ETV Bharat / bharat

15-18 ವರ್ಷದವರಿಗೆ ಕೋವ್ಯಾಕ್ಸಿನ್ ಲಸಿಕೆ​ ಮಾತ್ರ ಸೂಕ್ತ: ಆರೋಗ್ಯ ಕಾರ್ಯಕರ್ತರಿಗೆ ಭಾರತ್ ಬಯೋಟೆಕ್​ ಸೂಚನೆ

2 ರಿಂದ18 ವರ್ಷ ವಯಸ್ಸಿನವರಿಗೆ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿಗಾಗಿ ಸಂಪೂರ್ಣ ಕ್ಲಿನಿಕಲ್ ಟ್ರಯಲ್ಸ್​ ಮೌಲ್ಯಮಾಪನದ ಆಧಾರದ ಮೇಲೆ ಕೋವಾಕ್ಸಿನ್ ಅನುಮೋದನೆ ಪಡೆದುಕೊಂಡಿದೆ. ಪ್ರಸ್ತುತ ಇದು ಭಾರತದಲ್ಲಿ ಮಕ್ಕಳಿಗಾಗಿ ಅನುಮೋದಿಸಲಾದ ಏಕೈಕ ಕೋವಿಡ್​ 19 ಲಸಿಕೆಯಾಗಿದೆ ಎಂದು ಲಸಿಕಾ ತಯಾರಿಕಾ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Bharat Biotech
15-18 ವರ್ಷದವರಿಗೆ ಕೋವ್ಯಾಕ್ಸಿನ್ ಲಸಿಕೆ​
author img

By

Published : Jan 8, 2022, 4:30 AM IST

ಹೈದರಾಬಾದ್: 15-18 ವಯಸ್ಸಿನ ಮಕ್ಕಳಿಗೆ ಕೋವಿಡ್ -19 ಲಸಿಕೆಗ ನೀಡಲಾಗುತ್ತಿದೆ ಎಂಬ ವರದಿಗಳು ನಮ್ಮ ಗಮನಕ್ಕೆ ಬಂದಿದ್ದು, ಈ ನಿರ್ದಿಷ್ಟ ವಯಸ್ಸಿನ ವರ್ಗಕ್ಕೆ ಕೋವ್ಯಾಕ್ಸಿನ್ ದೇಶದಲ್ಲಿ ಏಕೈಕ ಅನುಮೋದಿತ ಕೋವಿಡ್ ಲಸಿಕೆಯಾಗಿದೆ. ಹಾಗಾಗಿ ಬೇರೆ ಯಾವುದೇ ಲಸಿಕೆಗಳನ್ನು ಮಕ್ಕಳಿಗೆ ನೀಡದಂತೆ ಎಚ್ಚರ ವಹಿಸಬೇಕೆಂದು ಆರೋಗ್ಯ ಕಾರ್ಯಕರ್ತರಿಗೆ ಭಾರತ್​ ಬಯೋಟೆಕ್​ ಮನವಿ ಮಾಡಿದೆ.

"15-18 ವರ್ಷ ವಯಸ್ಸಿನವರಿಗೆ ಇತರೆ ಕೋವಿಡ್​ 19 ಲಸಿಕೆಗಳನ್ನು ನೀಡಲಾಗುತ್ತಿದೆ ಎಂಬ ಹಲವಾರು ವರದಿಗಳನ್ನು ನಾವು ಸ್ವೀಕರಿಸಿದ್ದೇವೆ. ಆದರೆ ಈ ವಯೋಮಾನದ ವರ್ಗದವರಿಗೆ ಕೋವ್ಯಾಕ್ಸಿನ್ ಮಾತ್ರ ನೀಡಬೇಕು, ಈ ವಿಚಾರದಲ್ಲಿ ಆರೋಗ್ಯ ಕಾರ್ಯಕರ್ತರು ಹೆಚ್ಚು ಜಾಗರೂಕರಾಗಿರಬೇಕೆಂದು ನಾವು ವಿನಂತಿಸುತ್ತೇವೆ" ಎಂದು ಭಾರತ್ ಬಯೋಟೆಕ್ ಹೇಳಿಕೆ ಬಿಡುಗಡೆ ಮಾಡಿದೆ.

2 ರಿಂದ18 ವರ್ಷ ವಯಸ್ಸಿನವರಿಗೆ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿಗಾಗಿ ಸಂಪೂರ್ಣ ಕ್ಲಿನಿಕಲ್ ಟ್ರಯಲ್ಸ್​ ಮೌಲ್ಯಮಾಪನದ ಆಧಾರದ ಮೇಲೆ ಕೋವಾಕ್ಸಿನ್ ಅನುಮೋದನೆ ಪಡೆದುಕೊಂಡಿದೆ. ಪ್ರಸ್ತುತ ಇದು ಭಾರತದಲ್ಲಿ ಮಕ್ಕಳಿಗಾಗಿ ಅನುಮೋದಿಸಲಾದ ಏಕೈಕ ಕೋವಿಡ್​ 19 ಲಸಿಕೆಯಾಗಿದೆ ಎಂದು ಲಸಿಕಾ ತಯಾರಿಕಾ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜನವರಿ 3, 2022 ರಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೀಕರಣ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈಗಾಗಲೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ವಯೋಮಾನದವರಿಗೆ 'ಕೋವಾಕ್ಸಿನ್' ಲಸಿಕೆಯನ್ನು ಮಾತ್ರ ನೀಡಬೇಕೆಂದು ಮತ್ತು ಇದೇ ಲಸಿಕೆಯನ್ನು ಪೂರೈಸುವುದಾಗಿ ಎಂದು ತಿಳಿಸಿದೆ.

ಇದನ್ನು ಓದಿ:ಕೊವ್ಯಾಕ್ಸಿನ್ ಪಡೆದ ಮಕ್ಕಳಿಗೆ ನೋವು ನಿವಾರಕ, ಪ್ಯಾರಸೆಟಮಲ್​ ನೀಡಬಹುದೇ: ಭಾರತ್​ ಬಯೋಟೆಕ್ ಹೇಳಿದ್ದೇನು?​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.