ಮೇಷ
ನೀವು ಏಕಾಂಗಿಯಾಗಿರಬಹುದು ಆದರೆ ಒಂಟಿಯಲ್ಲ. ನಿಮ್ಮ ಭಾವನೆಗಳನ್ನು ಪ್ರೀತಿಪಾತ್ರರೊಂದಿಗೆ ವ್ಯಕ್ತಪಡಿಸಲು ಕಾಯುತ್ತಿದ್ದೀರಿ. ಸಂಜೆ ಸುಮಧುರ ಸಂಗೀತ ಕೇಳುತ್ತಾ ಅಥವಾ ಸ್ನೇಹಿತರೊಂದಿಗೆ ಕಾಲ ಕಳೆಯಿರಿ.
ವೃಷಭ
ಇಂದು ನೀವು ಸಂತೋಷ ಮತ್ತು ನೋವು ಎರಡನ್ನೂ ಜೊತೆ ಜೊತೆಯಲ್ಲಿ ಅನುಭವಿಸಲಿದ್ದೀರಿ. ಮಧ್ಯಾಹ್ನದ ವೇಳೆಗೆ ಮನೆಕೆಲಸಗಳು ನಿಮಗೆ ಭಾರವಾಗಬಹುದು. ದಿನದ ನಂತರದಲ್ಲಿ ನಿಮ್ಮ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯದಿಂದ ನೀವು ಬಯಸಿದ್ದನ್ನು ಸಾಧಿಸಲು ಶಕ್ತರಾಗುತ್ತೀರಿ. ಸಂತೋಷ ನಿಮ್ಮ ಆತ್ಮ ಸಂಗಾತಿಯ ಪ್ರೀತಿ ಮತ್ತು ಜೊತೆಯಲ್ಲಿದೆ.
ಮಿಥುನ
ನಿಮ್ಮ ಇಮೇಜ್ ಮತ್ತು ಸಮಾಜದಲ್ಲಿ ಸ್ಥಾನಮಾನದ ಕುರಿತು ತಲೆ ಕೆಡಿಸಿಕೊಳ್ಳಬೇಕೇ ಹೊರತು ಇತರರ ಕಾರ್ಯಗಳ ಕುರಿತು ತಲೆ ಕೆಡಿಸಿಕೊಳ್ಳಬೇಕಿಲ್ಲ. ರೀಟೇಲ್ ವಹಿವಾಟಿನಲ್ಲಿರುವವರು ಇಂದು ಅನಿರೀಕ್ಷಿತ ಲಾಭಗಳನ್ನು ಕಾಣುತ್ತಾರೆ.
ಕರ್ಕಾಟಕ
ನಿಮ್ಮದೇ ಯಶಸ್ಸಿನ ದಾರಿ ಕಂಡುಕೊಳ್ಳುತ್ತೀರಿ. ನೀವು ಜನರಿಂದ ಗೌರವ ಮತ್ತು ಮಾನ್ಯತೆ ಪಡೆಯುತ್ತೀರಿ. ವ್ಯಾಪಾರ ವಿರೋಧಿಗಳು ಮತ್ತು ಕಾಯಿಲೆ ನಿಮ್ಮನ್ನು ಕಂಗೆಡಿಸುತ್ತವೆ. ಶತ್ರುಗಳ ಕಾರ್ಯಗಳ ಬಗ್ಗೆ ಎಚ್ಚರವಾಗಿರಿ. ನಿಮ್ಮ ಸನ್ನದ್ಧತೆ ಅವರ ಯೋಜನೆ ನಾಶ ಮಾಡುತ್ತದೆ.
ಸಿಂಹ
ಕಷ್ಟಪಟ್ಟು ಕೆಲಸ ಮಾಡುವುದು ಅಥವಾ ಕೆಲಸ ಮಾಡಲು ಕಷ್ಟಪಡುವುದು ಈ ಎರಡರ ನಡುವೆ ಬಹಳ ವ್ಯತ್ಯಾಸವಿದೆ. ನೀವು ಇಂದು ಕಠಿಣವಾಗಿ ಕೆಲಸ ಮಾಡಲು ಅದರಲ್ಲೂ ನೀವು ಬಯಸಿದ ಯಶಸ್ಸು ಪಡೆಯುವಲ್ಲಿ ಜಾಣರಾಗಿರುತ್ತೀರಿ. ಕಠಿಣ ಪರಿಶ್ರಮ ಖಂಡಿತ ನಿಮಗೆ ಪ್ರತಿಫಲ ನೀಡುತ್ತದೆ.
ಕನ್ಯಾ
ನಿಮ್ಮ ಜವಾಬ್ದಾರಿಗಳು ಮತ್ತು ಪ್ರಸ್ತುತ ಕರ್ತವ್ಯಗಳ ನಡುವೆ ಗೊಂದಲ ಅನುಭವಿಸುತ್ತಿರಬಹುದು. ಹೊಸ ಸಂಪರ್ಕಗಳು ಬಹಳ ಉಪಯುಕ್ತವಾಗಿವೆ. ಕುಟುಂಬ ಹಾಗೂ ನಿಮ್ಮ ಮಿತ್ರರು ನಿಮ್ಮ ಕಷ್ಟಕ್ಕೆ ಸಹಾಯ ಮಾಡಲಿದ್ದಾರೆ.
ತುಲಾ
ಜನರು ನಿಮ್ಮ ಸ್ನೇಹಪರ ಮತ್ತು ಒಳ್ಳೆಯತನದ ಅನುಕೂಲ ಪಡೆಯಲು ಪ್ರಯತ್ನಿಸುತ್ತಾರೆ. ಸಣ್ಣ ವಿಷಯಗಳು ನಿಮ್ಮನ್ನು ಕೊಂಚ ಆತಂಕದಲ್ಲಿರಿಸುತ್ತವೆ. ನಿಮ್ಮ ಕೋಪ ಹೆಚ್ಚಿಸುತ್ತವೆ. ಮನಸ್ಸನ್ನು ಸ್ಥಿರವಾಗಿರಿಸಿಕೊಂಡರೆ ನಿಮ್ಮ ಕಳೆದುಹೋದ ಶಾಂತಿಯನ್ನು ಮರಳಿ ಪಡೆಯುತ್ತೀರಿ.
ವೃಶ್ಚಿಕ
ಇಂದು ನೀವು ಆರೋಗ್ಯದ ಕಡೆ ಹೆಚ್ಚು ಗಮನ ನಿಡಬೇಕು. ಅನಿಯಮಿತ ತಿನ್ನುವ ಅಭ್ಯಾಸಗಳಿಂದ ನಿಮ್ಮ ಆರೋಗ್ಯ ಕೆಡಬಹುದು. ಆದ್ದರಿಂದ ಒಳ್ಳೆಯ ಆಹಾರ ತಿನ್ನುವ ಮೂಲಕ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.
ಧನು
ಯಾವುದೇ ಕೆಲಸ ನೀಡಿದರೂ ನೀವು ಜವಾಬ್ದಾರಿಯಿಂದ ಅದನ್ನು ನಿಭಾಯಿಸಲಿದ್ದೀರಿ. ನಿಮ್ಮ ಮನಸ್ಸಿಗೆ ಅನುಗುಣವಾಗಿ ನಡೆಯಿರಿ. ದೇವರ ಆಶೀರ್ವಾದ ನಿಮ್ಮ ಮೇಲಿದೆ. ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಿ.
ಮಕರ
ಹೆಚ್ಚಾಗುತ್ತಿರುವ ಕೆಲಸದ ಒತ್ತಡ ಮತ್ತು ಜವಾಬ್ದಾರಿಗಳು ನಿಮ್ಮ ಶಕ್ತಿಯನ್ನು ಹೀರುತ್ತದೆ. ಆದರೆ ನಿಮ್ಮ ಉತ್ಸಾಹವನ್ನಲ್ಲ. ದಿನದ ದ್ವಿತೀಯಾರ್ಧ ನಿಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಹೋರಾಟ ಮಾಡುವುದರಿಂದ ನೀವು ದಣಿಯಲಿದ್ದೀರಿ. ಜಾಣ್ಮೆಯಿಂದ ಮತ್ತು ಸರಿಯಾದ ಕ್ರಮಗಳ ಮೂಲಕ ನೀವು ವಿಜೇತರಾಗುತ್ತೀರಿ.
ಕುಂಭ
ನೀವು ಅಂದುಕೊಂಡ ಕೆಲಸ ಮಾಡಲು ಇಂದು ಒಳ್ಳೆಯ ದಿನ. ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿ. ಆದರೂ ಜನರು ನಿಮ್ಮನ್ನು ಹಗುರವಾಗಿ ಕಾಣಬಹುದು. ಯಾವುದಕ್ಕೂ ಗಮನ ಕೊಡದೆ ಮುಂದುವರೆಯಿರಿ.
ಮೀನ
ನಿಮ್ಮ ಹೃದಯಕ್ಕೆ ಹತ್ತಿರವಿರುವವರ ಬಗ್ಗೆ ನೀವು ಭಾವನಾತ್ಮಕವಾಗುತ್ತೀರಿ. ನೀವು ಅವರ ಭಾವನೆಗಳಿಗೆ ಬೆಲೆ ಕೊಟ್ಟರೆ ಒಳ್ಳೆಯದು. ನಿಮ್ಮನ್ನು ತಿಳಿದಿರುವ ಜನರು ನಿಮ್ಮ ಗುಣವನ್ನು ಇಷ್ಟಪಡುತ್ತಾರೆ.