ETV Bharat / bharat

ನಾಸಿಕದ ಮೂಲಕ ನೀಡುವ ಲಸಿಕೆಯ 3ನೇ ಹಂತದ ಪ್ರಯೋಗ ಪೂರ್ಣ: ಭಾರತ್‌ ಬಯೋಟೆಕ್ - ಕೋವಿಡ್ 19 ಮೂಗಿನ ಲಸಿಕೆ

ಮೂಗಿನ ಮೂಲಕ ಹಾಕುವ ಕೋವಿಡ್-19 ಲಸಿಕೆಯ ಪ್ರಯೋಗವನ್ನು ಪೂರ್ಣಗೊಳಿಸಿದ್ದೇವೆ. ಅಂಕಿ-ಅಂಶಗಳ ವಿಶ್ಲೇಷಣೆ ನಡೆಯುತ್ತಿದೆ ಎಂದು ಭಾರತ್ ಬಯೋಟೆಕ್‌ನ ಅಧ್ಯಕ್ಷ ಡಾ.ಕೃಷ್ಣ ಎಲಾ ತಿಳಿಸಿದ್ದಾರೆ.

ಕೃಷ್ಣ ಎಲಾ
ಕೃಷ್ಣ ಎಲಾ
author img

By

Published : Jun 19, 2022, 10:08 AM IST

ನವದೆಹಲಿ: ವಿಶ್ವವ್ಯಾಪಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿರುವ ಕೊರೊನಾ ವೈರಸ್​ ನಿಯಂತ್ರಣಕ್ಕೆ ಹೊಸ ಹೊಸ ವೈದ್ಯಕೀಯ ಪ್ರಯೋಗಗಳು ನಡೆಯುತ್ತಿವೆ. ಇದೇ ಮೊದಲ ಬಾರಿಗೆ ಮೂಗಿನ ಮೂಲಕ ಕೋವಿಡ್ ಲಸಿಕೆ ನೀಡುವ ಸಂಶೋಧನೆಯಲ್ಲಿ ಭಾರತ್ ಬಯೋಟೆಕ್ ಒಂದು ಹೆಜ್ಜೆ ಮುಂದಿಟ್ಟಿದೆ.

'ಕೋವಿಡ್-19 ಮೂಗಿನ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಪೂರ್ಣಗೊಳಿಸಿದ್ದೇವೆ. ಇದೀಗ ಅಂಕಿ-ಅಂಶಗಳ ವಿಶ್ಲೇಷಣೆ ನಡೆಯುತ್ತಿದೆ. ಮುಂದಿನ ತಿಂಗಳ ಹೊತ್ತಿಗೆ ಅಂತಿಮ ವರದಿಯನ್ನು ಭಾರತೀಯ ಔಷಧೀಯ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ಪ್ರಾಧಿಕಾರವು ಅನುಮತಿ ನೀಡಿದ ನಂತರ ಅಧಿಕೃತವಾಗಿ ಲಸಿಕೆ ಬಿಡುಗಡೆ ಮಾಡಲಾಗುತ್ತದೆ. ಇದು ಜಗತ್ತಿನ ಮೊದಲ ನಾಸಿಕದ ಮೂಲಕ ನೀಡುವ ಕೋವಿಡ್ ಲಸಿಕೆ ಆಗಲಿದೆ' ಎಂದು ಭಾರತ್ ಬಯೋಟೆಕ್‌ನ ಅಧ್ಯಕ್ಷ ಡಾ.ಕೃಷ್ಣ ಎಲಾ ಹೇಳಿದರು.

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ (DCGI) ವಿಷಯ ತಜ್ಞರ ಸಮಿತಿಯು (SEC) ಭಾರತ್ ಬಯೋಟೆಕ್‌ಗೆ ಮೂಗಿನ ಲಸಿಕೆಗೆ ಸಂಬಂಧಿಸಿದಂತೆ ನಡೆಸುತ್ತಿರುವ 3ನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ತಾತ್ವಿಕ ಅನುಮೋದನೆ ನೀಡಿತ್ತು.

ಪ್ರಸ್ತುತ ಭಾರತದಲ್ಲಿ ಕೊರೊನಾ ವಿರುದ್ಧ ಕೋವಿಶೀಲ್ಡ್, ಕೋವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಲಸಿಕೆಗಳನ್ನು ವಿತರಿಸಲಾಗುತ್ತಿದೆ. ಕೋವ್ಯಾಕ್ಸಿನ್ ಅನ್ನು 28 ದಿನದ ಮಲ್ಟಿ-ಡೋಸ್ ವೈಲ್ ಪಾಲಿಸಿ (MDVP) ಅಡಿಯಲ್ಲಿ ಬಳಸಲು DCGI ಮತ್ತು WHO ಎಮರ್ಜೆನ್ಸಿ ಯೂಸ್ ಲಿಸ್ಟಿಂಗ್ (WHO EUL) ಅನುಮೋದಿಸಿದೆ.

ಇದನ್ನೂ ಓದಿ: ಮೂಗಿನ ಮೂಲಕ ಹಾಕುವ ಲಸಿಕೆ ಪ್ರಯೋಗ: Phase 2/3ಗೆ ಅನುಮೋದನೆ ಪಡೆದ ಭಾರತ್ ಬಯೋಟೆಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.