಡೆಯುವುದಿಲ್ಲ. ತೀಕ್ಷ್ಣವಾದ ತಿರುವುಗಳಿರುತ್ತವೆ ಮತ್ತು ಇಡೀ ದಿನ ಕಷ್ಟಗಳಿರುತ್ತವೆ. ಆದರೆ ನೀವು ಸ್ಥಿರವಾಗಿ ಮತ್ತು ಶಾಂತವಾಗಿದ್ದು ಮುನ್ನಡೆಯುತ್ತೀರಿ.
ಮಿಥುನ
ನೀವು ಇಂದು ಸಂಪರ್ಕಕ್ಕೆ ಬರುವ ಜನರಿಗೆ ನಿಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಶಕ್ತರಾಗುತ್ತೀರಿ. ಇದು ಅನುಮೋದನೆ ಮತ್ತು ಸಂತೃಪ್ತಿ ನೀಡುತ್ತದೆ. ಈ ದಿನ ಒಟ್ಟಾರೆ ವಿನೋದ ಮತ್ತು ಮನರಂಜನೆಯಿಂದ ಕೂಡಿರುತ್ತದೆ.
ಕರ್ಕಾಟಕ
ಕೆಲಸದಲ್ಲಿ ಮಹತ್ತರ ಸಂಪರ್ಕಗಳನ್ನು ಹೊಂದುವ ಸಾಮರ್ಥ್ಯದಿಂದ ನಿಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದರಲ್ಲಿ ಯಶಸ್ಸು ಕಾಣುತ್ತೀರಿ. ಆದಾಗ್ಯೂ, ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ನೀವು ಎಚ್ಚರವಾಗಿರಬೇಕು. ವ್ಯವಹಾರ ಮುಗಿಸುವ ಮುನ್ನ ಅದರ ವಿವರಗಳನ್ನು ಸರಿಯಾಗಿ ಓದಿಕೊಳ್ಳುವುದು ಮುಖ್ಯ.
ಸಿಂಹ
ಮರುಅನ್ವೇಷಣೆ ಮತ್ತು ಪುನರುಜ್ಜೀವನ ಈ ಎರಡು ಪದಗಳು ಇಂದು ನಿಮ್ಮ ವಿಚಾರಪರತೆಯನ್ನು ನಿರ್ದೇಶಿಸುತ್ತವೆ. ಬದಲಾವಣೆ ಎಂದರೆ ಸದಾ ಹೊಸದಕ್ಕೆ ಸಂಬಂಧಿಸಿದಾಗಿರಬೇಕು ಎಂದೇನೂ ಅಲ್ಲ, ಹಿಂದಕ್ಕೆ ಹೊರಳುನೋಟ ಕೂಡಾ ಸಮಾನವಾಗಿ ಜ್ಞಾನ ನೀಡುವಂತಹುದು.
ಕನ್ಯಾ
ತರ್ಕ ಹಾಗೂ ಭಾವನೆಗಳು, ನಿಮ್ಮ ಬಾಂಧವ್ಯದಲ್ಲಿ ಇಂದು ಪ್ರಭಾವ ಬೀರುತ್ತವೆ. ಭಾವನಾತ್ಮಕವಾಗಿ ನೀವು ಕೊಂಚ ಅನುಮಾನದ ಭಾವನೆ ಅನುಭವಿಸುತ್ತೀರಿ ಮತ್ತು ಇದು ನಿಮ್ಮ ಭಾವನೆಗಳು ಹಾಗೂ ನೀವು ವಾಸ್ತವವಾಗಿ ಏನನ್ನು ನಿರೀಕ್ಷಿಸಿದ್ದರೋ ಅದರ ನಡುವೆ ಓಲಾಡುತ್ತದೆ. ಆದಾಗ್ಯೂ, ನೀವು ಇತರರ ದೃಷ್ಟಿಕೋನಗಳ ಮೇಲೆ ಆಧಾರಪಡುವುದಕ್ಕಿಂತ ನಿಮ್ಮ ಆಂತರಿಕ ಧ್ವನಿಯ ಮೇಲೆ ಆಧಾರಪಡುತ್ತೀರಿ.
ತುಲಾ
ನಿಮ್ಮಲ್ಲಿನ ಭಾವಾತಿರೇಕ ಮುಂಬದಿಗೆ ಬರುತ್ತದೆ. ನೀವು ಇಂದು ಮಾಡುವ ಕೆಲಸದಲ್ಲಿ ನಿಷ್ಠೆ ಅಥವಾ ಕುಟುಂಬಕ್ಕೆ ಬದ್ಧತೆ ಎಲ್ಲದರಲ್ಲೂ ನೀವು ಯಶಸ್ವಿಯಾಗುತ್ತೀರಿ.. ವ್ಯಾಪಾರದಲ್ಲಿ ನೀವು ಶ್ರೇಷ್ಠವಾದುದನ್ನು ನೀಡುವ ಮೂಲಕ ಸ್ಪರ್ಧೆ ಒಡ್ಡುತ್ತೀರಿ ಹಾಗೂ ಅದರಲ್ಲಿಯೂ ಯಶಸ್ಸು ಗಳಿಸುತ್ತೀರಿ.
ವೃಶ್ಚಿಕ
ನಿಮ್ಮ ತಾರೆಗಳು ಇಂದು ಹಣದ ಅತಿಯಾದ ಖರ್ಚು ಸೂಚಿಸುತ್ತಿವೆ. ಅದನ್ನು ನೀವು ನಿಮ್ಮ ಪ್ರೀತಿಪಾತ್ರರಿಗೆ ಮಾಡುತ್ತೀರಿ. ಹಣ ಪ್ರೀತಿಪಾತ್ರರಿಗಿಂತ ಹೆಚ್ಚೇ..? ನಿಮ್ಮ ಪ್ರೀತಿಪಾತ್ರರನ್ನು ಸಂತೋಷಗೊಳಿಸಲು ನಾನಾ ಪ್ರಯತ್ನ ಮಾಡುತ್ತೀರಿ.
ಧನು
ನಿಮ್ಮ ಗ್ರಹಗತಿಗಳು ಇಂದು ಪ್ರಬಲವಾಗಿವೆ ಮತ್ತು ನಿಮಗೆ ಅದ್ಭುತ ದಿನ ಮುಂದಿದೆ. ನೀವು ವೃತ್ತಿಪರರಾಗಿದ್ದೀರಿ ಇದಕ್ಕೆ ಮೆಚ್ಚುಗೆಯನ್ನೂ ಪಡೆಯುತ್ತೀರಿ. ಕೆಲಸದಲ್ಲಿ ನಿಮಗೆ ಎಲ್ಲಾ ಸಮಸ್ಯೆಗಳನ್ನೂ ದಾಟಿ ಹೋಗುವ ಜಾಣ್ಮೆ ಇದೆ. ನಿಮ್ಮ ಈ ವಿಧಾನವು ಖಂಡಿತ ನಿಮ್ಮ ಸುತ್ತಲಿನ ಜನರ ಹೃದಯಗಳನ್ನು ಗೆಲ್ಲುತ್ತದೆ.
ಮಕರ
ಕೆಲಸದಲ್ಲಿ ನಿಮಗೆ ಮಾನ್ಯತೆ ಮತ್ತು ಪುರಸ್ಕಾರಗಳು ಕಾಯುತ್ತಿವೆ, ಮತ್ತು ಬಹಳಷ್ಟು ಸಂದರ್ಭಗಳಲ್ಲಿ ಆಗುವಂತೆ ಸಹೋದ್ಯೋಗಿಗಳು ನಿಮ್ಮ ಸಂಪತ್ತು ಮತ್ತು ಪುರಸ್ಕಾರಗಳ ಕುರಿತು ಮತ್ಸರ ಪಡುವುದಿಲ್ಲ. ಅವರು ಹೊಸ ಹಾಗೂ ಸವಾಲಿನ ಯೋಜನೆಗಳನ್ನು ಕೈಗೊಳ್ಳಲು ಅತ್ಯಂತ ಅಗತ್ಯವಾದ ಉತ್ತೇಜನ ನೀಡುತ್ತಾರೆ. ಉದ್ಯೋಗ ಬದಲಿಸಲು ಬಯಸಿರುವವರು, ಕೊಂಚ ತಾಳ್ಮೆಯಿಂದಿರಿ, ಇದು ನಿಮಗೆ ಸರಿಯಾದ ಕಾಲವಲ್ಲ.
ಕುಂಭ
ಸರ್ವಶಕ್ತ ನಿಮಗೆ ನೋವುಗಳನ್ನು ಕೊಟ್ಟರೆ, ಆತ ನಿಮಗೆ ಸಂತೋಷದ ಕೃಪೆಯನ್ನೂ ನೀಡುತ್ತಾನೆ. ನೀವು ಇಂದು ಮಾಡಬೇಕಾಗಿರುವ ಕೆಲಸಗಳ ಪಟ್ಟಿಯಿಂದ ದಿನವನ್ನು ಪ್ರಾರಂಭಿಸುತ್ತೀರಿ, ಆದರೆ ಅದೃಷ್ಟವಶಾತ್ ನೀವು ಅವುಗಳನ್ನು ಒಂದರ ನಂತರ ಒಂದರಂತೆ ಪೂರೈಸುತ್ತೀರಿ. ಅದು ನಿಮ್ಮನ್ನು ಖಾಲಿಯಾಗಿಸುತ್ತದೆ, ಆದ್ದರಿಂದ ದಿನದ ನಂತರದಲ್ಲಿ ಬಿಸಿನೀರಿನ ಸ್ನಾನ ಮಾಡಿ ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯಿರಿ.
ಮೀನ
ನೀವು ಸ್ವಭಾವತಃ ಮುಂಗೋಪಿ ಅಥವಾ ಅಸೂಯೆ ಉಳ್ಳವರಲ್ಲ. ಆದರೆ, ಇಂದು ಈ ಎರಡನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳುವುದು ಒಳ್ಳೆಯದು. ಯಾರೋ ಒಬ್ಬರು ಇಂದು ನಿಮ್ಮ ಘನತೆಗೆ ಧಕ್ಕೆಯುಂಟು ಮಾಡಬಹುದು ಅಥವಾ ನಿಮ್ಮ ಹೆಸರು ಕೆಡಿಸಬಹುದು. ಆದರೆ, ಪ್ರಚೋದನೆಯನ್ನು ಎದುರಿಸುವ ಅತ್ಯುತ್ತಮ ವಿಧಾನವೆಂದರೆ ತಾಳ್ಮೆ ಕಳೆದುಕೊಳ್ಳದೆ ಸಹಜವಾಗಿ ಮುಂದುವರೆಯುವುದು.